ಅಮೆರಿಕ ಅಮೆರಿಕ ಅಮೆರಿಕ

Author : ಕೆ. ಮುಕುಂದನ್

Pages 135

₹ 120.00




Year of Publication: 2015
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 08026617100

Synopsys

ಪ್ರೊ. ಕೆ. ಮುಕುಂದನ್ ಅವರ ಪ್ರವಾಸ ಕಥನ ‘ಅಮೆರಿಕ ಅಮೆರಿಕ ಅಮೆರಿಕ’. ಮುಕುಂದನ್ ಅವರು ಕಳೆದ ಎರಡು ವರ್ಷದಲ್ಲಿ ಎರಡು ಬಾರಿ ಅಮೆರಿಕ ಪ್ರವಾಸವನ್ನು ಕೈಗೊಂಡಿದ್ದಾರೆ. ಅಮೆರಿಕ ಜೀವನವನ್ನು ವಸ್ತುನಿಷ್ಠ ದೃಷ್ಟಿಯಿಂದ ನೋಡಿ, ತಮ್ಮ ಅನಿಸಿಕೆಗಳನ್ನು ದಾಖಲಿಸಿದ್ದಾರೆ. ಭಾರತೀಯ ಮತ್ತು ಅಮೆರಿಕ ದೇಶದ ಜೀವನ ಕ್ರಮಗಳಲ್ಲಿಯ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ಗುರುತಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ವಿಮರ್ಶಕ ದೃಷ್ಟಿಕೋನವನ್ನು ಬರವಣಿಗೆಯಲ್ಲಿ ತೋರಿದರೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಚಿಕಿತ್ಸಕ ದೃಷ್ಟಿಯನ್ನು ತೋರಿದ್ದಾರೆ.

ಅಮೆರಿಕಾವನ್ನು ಎಷ್ಟು ಸುತ್ತಿದ್ದರೂ ಭಾರತವೇ ಅವರಿಗೆ ಅಚ್ಚುಮೆಚ್ಚು. ಅವರು ವಿದೇಶದಲ್ಲಿದ್ದಾಗಲೂ ಅವರ ಮನಸ್ಸು ಸದಾ ಸ್ವದೇಶಿ. ಹಾಗೆಂದ ಮಾತ್ರಕ್ಕೆ, ಹಲವು ಕ್ಷೇತ್ರಗಳಲ್ಲಿ ಅಮೆರಿಕದ ಸಾಧನೆಗಳನ್ನು ಅವರು ಕಡೆಗಣಿಸಿಲ್ಲ. ಅಮೆರಿಕದಿಂದ ನಾವು ಕಲಿಯಬೇಕಾದ್ದನ್ನು ಸೂಚ್ಯವಾಗಿ ಹೇಳಿದರೆ ಕೆಲವೊಂದು ಸಾಂಸ್ಕೃತಿಕ ಸಂದರ್ಭಗಳಲ್ಲಿ ಭಾರತವೇ ಅಮೆರಿಕಕ್ಕೆ ನೀಡಬಹುದಾದ ಅಂಶಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

ಸಂಸ್ಕೃತಿ ಮತ್ತು ನಿತ್ಯ ಜೀವನದ ಜೀವಂತಿಕೆಯ ವಿಚಾರ ಬಂದಾಗ ಅವರ ಮನಸ್ಸು ಸಹಜವಾಗಿ 'ಮೇರಾ ಭಾರತ್ ಮಹಾನ್” ಎಂಬ ಧೋರಣೆ ತಾಳುತ್ತದೆ. ಅವರ ಬರವಣಿಗೆಯಲ್ಲಿ ಲವಲವಿಕೆ ಇದೆ. ಸರಳವಾಗಿ ಕಾಣುವ ಸಾಮಾನ್ಯ ಸಂಗತಿಗಳೂ ಕೂಡ ಅವರಿಗೆ ವಿಶೇಷವಾಗಿ ಕಾಣುತ್ತವೆ.

About the Author

ಕೆ. ಮುಕುಂದನ್
(31 August 1951)

ಲೇಖಕ ಕೆ. ಮುಕುಂದನ್ ಅವರು ಮೂಲತಃ ಮೈಸೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ತಂದೆ ಕೃಷ್ಣಸ್ವಾಮಿ ಅಯ್ಯಂಗಾರ್ ತಾಯಿ ಅಚ್ಚಮ್ಮ. ಪ್ರಾಥಮಿಕ ಶಿಕ್ಷಣವನ್ನು ಹಾಸನ ಜಿಲ್ಲೆಯ ಪೊನ್ನಾತ್ ಪುರದಲ್ಲಿ, ಪ್ರೌಢಶಿಕ್ಷಣವನ್ನು ಮೈಸೂರಿನಲ್ಲಿ ಹಾಗೂ ಉನ್ನತ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿದ್ದಾರೆ. ಕನ್ನಡ ಪ್ರಾಧ್ಯಪಕರಾಗಿ ಹಾಗೂ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಲಲಿತಾ ಕಲಾ ಅಕಾಡೆಮಿಯಲ್ಲಿ ರಿಜಿಸ್ಟ್ರಾರ್, ಕನ್ನಡ ಅಭಿವೃದ್ದಿ ಪ್ರಾಧಿಕಾರದಲ್ಲಿ ಹಾಗೂ ಪುಸ್ತಕ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.  ಕೃತಿಗಳು: ಯುರೋಪ್ ಪ್ರವಾಸ, ಕಿವಿ-ಕಾಂಗರೂಗಳ ನಾಡಿನಲ್ಲಿ, ಅಮೆರಿಕ ಅಮೆರಿಕ ಅಮೆರಿಕ ...

READ MORE

Related Books