ಅಮೃತಾನುಭಾವ

Author : ಸಿದ್ಧರಾಮ ಸ್ವಾಮಿಗಳು

Pages 334

₹ 300.00




Year of Publication: 2018
Published by: ಶ್ರೀಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆ
Address: ಶ್ರೀಮುರುಘಾಮಠ, ಧಾರವಾಡ

Synopsys

ಡಾ.ಸಿದ್ಧರಾಮ ಸ್ವಾಮಿಗಳ ಅಂಕಣಬರಹಗಳ ಸಂಕಲನ ‘ಅಮೃತಾನುಭಾವ’. ಈ ಕೃತಿಯಲ್ಲಿ ಪ್ರಕಾಶಕರ ನುಡಿ, ಪ್ರಧಾನ ಸಂಪಾದಕರ ನುಡಿ, ಅರಿವಿನಗಲ ವಿಸ್ತರಿಸುವ ಅನುಭಾವದ ಒರತೆ, ಲೇಖಕರ ನುಡಿ ಸೇರಿದಂತೆ ಜಗಜ್ಯೋತಿ ಬಸವೇಶ್ವರ, ಬಸವಣ್ಣನವರು-ತುಳಸೀದಾಸರು, ಭಕ್ತಿ-ವಿನಯ- ಶರಣಾಗತಿ, ಗುರು ಕಾರುಣ್ಯಸಿಂಧು, ಸೇವೆ ಸ್ವಾರ್ಥರಹಿತವಾಗಿರಲಿ, ಮಾತು ಮಾಣಿಕ್ಯ, ಪರೋಪಕಾರವೇ ಜೀವನ, ಮಹಾವೈರಿ ಆಲಸ್ಯ, ತ್ಯಾಗದಿಂದ ಅಮೃತತ್ವ, ನಿಷ್ಕಾಮ ಕರ್ಮ, ಬಯಕೆಗಳ ತ್ಯಾಗವು ಮಹಾತಪಸ್ಸು, ಪಂಡಿತರು ಸಮದರ್ಶಿಗಳು, ಮಾನವ ಶ್ರೇಷ್ಠತ್ವ, ಅನ್ನವೇ ಬ್ರಹ್ಮ, ಕವಿಯೂ ಸೃಷ್ಟಿಕರ್ತನೆ, ಕಾಂತಾಸಮ್ಮಿತ ಉಪದೇಶ, ದುರ್ಜನರ ಸಹವಾಸ ಬೇಡ, ಧರ್ಮಕಾರ್ಯಗಳನ್ನು ಮಾಡು, ಸತ್ಯವೇ ಗೆಲ್ಲುವುದು, ತಾಯಿಯೇ ದೇವರು, ದೇವಸ್ವರೂಪಿ ಗುರುಗಳು, ಅತಿಥಿಗಳು ದೇವರು, ವೈರಾಗ್ಯ, ಹಣ ಮತ್ತು ಹೆಣ್ಣು ಯಾವತ್ತೂ ನಮ್ಮದಲ್ಲ, ಧರ್ಮಕ್ಕೆ ಆಚಾರವೇ ಆಧಾರ, ವರ್ಣಭೇದ ಘೋರಶಾಪ, ಸೋಹಂ - ದಾಸೋಹಂ, ಓಂ ನಮಃ ಶಿವಾಯ, ಭೂತಿ-ವಿಭೂತಿ, ಜೀವನೂ ಬ್ರಹ್ಮನಲ್ಲದೆ ಬೇರಲ್ಲ, ಸಂಸಾರದಿಂದಲೂ ಸದ್ಗತಿ, ಮಾಯೆಯನ್ನಾಡಿಸುವ ಮಹೇಶ್ವ, ಧರ್ಮವನ್ನು ರಕ್ಷಿಸಬೇಕು, ವಿದ್ಯೆಯಿಂದ ಅಮರತ್ವ, ಭಗವತ್ಕೃಪೆ v/s ಭಗವದ್ಭಕ್ತಿ, ಶ್ರದ್ಧೆಯಿಂದ ಜ್ಞಾನ, ಮಧ್ಯಮ ಮಾರ್ಗ, ಬ್ರಹ್ಮತತ್ತ್ವ ಪರಿಕಲ್ಪನೆ, ಬ್ರಹ್ಮತತ್ವ ಸ್ವರೂಪ ಚಿಂತನೆ, ಶರಣರು-ಸಂತರು, ಮಾಧುರ್ಯಭಾವದ ಭಕ್ತಿ, ಕರ್ಮಸಿದ್ಧಾಂತ, ನೈತಿಕ ಮೌಲ್ಯಗಳು, ಕಾಯ-ಪ್ರಸಾದಕಾಯ, ಭಕ್ತ ಮತ್ತು ಭಗವಂತ, ದಾನೋಪಾಖ್ಯಾನ, ಧ್ಯಾನಯೋಗ, ನಮಸ್ಕಾರ, ಸರ್ವರೂ ಸುಖಿಗಳಾಗಲಿ, ನಂಬಿ ಕರೆದರೆ ಓ ಎನ್ನನೆ ಶಿವನು, ಸೋಮಯಾಗ ಅವೈಜ್ಞಾನಿಕ, ಮನಹೀನನ ಮೀಸಲು ಕಾಯ್ದಿರಿಸಿದಂತೆ, ಭಕ್ತಿಯು ಪರಮಪ್ರೇಮರೂಪವಾದುದು, ಅವಶ್ಯಮನುಭೋಕ್ತವ್ಯಂ ಎಂದೆನಿಸದಿರಯ್ಯಾ, ನಾನೆಂಬ ಅಹಂಕಾರ, ಸಾಧನ ಚತುಷ್ಟಯ, ಆಚಾರವೇ ಸ್ವರ್ಗ, ಜೀವನ್ಮುಕ, ದಯವೇ ಧರ್ಮದ ಮೂಲವಯ್ಯಾ, ಹುತ್ತವ ಬಡಿದಡೆ ಹಾವು ಸಾಯಬಲ್ಲುದೆ, ಅರಿದಡೆ ಶರಣ, ಸದುವಿನಯವೇ ಸದಾಶಿವನ ಒಲುಮೆ, ಸರ್ವಜ್ಞನು ಗರ್ವದಿಂದಾದವನೆ, ನುಡಿಯೊಳಗಾಗಿ ನಡೆಯದಿದ್ದರೆ, ತಾಪತ್ರಯಗಳು, ಸತ್ಯವ ನುಡಿವುದೇ ದೇವಲೋಕ, ಶರಣಮಾರ್ಗ, ಮೋಕ್ಷ ಮತ್ತು ಮನಸ್ಸು, ತನ್ನನ್ನು ತಾನರಿಯುವುದು, ಶರಣರ ಸಂಗದಿಂದ ಪರಮಸುಖ, ಲಿಂಗಾಂಗಯೋಗ, ಪ್ರಸಾದಿ-ನಿಷ್ಕಾಮ- ಕರ್ಮಯೋಗಿ, ಶರಣರು ಮತ್ತು ಚಳುವಳಿ, ಭಾವಶುದ್ಧಿ, ಶರಣರ ದೈವತ್ವ ಪರಿಕಲ್ಪನೆ, ಎನಗೆ ನಾನೇ ಹಗೆ ನೋಡಯ್ಯಾ, ಕತ್ತಲೆ ಎಂಬುದು ಇತ್ತಲೆಯಯ್ಯಾ, ನಡೆ ಸಂಸ್ಕೃತಿ, ಸಾಧನಾವಸ್ಥೆ- ಸಾಧ್ಯಾವಸ್ಥೆ, ವಿಜ್ಞಾನ ಮತ್ತು ಧರ್ಮ, ಶಿವಕೃಪೆಯಿಂದ ನಿಜದ ಅರಿವು ಸೇರಿದಂತೆ ಒಟ್ಟು 153 ಲೇಖನಗಳು ಸಂಕಲನಗೊಂಡಿವೆ.

About the Author

ಸಿದ್ಧರಾಮ ಸ್ವಾಮಿಗಳು
(12 December 1958)

ಪ್ರಸ್ತುತ ಯಡಿಯೂರು ಗದಗ ಡಂಬಳ್ ಮಠದ ಪೀಠಾಧಿಪತಿಯಾಗಿರುವ ಜಗದ್ಗುರು ಶ್ರೀ ಸಿದ್ಧರಾಮ ಸ್ವಾಮೀಜಿ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಡಿಸೆಂಬರ್ 12, 1958ರಲ್ಲಿ ಜಂಗಮ ಸಮಾಜದ ತಂದೆ ರುದ್ರಯ್ಯ, ತಾಯಿ ಶಾಂತಮ್ಮಳ ಉದರದಲ್ಲಿ ಜನಿಸಿದ ಬಾಲಕ ಗುರುಪಾದಯ್ಯ. ಮುಂದೆ ಬಿಳಗಿಯ ಕಲ್ಮಠದ ಶಾಖಾ ಮಠಕ್ಕೆ ಪೀಠಾಧಿಪತಿಯಾಗಿ ನೇಮಕಗೊಂಡರು. ಅದಾದ ಬಳಿಕ ಬನಾರಸ್ ವಿವಿಯಲ್ಲಿ ಎಂಎ ಹಿಂದಿ, ಸಂಸ್ಕೃತ ಹಾಗೂ ತತ್ವಶಾಸ್ತ್ರ ಉನ್ನತ ವ್ಯಾಸಂಗ ಪಡೆದುಕೊಂಡರು. ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ 1994ರಲ್ಲಿ ಪೀಠಾಧಿಪತಿಯಾಗಿ ನೇಮಕಗೊಂಡರು. ಲಿಂಗೈಕ್ಯ ಶಿವಬಸವ ಮಹಾಸ್ವಾಮಿಗಳ ಉತ್ತರಾಧಿಕಾರಿಯಾಗಿ ಇಡೀ ಮಠದ ಜವಾಬ್ದಾರಿಯನ್ನು ವಹಿಸಿಕೊಂಡು ಹಿಂದಿನ ಮಠಾಧೀಶರ ...

READ MORE

Related Books