ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ

Author : ಮೊಗಳ್ಳಿ ಗಣೇಶ್

Pages 236

₹ 180.00




Year of Publication: 2018
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಹಿರಿಯ ಸಾಹಿತಿ ಹಾಗೂ ವಿಚಾರವಾದಿ ಡಾ. ಮೋಗಳ್ಳಿ ಗಣೇಶ್  ಅವರು ರಚಿಸಿರುವ ಕೃತಿ ‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’. 

ತಮ್ಮ ಅಗಾಧ ಪ್ರತಿಭೆ, ದಲಿತ ಚಿಂತನೆಗಳ ಮೂಲಕ ನಾಡಿನ ಪ್ರಜ್ಞಾವಲಯವನ್ನು ವಿಸ್ತರಿಸುತ್ತಿರುವ ಮಹತ್ವದ ಲೇಖಕ, ಕನ್ನಡದ ಕಥಾಲೋಕವನ್ನು ಶ್ರೀಮಂತಗೊಳಿಸಿದ ಕಥೆಗಾರರಾದ ಮೊಗಳ್ಳಿ ಗಣೇಶ್ , ಮಹತ್ವದ ಚಿಂತಕ ಅಂಬೇಡ್ಕರ್ ಎಂಬ ಮಹಾನದಿಯನ್ನೂ, ಗಾಂಧೀಜಿಯೆಂಬ ನದಿಯನ್ನು ಏಕಕಾಲಕ್ಕೆ ಗ್ರಹಿಸಿ ಈ ಕೃತಿಯ ಮೂಲಕ ತಮ್ಮ ಚಿಂತನೆಗೆಳನ್ನು ಬಿತ್ತರಿಸಿದ್ದಾರೆ. 

ಪ್ರಗತಿಪರರು, ಚಿಂತಕರು, ಗಾಂಧಿ ಮತ್ತು ಅಂಬೇಡ್ಕರ್ನ್ನು ಒಂದುಗೂಡಿಸುವ ಚಿಂತನೆ ಹೊಂದಿದ್ದಾರೆ. ಇಬ್ಬರು ನಾಯಕರ ವೈಚಾರಿಕ ಚಿಂತನೆಗಳನ್ನು ಅಧ್ಯಯನ ಮಾಡಿ ಪ್ರಜ್ಞಾಪೂರಕವಾಗಿ, ಲೋಕಗ್ರಹಿಕೆಯ ಮೂಲಕ ಅನುಭವದಿಂದ ಬಂದ ಬರಹವನ್ನು ಈ ಕೃತಿಯಲ್ಲಿ ಕಾಣಬಹುದು. ಅಂಬೇಡ್ಕರ್ ಎಂಬ ಮಹಾ ನದಿಯಲ್ಲಿ ಹಿಂದುತ್ವದ ಪಾಪ ಅಳೆದು, ಮಾನವತೆಯ ಬೇರೆಗಳು ಗಟ್ಟಿಯಾಗಿವೆ. ಅಂಬೇಡ್ಕರ್ ಮತ್ತು ಗಾಂಧಿ ಸಂಬಂಧ ದೇಹ ಮತ್ತು ಆತ್ಮದಂತೆ ಇದೆ.‌ ಗಾಂಧಿ ಭಾರತದ ದೇಹವಾದರೆ, ಅಂಬೇಡ್ಕರ್ ದೇಶದ ಆತ್ಮದಂತೆ. ಎನ್ನುವ ವೈಚಾರಿಕ ನಿಲುವುಗಳ ಕೃತಿಯಾಗಿ ’‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ ಪ್ರಕಟವಾಗಿದೆ. 

About the Author

ಮೊಗಳ್ಳಿ ಗಣೇಶ್
(01 July 1962)

ಕತೆಗಾರ ಮೊಗಳ್ಳಿ ಗಣೇಶ್ ಅವರು ಹುಟ್ಟಿದ್ದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿ. ಬಾಲ್ಯದ ದಿನಗಳನ್ನು ಹಳ್ಳಿಯಲ್ಲಿ ಕಳೆದ ಮೊಗಳ್ಳಿ ಅವರು ತಮ್ಮ ಅನುಭವವನ್ನು ವಿಶಿಷ್ಟ, ವಿನ್ಯಾಸದಲ್ಲಿ ಸೊಗಸಾದ ಕಥೆಗಳನ್ನಾಗಿ ಕಟ್ಟಿಕೊಡಬಲ್ಲರು.  ಕನ್ನಡ ಕಥನ ಪರಂಪರೆಗೆ ಹೊಸತನ ನೀಡಿದ ಅವರು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು.  ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ (ಕಥಾ ಸಂಕಲನಗಳು), ಮೊಗಳ್ಳಿ ಕಥೆಗಳು (ಆವರೆಗಿನ ಬಹುಪಾಲು ಕಥೆಗಳ ಸಂಕಲನ), ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕು ಬಾರಿ ಬಹುಮಾನ ಪಡೆದಿವೆ- ಒಂದು ಹಳೆಯ ಚಡ್ಡಿ (1989), ಬುಗುರಿ (1990), ಬತ್ತ (1991), ...

READ MORE

Related Books