ಅಲೆಮಾರಿಯ ದಿನಚರಿ

Author : ಅಬ್ದುಲ್ ರಶೀದ್

Pages 196

₹ 120.00




Year of Publication: 2005
Published by: ಬಿಸಿಲಕೋಲು ಪ್ರಕಾಶನ
Address: 300, 3ನೇ ಮುಖ್ಯರಸ್ತೆ, ಕೆ.ಆರ್‌. ವಿಸ್ತರಣೆ, ತಿಪಟೂರು

Synopsys

ಕವಿ, ಲೇಖಕರಾದ ಅಬ್ದುಲ್ ರಶೀದ್ ಅವರ ಪ್ರವಾಸ ಕಥನ ’ ಅಲೆಮಾರಿಯ ದಿನಚರಿ’ ಕೃತಿಯು ಹಲವು ಆಯಾಮಗಳನ್ನು ತೆರೆದಿಡುವ ವಿಶಿಷ್ಟ ಅನುಭವ ನೀಡುವಂತದ್ದಾಗಿದೆ.

’ನಿನ್ನ ಸುತ್ತಾಟ, ಹುಡುಕಾಟ, ಖಾಸಗಿ ಲೋಕದಲ್ಲಿ ಹರಿದಾಡುವ ನಿನ್ನ ಖುಷಿ, ಪ್ರೀತಿ, ಬೆರಗು, ತುಡಿತಗಳಿಗೆಲ್ಲಾ ನೀನು ಕೊಡುವ ಸ್ಪರ್ಶದ ನವಿರು ಎದೆಯ ಆಳದಲ್ಲಿ ತಂಪು ಗಾಳಿ ಬೀಸುತ್ತಲೇ, ನನ್ನೊಳಗೆ ಸಣ್ಣದೊಂದು ಹೊಟ್ಟೆ ಕಿಚ್ಚಿನ ಕಿಡಿಯನ್ನೂ ಹತ್ತಿಸಿಬಿಡುತ್ತದೆ. ಅಂತೆಯೇ, ಮುಂಬೆಳಗಿಗೆ ಪ್ರತಿಫಲಿಸುವ ಗರಿಕೆಯ ಮೇಲಿನ ಮಂಜಿನ ಹನಿಯಂತೆ, ಮುಟ್ಟಿದರೆ ಸಾಕು ತೇವವಾಗಿ ಬಿಡುವಂಥ ಭಾವ ಸುರಿಸುವ ನಿನ್ನ ಅಕ್ಷರಗಳು ಬಿಡಿಸುವ ಭಾವಚಿತ್ತಾರಗಳು ಎಲ್ಲೂ ಭಾರವಾಗದೆ, ಜಿಗಿಯುವ ಲವಲವಿಕೆಯನ್ನು ತುಂಬಿಕೊಂಡಿವೆ. ಇಲ್ಲಿನ ಮಳೆ, ಬಿಸಿಲು, ಹೆಂಗಸರು, ಮುದುಕರು, ಗಿಡಮರಗಳು... ಹೀಗೆ ನಿನ್ನ ಈ ಲೋಕದ ಹುಡಕಾಟಗಳೊಳಗೆಲ್ಲಾ ನಿನ್ನೊಳಗಿನ ಮಗು ಮಾತನಾಡಿರುವುದರಿಂದ, ಇಲ್ಲಿ ಪೊಳ್ಳು ಆದರ್ಶಗಳಿಲ್ಲ, ಮಾಸಿದ ತಲೆಯ ಅಕ್ಷರಗಳಿಲ್ಲ. ’ ಎನ್ನುವ ಭಾವ ಸ್ಪರ್ಶಿ ಅಂಕಣ ಬರಹಗಳು  ಭಾವುಕ ಅನುಭವವನ್ನು ಓದುಗರಲ್ಲಿ ಉಂಟುಮಾಡುತ್ತದೆ. 

About the Author

ಅಬ್ದುಲ್ ರಶೀದ್
(28 February 1965)

'ಕೆಂಡಸಂಪಿಗೆ' ಎಂಬ ಅಂತರ್ಜಾಲ  ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿರುವ ಅಬ್ದುಲ್ ರಶೀದ್ ಅವರು ವೃತ್ತಿಯಿಂದ ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರು. ಕೊಡಗು ಜಿಲ್ಲೆಯ ಸುಂಟಿಕೊಪ್ಪದ  ರಶೀದ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.  'ಹಾಲು ಕುಡಿದ ಹುಡುಗಾ', 'ಪ್ರಾಣಪಕ್ಷಿ' ಎಂಬ ಕಥಾಸಂಕಲನ ಪ್ರಕಟಿಸಿರುವ ಅಬ್ದುಲ್ ರಶೀದ್ ಕವಿ, ಅಂಕಣಕಾರರು ಕೂಡ. ಅಬ್ದುಲ್ ರಶೀದ್ ಅವರ ಕತೆಗಳು ಕನ್ನಡ ಕಥಾಲೋಕಕ್ಕೆ ವಿಶಿಷ್ಟ ನುಡಿಗಟ್ಟು ನೀಡಿವೆ. ನನ್ನ ಪಾಡಿಗೆ ನಾನು’ ಮೊದಲ ಕವನ ಸಂಕಲನ. 'ನರಕದ ಕೆನ್ನಾಲಿಗೆಯಂತ ನಿನ್ನ ಬೆನ್ನಹುರಿ' ಅವರ ಇದುವರೆಗಿನ ಎಲ್ಲ ಕವಿತೆಗಳನ್ನು ಒಳಗೊಂಡ ಸಂಕಲನ. ’ಮಾತಿಗೂ ಆಚೆ', 'ಅಲೆಮಾರಿಯ ದಿನಚರಿ', 'ಕಾಲುಚಕ್ರ' ...

READ MORE

Related Books