ಅಂಬೇಡ್ಕರ್‌ವಾದಿಗಳ ಬಿಕ್ಕಟ್ಟು ಮತ್ತು ಭವಿಷ್ಯದ ಸವಾಲುಗಳು

Author : ಎಚ್.ಎಸ್. ಅನುಪಮಾ

Pages 72

₹ 60.00




Year of Publication: 2016
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ದಲಿತ ರಾಜಕಾರಣವನ್ನು ವಿಮರ್ಶಾತ್ಮಕವಾಗಿ ನೋಡುವ ಕೃತಿ ’ಅಂಬೇಡ್ಕರ್‌ವಾದಿಗಳ ಬಿಕ್ಕಟ್ಟು ಮತ್ತು ಭವಿಷ್ಯದ ಸವಾಲುಗಳು’. ಮಹಾರಾಷ್ಟ್ರದ ಹಿರಿಯ ಚಿಂತಕ ಆನಂದ ತೇಲ್ತುಂಬ್ಡೆ ಬರೆದ ಈ ಪುಸ್ತಕವನ್ನು ಲೇಖಕಿ ಡಾ. ಎಚ್‌.ಎಸ್‌. ಅನುಪಮಾ ಕನ್ನಡಕ್ಕೆ ತಂದಿದ್ದಾರೆ. ರಾಜಕೀಯ ವ್ಯವಸ್ಥೆಯ ಭಾಗವಾಗುತ್ತಿರುವ ದಲಿತರು, ಮೇಲ್ಪದರದ ದಲಿತರಲ್ಲಿರುವ ಹೊಣೆಗಾರಿಕೆಯ ಕೊರತೆ ಹಾಗೂ ಫ್ಯಾಸಿಸ್ಟ್‌ ಶಕ್ತಿಗಳು ದಲಿತರನ್ನು ಆಪೋಶನ ತೆಗೆದುಕೊಳ್ಳುತ್ತಿರುವ ರೀತಿಯನ್ನು ಚರ್ಚಿಸಲಾಗಿದೆ.

ಸ್ಪಷ್ಟ ಸೈದ್ಧಾಂತಿಕತೆ ರೂಪಿಸಿಕೊಳ್ಳುವಲ್ಲಿ ಎಡಪಂಥೀಯರು ಮತ್ತು ದಲಿತರು ಎಡವಿದ್ದು; ಅದರಿಂದ ಇತರರು ಲಾಭ ಪಡೆದದ್ದನ್ನು ಕೃತಿ ಚರ್ಚಿಸುತ್ತದೆ. ಪ್ರಗತಿಪರರೊಂದಿಗೆ ದಲಿತರು ಮಾಡಿಕೊಳ್ಳಬೇಕಾದ ತಾತ್ವಿಕ ಹೊಂದಾಣಿಕೆ ಕುರಿತು ಪ್ರಸ್ತಾಪಿಸುತ್ತದೆ. ಹೀಗಾಗಿ ದಲಿತರ ಆತ್ಮವಿಮರ್ಶೆಯ ಸಾಧನದಂತೆಯೂ ಕೃತಿ ಗೋಚರಿಸುತ್ತದೆ. 

About the Author

ಎಚ್.ಎಸ್. ಅನುಪಮಾ

ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು  ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...

READ MORE

Reviews

(ಹೊಸತು, ಆಗಸ್ಟ್ 2014, ಪುಸ್ತಕದ ಪರಿಚಯ)

ಪ್ರಸ್ತುತ ಪುಸ್ತಕದಲ್ಲಿ ಡಾ| ಎಚ್. ಎಸ್. ಅನುಪಮಾ ಅವರು, ಚಿಂತಕರಾದ ಡಾ| ಆನಂದ ತೇಲ್ತುಂಬ್ಳೆಯವರ ಅಂಬೇಡ್ಕರರ ಚಿಂತನೆಯನ್ನು ಈ ಕಾಲದ ಅಂಬೇಡ್ಕರ್‌ವಾದಿಗಳೆಂದರೆ ಯಾರು ? ಅವರು ಎದುರಿಸುತ್ತಿರುವ ಬಿಕ್ಕಟ್ಟುಗಳೇನು ? ಎಂದು ವಿವರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರರ ವ್ಯಕ್ತಿಪರಿಚಯವನ್ನು, ಅವರೇ ಕಟ್ಟಿದಂತಹ ಸಂಘಟನೆಗಳ ಬಗ್ಗೆ, ಹಿಂದೂಧರ್ಮವನ್ನು ನಿರಾಕರಿಸಿ ಬೌದ್ಧ ಧರ್ಮವನ್ನು ಸ್ವೀಕರಿಸಿದ ಬಗ್ಗೆ ವಿವರಗಳಿವೆ. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದರೂ ಸ್ಟೇಟ್ಸ್ ಅಂಡ್ ಮೈನಾರಿಟೀಸ್' ಆಶಯಗಳು ಸಂವಿಧಾನದಲ್ಲಿ ಅಡಕ ಗೊಳ್ಳುವಂತೆ ಮಾಡಲು ಸಾಧ್ಯವಾಗದಿರುವುದರ ಬಗ್ಗೆ ಅಂದಿನ ಸ್ಥಿತಿಯ ಚಿತ್ರಣ ಕಾಣುತ್ತದೆ. ಸಮಾನತೆ-ಸೋದರತೆ-ಸ್ವಾತಂತ್ರ್ಯ ಆಧಾರದ ಸಮಾಜ ಅಂಬೇಡ್ಕರರ ಕನಸು. ಅದು ನನಸಾಗದೇ ಉಳಿದಿರುವುದಕ್ಕೆ ಕಾರಣಗಳು : ದಲಿತ ಮೇಲ್ವಲನದ ವ್ಯಕ್ತಿಗಳು ಸಾಮಾಜಿಕವಾಗಿ, ರಾಜಕೀಯವಾಗಿ ಮುಂದುವರಿದಂತೆ ಬಂಡವಾಳಶಾಹಿಯನ್ನು ಪ್ರೋತ್ಸಾಹಿಸುತ್ತ ದಲಿತ ಬೂರ್ಶ್ವಾಗಳಾಗಿ ಬದಲಾಗಿ, ಸಾಮಾನ್ಯ ದಲಿತರ ಸಂಬಂಧವನ್ನು ರಾಜಕೀಯ ಸವಾಲುಗಳು ನೆಲೆ ಭದ್ರತೆಗಾಗಿ ಹಾಗೂ ಜನಸಂಖ್ಯಾ ಬೆಂಬಲಕ್ಕಾಗಿ ಮಾತ್ರ ಸೀಮಿತಗೊಳಿಸಿದ್ದಾರೆ. ಇಳಿಯುತ್ತಿರುವ ದಲಿತರ ಜೀವನ ಮಟ್ಟ, ಕಡಿಮೆಯಾಗುತ್ತಿರುವ ಉದ್ಯೋಗಾವಕಾಶ, ಜಾಗತೀಕರಣದ ಪರಿಣಾಮ, ದಲಿತ ಚಳುವಳಿಗಾರರಿಗೆ ಅರ್ಥವಾಗುತ್ತಿಲ್ಲ, ಇನ್ನೂ ಭೂತಕಾಲದ ಘಟನೆಗಳಿಗೆ ಅಂಟಿಕೊಂಡಿದ್ದಾರೆ. ವರ್ತಮಾನದ ಪರಿಸ್ಥಿತಿಯನ್ನು ಗ್ರಹಿಸುತ್ತಿಲ್ಲ. ಅಂಬೇಡ್ಕರ್ ನೀಡಿದ ಕೊಡುಗೆಯನ್ನು ಭಾರತೀಯ ಸಮಾಜ ಗುರುತಿಸುವಲ್ಲಿ ವಿಫಲವಾಗಿ, ಅವರ ಮೂರ್ತೀಕರಣ, ದೈವೀಕರಣಗೊಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅಂಬೇಡ್ಕರರ ಚಿಂತನೆಗಳನ್ನು ಮೇಲ್ಪದರದಲ್ಲಿ ಕಾಣದೇ ಆಳವಾಗಿ ಅರ್ಥೈಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆಯೆಂಬುದು ಚಿಂತಕರ ಆಶಯವಾಗಿದೆ.

Related Books