ಅಮ್ಮ ಅಂದ್ರೆ ಅಷ್ಟಿಷ್ಟಲ್ಲ..

Author : ವಿಜಯಕಾಂತ ಪಾಟೀಲ

Pages 1

Synopsys

ಕವಿ ವಿಜಯಕಾಂತ ಪಾಟೀಲರು ಬರೆದ ಮಕ್ಕಳ ಕವಿತೆಗಳ ಪ್ರಥಮ ಸಂಕಲನ.

ಈ ಸಂಕಲನದ ಬಗ್ಗೆ ಸಾಹಿತಿ ವೈದೇಹಿ ಅವರು ’ಮಕ್ಕಳ ಮನಸ್ಸನ್ನು, ಕನಸನ್ನು. ಹಾಡು ಕತೆಗಳನ್ನು ಕವನರೂಪದಲ್ಲಿ ಮಕ್ಕಳ ಮಾತಿನಲ್ಲಿಯೇ ಹೇಳುವ ಪ್ರಯತ್ನ ಇಲ್ಲಿದೆ. 'ಬಾನಿನಲ್ಲೊಂದು ಮನೆಯ ಕಟ್ಟುವೆ ಹಕ್ಕಿ ತಾರೆಗಳ ಸಂಗಡ ಇರುವೆ!' ಎಂಬಲ್ಲಿ ಎಳೆಯ ಮನದ ಒಂದು ಲಹರಿಯ, 'ಅಮ್ಮ ಅಂದರೆ ಅಷ್ಟಿಷ್ಟಲ್ಲ! ಕೌದಿಯಂತೆ ಬೆಚ್ಚಗೆ' ಎಂಬಲ್ಲಿ ಮಗುವಿನ ಭಾವಕೋಶದ- ಒಟ್ಟಾರೆ ಸಂಕಲನದ ಉದ್ದಕ್ಕೂ ಹೀಗೆ ಮಗು ಜಗದ ಚಿತ್ರಣದ ಅನೇಕ ಸಾಲುಗಳಿವೆ. 'ಚಿಟ್ಟೆ ಮತ್ತು ಪುಟ್ಟ' ಕವಿತೆಯಲ್ಲಿ ತಾನು ತಿಳಿಯದೇ ಮಾಡಿದ ಕ್ರೌರ್ಯಕ್ಕೆ ನೊಂದು ನರಳುವ ಮಗುವಿನ ಸುಕೋಮಲತೆಯಿದೆ. ಮಗುವಿನ ಪ್ರಪಂಚ ಹೊಕ್ಕು ಹೊರಡುತ್ತ ಅದರ ವಿವಿಧ ಮಗ್ಗುಲುಗಳನ್ನು ಸರಳ ನುಡಿಗಳಲ್ಲಿ ಪೋಣಿಸಿ ಕವಿತೆಯಾಗಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ವಿಜಯಕಾಂತ ಪಾಟೀಲ
(09 August 1969)

ವಿಜಯಕಾಂತ ಪಾಟೀಲ- ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದ್ದು; ಪ್ರಾಥಮಿಕ, ಪ್ರೌಢಶಿಕ್ಷಣ: ಕ್ಯಾಸನೂರು, ಶಕುನವಳ್ಳಿ (ಸೊರಬ); ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್‌ಎಲ್‌ಬಿ ಧಾರವಾಡ; ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ; ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ, ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ. ಪ್ರಕಟಿತ ಕೃತಿಗಳು: ಮಾಸದ ಕಲೆಗಳು (1994), ಸಲಸಲದ ಪಾಡು : (2003), ನೂರು ಬಣ್ಣದ ಕಣ್ಣು (2012), ಹೌದು ನಾನು ಕೌದಿ (2013), ಇಂತಿ ನದಿ (20050)ಕವನ ಸಂಕಲನ. ಪ್ರಬಂಧ: ವಜನುಕಟ್ಟು (2005), ಮಕ್ಕಳ ಸಾಹಿತ್ಯ: ...

READ MORE

Related Books