ಅಮ್ಮಾವ್ರ ಗಂಡ

Author : ಭಾಲಚಂದ್ರ ಜಯಶೆಟ್ಟಿ

Pages 136

₹ 80.00




Year of Publication: 2011
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮ, ಕಲಬುರಗಿ
Phone: 9448124431

Synopsys

ಹಾಸ್ಯ-ವಿಡಂಬನೆಯಿಂದ ಕೂಡಿದ 25 ಲೇಖನಗಳ ಸಂಗ್ರಹವಿದು. ಪ್ರೊ. ಭಾಲಚಂದ್ರ ಜಯಶೆಟ್ಟಿ ಅವರು ರಚಿಸಿದ್ದಾರೆ. ಇಲ್ಲಿಯ ವ್ಯಂಗ್ಯ ಗೂಢವಾಗಿಯೂ, ಮಾರ್ಮಿಕವಾಗಿಯೂ ಇದೆ. ನಮ್ಮ ಸಂವೇದನೆಗೆ ಚುರುಕು ಮುಟ್ಟಿಸುತ್ತದೆ. ವಿದ್ರೂಪವನ್ನು ತಂದು ನಿಲ್ಲಿಸುತ್ತದೆ. ಸಾಮಾಜಿಕ ಕೊಳಕು ವ್ಯವಸ್ಥೆಯ ಕಡೆಗೆ ಗಮನ ಸೆಳೆದು ಚಿಂತನೆಗೆ ಪ್ರೇರೇಪಿಸುತ್ತದೆ. ಈ ಎಲ್ಲ ಗುಣಲಕ್ಷಣಗಳು ಇಲ್ಲಿಯ ಬರಹಗಳಿಗಿವೆ.

About the Author

ಭಾಲಚಂದ್ರ ಜಯಶೆಟ್ಟಿ
(22 November 1939)

ಲೇಖಕ, ಅನುವಾದಕ ಭಾಲಚಂದ್ರ ಜಯಶೆಟ್ಟಿ ಅವರು ಮೂಲತಃ ಬೀದರ ಜಿಲ್ಲೆಯವರು. ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ರಾಜೇಶ್ವರದಲ್ಲಿ  ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ರಾಜೇಶ್ವರ, ಬಸವಕಲ್ಯಾಣದಲ್ಲಿ ಪಡೆದರು. ಆನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎ ಪದವಿ ಪಡೆದರು. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರಭುತ್ವ ಪಡೆದಿದ್ದ ಅವರು ಶಿಕ್ಷಣ ಇಲಾಖೆಯಲ್ಲಿ ವೃತ್ತಿಯನ್ನು ಆರಂಭಿಸಿದರು.  ಸರಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿ, ಸರಕಾರಿ ಮಹಾವಿದ್ಯಾಲಯ ಗುಲಬರ್ಗಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೀದರ ಮುಂತಾದೆಡೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿಯಾದರು. ಹಲವಾರು ಶಿಕ್ಷಣ ಸಂಸ್ಥೆಗಳ ...

READ MORE

Related Books