ಅಂಬೇಡ್ಕರ್ ಬೆಳಕಿನಲ್ಲಿ ಪತ್ರಿಕೋದ್ಯಮ

Author : ಅಮ್ಮಸಂದ್ರ ಸುರೇಶ್

Pages 428

₹ 250.00
Year of Publication: 2021
Published by: ಸಿರಿ ಸಮೃದ್ಧಿ ಪ್ರಕಾಶನ
Address: # 315, ಎಚ್.ಪಿ.ಓ ಮತ್ತು ಆರ್ ಎಂಎಸ್ ಬಡಾವಣೆ, ಶಕ್ತಿನಗರ, ಮೈಸೂರು-570029
Phone: 9448402346

Synopsys

ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪತ್ರಿಕೋದ್ಯಮ ಕುರಿತು ಡಾ, ಅಮ್ಮಸಂದ್ರ ಸುರೇಶ್ ಅವರ ಲೇಖನಗಳ ಕೃತಿ-ಅಂಬೇಡ್ಕರ್ ಬೆಳಕಿನಲ್ಲಿ ಪತ್ರಿಕೋದ್ಯಮ. ಒಟ್ಟು 9 ಅಧ್ಯಾಯಗಳಿವೆ. ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪತ್ರಿಕಾ ಲೇಖನಗಳು ಮತ್ತು ಸಂಪಾದಕೀಯಗಳು, ಡಾ.ಬಿ.ಆರ್.ಅಂಬೇಡ್ಕರ್ ಪತ್ರಿಕೆಗಳ ಒಳನೋಟ, ಪತ್ರಿಕೆಗಳು ಮತ್ತು ಪತ್ರಕರ್ತರ ಕುರಿತು ಅವರು ಹೊಂದಿದ್ದ ಧೋರಣೆಗಳು, ಬೇರೆ ಪತ್ರಿಕೆಗಳಲ್ಲಿ ಅಂಬೇಡ್ಕರ್ ಅವರ ವಿಷಯ ಹಾಗೂ ವರದಿಗಳು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಗಣ್ಯರು ನೀಡಿದ ಪತ್ರಿಕಾ ಹೇಳಿಕೆಗಳು ಹಾಗೂ ಅವುಗಳಿಗೆ ಅಂಬೇಡ್ಕರರ ಪ್ರತಿಕ್ರಿಯೆಗಳು ಈ ಎಲ್ಲವುಗಳ ಕುರಿತು ವಿವರವಾದ ವಿಷಯಗಳನ್ನು ಒಳಗೊಂಡಿದೆ

 

About the Author

ಅಮ್ಮಸಂದ್ರ ಸುರೇಶ್

ಡಾ. ಅಮ್ಮಸಂದ್ರ ಸುರೇಶ ಅವರು ಮೂಲತಃ ತುಮಕೂರು ಜಿಲ್ಲೆಯ ಅಮ್ಮಸಂದ್ರದವರು. ಪತ್ರಿಕೋದ್ಯಮದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಹೆಚ್,ಡಿ ಪದವೀಧರರು. ಮಾಧ್ಯಮ ವಿಶ್ಲೇಷಕರು. ಹವ್ಯಾಸಿ ಅಭಿವೃದ್ಧಿ ಪತ್ರಕರ್ತರು. ಪ್ರಮುಖ ಅಂಕಣ ಬರಹಗಾರರೂ ಆಗಿದ್ದಾರೆ.  ಪ್ರಸ್ಥುತ ರಾಜ್ಯ ಮಟ್ಟದ ದಿನಪತ್ರಿಕೆ ಉದಯಕಾಲ ಮತ್ತು ವೆಬ್ ನ್ಯೂಸ್ ಪೋರ್ಟಲ್ ಕರ್ನಾಟಕ ‘ಕಹಳೆ ಡಾಟ್ ಕಾಂ’ಗೆ ನಿಯಮಿತವಾಗಿ ಅಂಕಣ ಬರೆಯುತ್ತಾರೆ. ಮಾಧ್ಯಮ ಲೋಕ ಎಂಬ ಯೂಟ್ಯೂಬ್ ವಾಹಿನಿ ನಡೆಸುತ್ತಿದ್ದು, ಮುದ್ರಣ ಮಾಧ್ಯಮ, ಅಂತರ್ ಜಾಲ ಪತ್ರಿಕೋದ್ಯಮ, ಸಾಮಾಜಿಕ ಮಾಧ್ಯಮ ಹೀಗೆ ಮಾಧ್ಯಮದ ಬಹುತೇಕ ಕ್ಷೇತ್ರಗಳಲ್ಲಿ ಶ್ರಮಿಸುತ್ತಿದ್ದಾರೆ. ಕೃತಿಗಳು: ಕನ್ನಡ ದಿನಪತ್ರಿಕೆಗಳಲ್ಲಿ ಕೃಷಿ ಸುದ್ಧಿ(2013), ಡಾ.ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ (2020), ಕೊರೋನಾ ತಂದ ಅನಿವಾರ್ಯತೆಗಳು(2020) ...

READ MORE

Related Books