ಅಂಬೇಡ್ಕರ್ ಎಂಬ ಅಂತಃಕರಣ

Author : ಗೋವಿಂದರಾಯ ಎಂ

Pages 228

₹ 230.00




Year of Publication: 2021
Published by: ಎಸ್.ಎಲ್.ಎನ್ ಪಬ್ಲಿಕೇಶನ್, ಬೆಂಗಳೂರು
Address: ಎಸ್.ಎಲ್.ಎನ್. ಪಬ್ಲಿಕೇಷನ್ ನಂ. 3437, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ2ನೇ ಹಂತ ಬೆAಗಳೂರು-29
Phone: 9972129376

Synopsys

ಗೋವಿಂದರಾಯ ಎಂ ಅವರ ಕೃತಿ ಅಂಬೇಡ್ಕರ್ ಎಂಬ ಅಂತಃಕರಣ. ಶ್ರೇಷ್ಠ ಸಾಮಾಜಿಕ ಚಿಂತಕ, ಮಹಾನ್ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್‌ರ ಬದುಕು-ಬರಹ-ಸಾಧನೆಗಳ ವಿವಿಧ ಮಗ್ಗಲುಗಳನ್ನು ಪರಿಚಯಿಸುವ ‘ಅಂಬೇಡ್ಕರ್ ಎಮಬ ಅಂತಃಕರಣ’ ಕೃತಿ ನಿಮ್ಮ ಕೈಯಲ್ಲಿದೆ. ‘ಜೀವನಪ್ರೀತಿ ಮಾಲಿಕೆ’ಯ ಎರಡನೇ ಕೃತಿಯಲ್ಲಿನ ಲೇಖನಗಳನ್ನು ಸಹೃದಯಿ ಅಧ್ಯಾಪಕರು ಮತ್ತು ಬರಹಗಾರರು ತಮ್ಮದೇ ಆದ ಚಿಂತನಾ ನೆಲೆಗಟ್ಟಿನಲ್ಲಿ ಚಿಂತಿಸಿ ಬರಹ ರೂಪಕ್ಕಿಳಿಸಿದ್ದಾರೆ. ಅಭಿಪ್ರಾಯಗಳೆಲ್ಲವೂ ಲೇಖಕರವೇ ಆಗಿರುವುದರಿಂದ, ವಿಭಿನ್ನವಾಗಿ ಯೋಚಿಸಲು ನಮ್ಮನ್ನು ತೊಡಗಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರತಿಯೊಬ್ಬರ ಬರಹದಲ್ಲೂ ವಾಸ್ತವದ ಸಮಸ್ಯೆಗಳಿಗೆ ಅಂಬೇಡ್ಕರ್ ಹೇಗೆ ಅಂತಃಕರಣದ ಉತ್ತರವಾಗುತ್ತಾರೆ ಎಂಬ ಸಾಕಷ್ಟು ಆಲೋಚನೆಗಳು ಇಲ್ಲಿ ಮೂಡಿವೆ.

About the Author

ಗೋವಿಂದರಾಯ ಎಂ
(15 February 1981)

ಸಮಕಾಲೀನ ಸಂಸ್ಕೃತಿ ಚಿಂತಕರು ಹಾಗೂ ಕನ್ನಡ ಅಧ್ಯಾಪಕರಾದ ಡಾ. ಗೋವಿಂದರಾಯ ಎಂ ಇವರು ಮೂಲತಃ ಪಾವಗಡ ತಾಲ್ಲೂಕಿನ ಚನ್ನಕೇಶವಪುರ ಗ್ರಾಮದ ಮೂಡ್ಲಗಿರಿಯಪ್ಪ ಮತ್ತು ಶ್ರೀಮತಿ ಚಿಕ್ಕವ್ವ ಇವರ ಪುತ್ರನಾಗಿ 15.02.1981 ರಂದು ಜನಿಸಿದರು. ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಚನ್ನಕೇಶವಪುರದಲ್ಲಿ ಮುಗಿಸಿ, ಮಧುಗಿರಿಯ ಶ್ರೀ ಟಿ.ವಿ. ವೆಂಕಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ 65ನೇ ರ್‍ಯಾಂಕ್ ಮೂಲಕ ಪದವಿ ಪಡೆದರು. 2002-2004ರವರೆಗೆ ಬೆಂಗಳೂರು ವಿಶ್ವವಿದ್ಯಾಲಯ ತುಮಕೂರು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪೂರೈಸಿ ಐದನೇ ರ್‍ಯಾಂಕ್ ಪಡೆದಿದ್ದಾರೆ. ನಂತರ ತುಮಕೂರಿನ ಕೆ. ...

READ MORE

Related Books