ಅಮೆರಿಕದಲ್ಲಿ ಕಂಡ ಕನಸು ಕಟ್ಟಿದ ನೆನಪು

Author : ಅಹಿತಾನಲ (ನಾಗ ಐತಾಳ)

Pages 412

₹ 400.00




Year of Publication: 2015
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಪಾತಾಳದಲ್ಲಿ - Follow the American Orearm : ಎoಬ ಮಾತೊಂದಿದೆ ಅದನ್ನು ಅರಸುತ್ತ ಯುರೋಪ್ ಮತ್ತು ಇತರ ಪ್ರದೇಶಗಳಿಂದ ಸಹಸ್ತಾರು ಮಂದಿ ಅಮೆರಿಕಕ್ಕೆ ವಲಸೆ ಬಂದಿದಾರೆ. ನಾನೂ ಅಂಥ ಕನಸುಗಳನ್ನು ಹಿಂಬಾಲಿಸಿ ಅಮೆರಿಕಕ್ಕೆ ವಲಸೆ ಬಂದೆನೆಂಬುದು ನಿಯ! ಇಲ್ಲಿಗೆ ಬಂದ ಮೇಲೆ ನನ್ನ ಕನಸುಗಳು ಇನ್ನಷ್ಟು ವಿಸ್ತಾರವಾಗಿದ್ದುದೂ ನಿಯೇ ಆ ಕನಸುಗಳಲ್ಲಿ ಎಷ್ಟು ಕನಸುಗಳಾಗಿ, ಅವುಗಳನ್ನು ಉಂಡ ಸರಿ ಅನುಭವವಾಗಿದೆ ಎಂಬುದನ್ನು ವಿಮರ್ಶಿಸಿಕೊಳ್ಳುವುದು ಈ ಗ್ರಂಥದ ಉದ್ದೇಶ, ಹಲವು ಕನಸುಗಳು ಇನ್ನೂ ಕಸುಗಳಾ?ಯ ಆದಿವೆ. ಆದರೆ, ಅವು ನನಸಾಗುವ ದಿನಗಳನ್ನು ನಿರೀಕ್ಷಿಸುತ್ತಲೇ ಇದ್ದೇನೆ. ಅಂತಹ ಕಂಡ ಮತ್ತು ಕಂಡ ಕನಸುಗಳ ಶಿವರಗಳನ್ನು ನಾಲ್ಲ ದಾಖಲೀಕರಿಸಲು ಪ್ರಯತ್ನಿಸುತ್ತಿದ್ದೇನೆ. (ಲೇಖಕರ ನುಡಿಯಿಂದ )

'ವಲಸೆ' ಎಂಬುದು ಮಾನವನ ಚಲನಶೀಲತೆಯನ್ನು ತಿಳಿಸುವಂತದ್ದು. 'ಚಲನಶೀಲತೆ' ಮಾನವ ನಡೆವಳಿಕೆಯ ಅಂಗಾಂಶವೆಂದರೂ ತಪ್ಪಿಲ್ಲ. ಅದು ಅವರ ಅನುಭವಗಳನ್ನೂ ಹೆಚ್ಚಿಸಿ, ಅವನ ಬದುಕನ್ನು ಸಫಲಗೊಳಿಸ, ಹೊಸ ಹೊಸ ಜೀವನ ಕ್ರಮಗಳಿಗೆ  ಹೊಂದಿಕೊಳ್ಳಲೂ ಅನುವು ಮಾಡಿಕೊಳ್ಳುತ್ತದೆ. ಮಾನವ ಕುಳಿತಲ್ಲಿ ಕುಳಿತಿರಲಾರ ಹಾಗಾಗಿ, ಮಾನವನ ಬದುಕು ಬದಲಾಗುತ್ತಲೇ ಇರುತ್ತದೆ. ಇಲ್ಲದಿದ್ದರೆ  ವೈವಿಧ್ಯತೆಯನ್ನು ಕಳೆದುಕೊಂಡು, ಜೀವನ ನೀರಸವಾಗುತ್ತದೆ.

ಅಲೆಮಾರಿತನದ ಲೇಖಕರ ಅನುಭವಗಳನ್ನು ಹೆಚ್ಚಿಸಿದ,  ಹಾಗೂ  ಬದುಕಿನ ಗುರಿಯನ್ನು ಇನ್ನಷ್ಟು ಫುಟಗೊಳಿಸಿ, ಸಾಕಷ್ಟು ಅರ್ಥಪೂರ್ಣವಾಗಲು ಸಹಾಯವಾಗಿದ   ಬದುಕಿನ  ಕಷ್ಟ ಸುಖ, ನೋವು ನಲಿವು, ಆಸೆ- ನಿರಾಸೆಗಳನ್ನು ಲೇಖಕರು ಈ ಕೃತಿಯಲ್ಲಿ ಹಂಚಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. 

 

About the Author

ಅಹಿತಾನಲ (ನಾಗ ಐತಾಳ)
(05 October 1932 - 29 October 2022)

ಅಹಿತಾನಲ ಎಂಬ ಕಾವ್ಯನಾಮದಿಂದ ಬರೆಯುವ ವಿಜ್ಞಾನಿ ನಾಗ ಐತಾಳ ಅವರು ಜನಿಸಿದ್ದು 1932ರ ಅಕ್ಟೋಬರ್‍ 5ರಂದು. ಮೂಲತಃ ಉಡುಪಿ ಜಿಲ್ಲೆಯ ಕೋಟದವರಾದ ಅವರು ಸದ್ಯ ಕ್ಯಾಲಿಫೋರ್ನಿಯಾದ ಅರ್‍ಕಾಡಿಯಾದ ನಿವಾಸಿ ಆಗಿರುವ ಐತಾಳರು ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಆರ್ಯ ವಿದ್ಯಾಶಾಲೆಯಲ್ಲಿಯೂ ಪದವಿ ಶಿಕ್ಷಣವನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿಯೂ ಅವರು ಅಧ್ಯಯನ ಮಾಡಿದ್ದಾರೆ.  ಭಾರತದಲ್ಲಿ ಪಿಎಚ್.ಡಿ. ಪದವಿ ಪಡೆದ ನಂತರ ಬಯೋಕೆಮಿಸ್ಟ್ರಿಯಲ್ಲಿ ಹೆಚ್ಚಿನ ಅಧ್ಯಯನ ನಡೆಸಲು ಕೆನಡಾಕ್ಕೆ ಹೋದರು. ಅದಾದ ಮೇಲೆ ಅಮೆರಿಕೆಗೆ ಹೋದ ಅವರು 1975ರಿಂದ 2001ರ ವರೆಗೆ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಪ್ರಾಧ್ಯಾಪಕರಾಗಿ ...

READ MORE

Related Books