ಅಂಬುಗ ಎಂಬ ಹಕ್ಕಿ

Author : ನಾ. ಡಿಸೋಜ

Pages 16

₹ 45.00




Year of Publication: 2022
Published by: ನವಕರ್ನಾಟಕ ಪಬ್ಲಿಕೇಷನ್‌

Synopsys

ಅಂಬುಗ ಎಂಬ ಹಕ್ಕಿ ನಾ ಡಿಸೋಜ ಅವರ ಕಥೆಯಾಗಿದೆ. ಈ ಕಥೆಯಲ್ಲಿ ನಗರದಿಂದ ಅಜ್ಜಿಯ ಹಳ್ಳಿಮನೆಗೆ ಬಂದ ಪುಟ್ಟ ಹುಡುಗಿಗೆ ಆನಂದವೋ ಆನಂದ. ಏಕೆ ಗೊತ್ತೇ ? ಅಂಬುಗ ಪಕ್ಷಿಗಳು ಗುಂಪಾಗಿ ಬಂದು ಮರಗಳ ಮೇಲೆ ಕೂಡುತ್ತವೆ. ಹೂಗಳ ಮಕರಂದ ಹೀರಿ ಹಾರಾಡುತ್ತವೆ. ಒಂದು ದಿನ ಹಕ್ಕಿಗಳೇ ಬಂದಿಲ್ಲ. ಯಾಕೆ? ಮಕ್ಕಳೇ ಈ ಕಥೆಯನ್ನೋದಿ, ನಿಮಗೇ ತಿಳಿಯುತ್ತದೆ ಎಂದು ನಾ ಡಿಸೋಜ ಅವರು ತನ್ನ ಹಿನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ನಾ. ಡಿಸೋಜ

ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ.  ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ಕಥೆಗಳನ್ನು ಬರೆಯುತ್ತಿದ್ದರು. ಡಿಸೋಜರ ಮೊದಲ ಕಾದಂಬರಿ ‘ಬಂಜೆ ...

READ MORE

Related Books