ಅಮೋಘವರ್ಷ ನೃಪತುಂಗ ಮತ್ತು ಇತರ ಮಕ್ಕಳ ನಾಟಕಗಳು

Author : ಚಂದ್ರಶೇಖರ ಕಂಬಾರ

Pages 112

₹ 130.00




Year of Publication: 2023
Published by: ಅಂಕಿತ ಪುಸ್ತಕ
Address: ಪ್ರಕಾಶಕರು : ಅಂಕಿತ ಪುಸ್ತಕ, #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

ಅಮೋಘವರ್ಷ ನೃಪತುಂಗ ಮತ್ತು ಇತರ ಮಕ್ಕಳ ನಾಟಕಗಳು ಚಂದ್ರ ಶೇಖರ ಕಂಬಾರ ಅವರ ಕೃತಿಯಾಗಿದೆ. ಭಾವನೆಯನ್ನು ದಾಖಲಿಸುವಂತೆ ಬರೆದಿಡುವುದು ಮೂಲತಃ ಸಾಹಿತ್ಯವೆನಿಸುತ್ತದೆ. ಈ ಕಾರಣಕ್ಕಾಗಿಯೇ ಅದು ಲೌಕಿಕವಾಗುತ್ತದೆ. ಆದರೆ ಜನಪದ ಕಾವ್ಯ ಬೇರೆ; ಅದು ಕಾಲಬದ್ಧ ಅಥವಾ ದೇಶ, ಪ್ರದೇಶಬದ್ಧ ಅಲ್ಲ ಎಂಬ ಅರ್ಥದಲ್ಲಿ ಜನಪದ ಕಾವ್ಯ ಎಷ್ಟರಮಟ್ಟಿಗೆ ಸಮಕಾಲೀನವೋ ಅಷ್ಟರಮಟ್ಟಿಗೆ ಪ್ರಾಚೀನವೂ ಹೌದು. ಜನಪದ ಕತೆಯ ನೇಯ್ಗೆಯಲ್ಲೇ ಪ್ರಾಚೀನ ಮತ್ತು ಅರ್ವಾಚೀನ ಅಂಶಗಳ ಯಾವುದೇ ಹಿಂಜರಿಕೆ ಇಲ್ಲದೆ ಮುಕ್ತ ವಿನಿಮಯವಿದೆ. ಒಂದು ಕತೆಯಲ್ಲಿ ಸೊಸೆಯೊಬ್ಬಳು ಹೇಮರೆಡ್ಡಿ ಮಲ್ಲಮ್ಮನಂತೆಯೇ ವರ್ತಿಸುತ್ತಾಳೆ. ಮಲ್ಲಮ್ಮನ ಜೀವನವನ್ನು ವರ್ಣಿಸುವ ಇನ್ನೊಂದು ಕತೆಯಲ್ಲಿ ಮಲ್ಲಮ್ಮನು ನೆರೆಯ ಗ್ರಾಮದ ಒಬ್ಬ ಸಾಮಾನ್ಯ ಹೆಂಗಸಿನಂತೆಯೇ ವರ್ತಿಸುತ್ತಾಳೆ. ಪ್ರಾಚೀನ ಮತ್ತು ಅರ್ವಾಚೀನಗಳು ಒಂದರೊಡನೊಂದು ಬೆರೆತು, ಮೂರ್ತವೂ ಅಮೂರ್ತವೂ - ಎರಡೂ ಆಗಿರುವ ಒಂದು ಸಾರ್ವತ್ರಿಕತೆಯನ್ನು ಉತ್ಪಾದಿಸುತ್ತವೆ, ಪೌರಾಣಿಕ ಪಾತ್ರಗಳು ಹಳ್ಳಿಯ ಜನಗಳಂತೆಯೇ ನಡೆದುಕೊಳ್ಳುತ್ತವೆ, ವರ್ತಿಸುತ್ತವೆ. ಸೀತೆಯು ಮರದ ಕೊಂಬೆಗೆ ತೊಟ್ಟಿಲು ಕಟ್ಟುತ್ತಾಳೆ. ಹಟ್ಟಿಯ ಕೆರೆಯಲ್ಲಿ ಋತುಸ್ನಾನ ಮಾಡುತ್ತಾಳೆ. ಭೀಮನು ಒಂದು ಕೆರೆಯ ಬಳಿ ಅಡುಗೆ ಮಾಡುತ್ತಾನೆ. ಕುಂತಿಯು ತನ್ನ ಮಕ್ಕಳ ಒಳಉಡುಪುಗಳನ್ನು ಒಂದು ನಿರ್ದಿಷ್ಟ ಬಂಡೆಯ ಮೇಲೆ ಒಗೆಯುತ್ತಾಳೆ. ಸೀತೆಯ ಮದುವೆಗೆ ತಮ್ಮನ್ನು ಆಹ್ವಾನಿಸಲಿಲ್ಲವೆಂದು ಒಬ್ಬ ಗರತಿಯು ಜನಕ ಮಹಾರಾಜನಿಗೆ ದೂರು ಸಲ್ಲಿಸುವುದನ್ನು ಒಂದು ಕನ್ನಡ ಜನಪದ ಗೀತೆ ದಾಖಲಿಸಿದೆ.

About the Author

ಚಂದ್ರಶೇಖರ ಕಂಬಾರ
(02 January 1937)

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ   ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ.  ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು.  ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.  ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು  ಪಿ.ಎಚ್.ಡಿ ಪದವಿಗಳನ್ನು ಪಡೆದರು.  ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು.  ಹಂಪಿಯ ...

READ MORE

Related Books