ಅಂಬೇಡ್ಕರ್ ಎಂಬ ಕರಗದ ಬಂಡೆ

Author : ರಘೋತ್ತಮ ಹೊ. ಬ.

Pages 152

₹ 120.00




Year of Publication: 2012
Published by: ಸಾಂಚಿ ಪ್ರಕಾಶನ
Address: #13, 1ನೇ ಕ್ರಾಸ್, 2ನೇ ಹಂತ, ಚಾಮುಂಡೇಶ್ವರಿ ಬ್ಲಾಕ್, ಗಿರಿದರ್ಶಿನಿ ಬಡಾವಣೆ, ಆಲನಹಳ್ಳಿ ಅಂಚೆ, ಮೈಸೂರು- 28
Phone: 9164634375

Synopsys

ಲೇಖಕ ರಘೋತ್ತಮ ಹೊ.ಬ ಅವರ ‘ಅಂಬೇಡ್ಕರ್ ಎಂಬ ಕರಗದ ಬಂಡೆ’ ಎಂಬ ಕೃತಿಯು ದಲಿತ ಪರ ದನಿಯಾದ ಅಂಬೇಡ್ಕರ್ ಅವರ ಜೀವನದ ಹೋರಾಟಗಳ ಬಗೆಗಿನ ಬರಹಗಳ ಸಂಗ್ರಹವಾಗಿದೆ. ಡಾ.ಶಿವಕುಮಾರ್ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಕೃತಿಯ ಒಳಪುಟಗಳಲ್ಲಿ ಭಗವದ್ಗೀತೆ ವಿರುದ್ಧ ಅಂಬೇಡ್ಕರ್ ಅಭಿಯಾನ!, ಅಂಬೇಡ್ಕರರನ್ನೇ ಹಿಂದುತ್ವದ ಮೂಲ ಮಾದರಿ ಎಂದದ್ದು!, ದಲಿತರು ಮತ್ತು ಹಿಂದೂ ದೇವಸ್ಥಾನಗಳು, ಬುದ್ಧನನ್ನು ಮತ್ತೆ ತಂದ ಅಂಬೇಡ್ಕರ್, ದಲಿತರಿಗೆ ಬುದ್ಧನೇ ಅಂತಿಮ, ಬಸವಣ್ಣನಲ್ಲ!, ದಲಿತರ ಚಿಂತೆ ಪೇಜಾವರರಿಗ್ಯಾಕೆ?, ಹೊಲೆಯರು ಯಾರು?, ಅಂಬೇಡ್ಕರ್ ವಾದ ಮತ್ತುರಾಜ್ಯಾಧಿಕಾರದ ಮಹತ್ವ, ದಲಿತರಿಗೆ ಧಕ್ಕದ ಪ್ರತ್ಯೇಕ ಮತದಾನ ಪದ್ಧತಿ, ಅಂಬೇಡ್ಕರ್ ರಾಜಕಾರಣಿಯಲ್ಲವೆ?, ಕಾರ್ಮಿಕರು, ಬ್ರಾಹ್ಮಣವಾದ ಮತ್ತು ಅಂಬೇಡ್ಕರ್, ಅಂಬೇಡ್ಕರ್ ಎಂಬ ಕರಗದ ಬಂಡೆ ಹೀಗೆ 24 ಶೀರ್ಷಿಕೆಗಳ ಬರವಣಿಗೆಗಳು ಇವೆ.

About the Author

ರಘೋತ್ತಮ ಹೊ. ಬ.
(16 May 1975)

ರಘೋತ್ತಮ ಹೊ.ಬ ಮೂಲತಃ ಚಾಮರಾಜನಗರ ಜಿಲ್ಲೆಯ ಮಂಗಲ ಹೊಸೂರಿನವರು. ಬಿಎಸ್ಸಿ, ಬಿಇಡಿ ಪದವಿಗಳನ್ನು ಪಡೆದಿರುವ ರಘೋತ್ತಮ ಹೊ.ಬ ಪ್ರಜಾವಾಣಿ, ವಾರ್ತಾಭಾರತಿ, ಕನ್ನಡಪ್ರಭ, ಆಂದೋಲನ ದಿನಪತ್ರಿಕೆಗಳು, ಸಂವಾದ, ಭೀಮವಾದ, ಪ್ರಬುದ್ಧಭಾರತ ಮಾಸ ಪತ್ರಿಕೆಗಳು, ಗೌರಿ ಲಂಕೇಶ್, ಅಗ್ನಿ ವಾರ ಪತ್ರಿಕೆಗಳು ಸೇರಿದಂತೆ ನಾಡಿನ ಹಲವು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಜೊತೆಗೆ ಅವರ ಹಲವು ಕೃತಿಗಳು ಪ್ರಕಟಗೊಂಡಿವೆ. ಗಾಂಧಿ ಹೊರಾಟ ಯಾರ ವಿರುದ್ಧ?, ಅಂಬೇಡ್ಕರ್ ಎಂಬ ಕರಗದ ಬಂಡೆ, ಎದೆಗೆ ಬಿದ್ದ ಗಾಂಧಿ, ಅಂಬೇಡ್ಕರ್ ದರ್ಶನಂ ಅವರ ಪ್ರಕಟಿತ ಕೃತಿಗಳು ...

READ MORE

Related Books