ಅಮ್ಮ ಅವರ ಬಸ್ಸು ಸವಾರಿ

Author : ಎನ್. ಪ್ರಹ್ಲಾದರಾವ್

Pages 32

₹ 165.00




Year of Publication: 2020
Published by: ನ್ಯಾಷ್ ನಲ್ ಬುಕ್ ಟ್ರಸ್ಟ್ ಇಂಡಿಯಾ
Address: ಬಿಡಿಎ ಕಾಂಪ್ಲೆಕ್ಸ್, #ಎನ್-72, 28ನೇ ಕ್ರಾಸ್ ರೋಡ್, ಸಿದ್ಧಣ್ಣ ಲೇಔಟ್, ಬನಶಂಕರಿ 2ನೇ ಹಂತ, ಬೆಂಗಳೂರು -560070

Synopsys

`ಅಮ್ಮ ಅವರ ಬಸ್ಸು ಸವಾರಿ’ ಕೃತಿಯು ವಳ್ಳಿಕಣ್ಣನ್ ಅವರ ಮೂಲ ಕೃತಿ. ಎನ್ ಪ್ರಹ್ಲಾದ್ ರಾವ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಎಸ್. ಗೋಪಾಲನ್ ಅವರು ಕೃತಿಗೆ ಚಿತ್ರಗಳನ್ನು ಬರೆದಿದ್ದಾರೆ. ಈ ಕೃತಿಯು ಮಕ್ಕಳ ಸಾಹಿತ್ಯ ಪ್ರಕಾರವಾಗಿದ್ದು, ಕೆಲವೊಂದು ವಿಚಾರಗಳು ಹೀಗಿವೆ: ವಳಿಯಮ್ಮ ಎಂಟು ವರ್ಷ ಹುಡುಗಿ. ಮನೆಯ ಹೊರಬಾಗಿಲಲ್ಲಿ ನಿಂತು ರಸ್ತೆಯಲ್ಲಿ ನಡೆಯುವುದನ್ನೆಲ್ಲ ನೋಡುವುದೆಂದರೆ ಅವಳಿಗೆ ತುಂಬಾ ಮೋಜು. ತನ್ನ ಹೆಸರೆಂದರೆ ವಳಿಯಮ್ಮಲ್ಲಿಗೆ ಇನ್ನಿಲ್ಲದ ಪ್ರೀತಿ. ಯಾರಿಗಾದರೂ ಅಷ್ಟೆ ಅಲ್ಲವೆ. ಅವರವರ ಹೆಸರೆಂದರೆ ಅವರಿಗವರಿಗೆ ಪ್ರೀತಿ. ಹಾಗೆ ತಮ್ಮ ಹೆಸರನ್ನು ಪ್ರೀತಿಸದವರೂ ಯಾರಾದರೂ ಇದ್ದಾರೆಯೆ? ಆದರೂ ವಳ್ಳಿಯಮ್ಮನಿಗೆ ತನ್ನ ಹೆಸರನ್ನು ಪ್ರೀತಿಸದವರು ಯಾರಾದರೂ ಇದ್ದಾರೆಯೇ? ಆದರೂ, ವಳ್ಳಿಯಮ್ಮನಿಗೆ ತನ್ನ ಹೆಸರನ್ನು ಕಂಡು ಕೆಲವು ಬಾರಿ ದ್ವೇಷ ಹುಟ್ಟುತ್ತಿದ್ದೂ ಉಂಟು. ಅವಳ ಗೆಳತಿಯರು ಕೆಲವು ಸಾರಿ ಅವಳ ಕುರಿತು; ವಳ್ಳಿಯಮ್ಮ ವಳ್ಳಿಯಮ್ಮ ನಿನ್ನ ಗಂಡನೆಲ್ಲಿ ಹೋದನೆ? ವಳ್ಳಿಯಮ್ಮ ವಳ್ಳಿಯಮ್ಮ ನಿನ್ನ ಗಂಡನೇಕೆ ಹೋದನ? ಹೀಗೆ ಹಾಡಿದಾಗ ವಳ್ಳಿಗೆ ಏನು ಹೇಳಬೇಕೆಂದು ತೋಚುತ್ತಿರಲಿಲ್ಲ. ಕಣ್ಣಲ್ಲಿ ನೀರು ಬರುತ್ತಿತ್ತು. ಜಿಗುಪ್ಸೆ ಯಿಂದ ಅಣಕಿಸಿ ಬಿಡುತ್ತಿದ್ದಳು ಅಷ್ಟೇ… ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

 

About the Author

ಎನ್. ಪ್ರಹ್ಲಾದರಾವ್
(10 June 1920 - 18 March 1980)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಂಡಗದ್ದೆಯಲ್ಲಿ ಲೇಖಕ ಎನ್. ಪ್ರಹ್ಲಾದರಾವ್ ಹುಟ್ಟಿದರು. ತಂದೆ- ಹನುಮಂತರಾವ್, ತಾಯಿ- ತುಳಜಾಬಾಯಿ. ಶಿವಮೊಗ್ಗದಲ್ಲಿ ಪ್ರಾಥಮಿಕ ಶಿಕ್ಷಣ. ಮೈಸೂರಿನಲ್ಲಿ ಪ್ರೌಢಶಿಕ್ಷಣ ಹಾಗೂ ಮೈಸೂರು ಯುವರಾಜ ಕಾಲೇಜು ಹಾಗೂ ಮಹಾರಾಜ ಕಾಲೇಜುಗಳಲ್ಲಿ ಬಿ.ಎ. ಹಾಗೂ ಎಂ.ಎ. ಪದವಿ ಪಡೆದರು. ಅಠಾರ ಕಚೇರಿಯಲ್ಲಿ ಗುಮಾಸ್ತರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಮೈಸೂರು ವಿ.ವಿ.ದ ಕನ್ನಡ ‘ವಿಶ್ವಕೋಶ’ದ ಸಂಯೋಜಕ ಸಂಪಾದಕರಾಗಿದ್ದರು.  ಪ್ರಬಂಧಗಳು : ರಥ-ರಥಿಕ, ಮಧುವ್ರತ , ಮುತ್ತಿನ ಹಾರ, ಲೇಖನ ಕಲೆ- ಮಧುವ್ರತ ಪ್ರಬಂಧ ಸಂಕಲನವು ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ., ಬಿ.ಎಸ್ಸಿ., ತರಗತಿಗಳಿಗೆ ಪಠ್ಯಪುಸ್ತಕವಾಗಿತ್ತು. ಈ ಕೃತಿಯು ಹಿಂದಿಗೂ ಅನುವಾದಗೊಂಡಿದೆ. ಮುತ್ತಿನ ಹಾರ ಪ್ರಬಂಧ ಸಂಕಲನವು ಮೈಸೂರು ವಿಶ್ವವಿದ್ಯಾಲಯದ ...

READ MORE

Related Books