ಅಮುಗಿದೇವಯ್ಯ

Author : ಬಾಲಚಂದ್ರ ಜಯಶೆಟ್ಟಿ

Pages 56

₹ 40.00




Year of Publication: 2014
Published by: ಬಸವ ಧರ್ಮ ಪ್ರಸಾರ ಸಂಸ್ಥೆ
Address: ಹಿರೇಮಠ ಸಂಸ್ಥಾನ, ಭಾಲ್ಕಿ, ಬೀದರ್‌
Phone: 8971057435

Synopsys

12ನೆಯ ಶತಮಾನದ ಶರಣರಲ್ಲಿ ನೇಕಾರಿಕೆ ಕಾಯಕದ ಅಮುಗಿದೇವಯ್ಯ ಅವರು ಪ್ರಮುಖರು. ಸೊನ್ನಲಿಗೆಯಲ್ಲಿ ಸಿದ್ಧರಾಮನ ಸ್ಥಾವರೋಪಾಸನೆಯನ್ನು ಖಂಡಿಸಿ ಕಲ್ಯಾಣಕ್ಕೆ ಬಂದು ಕೊನೆಗೆ ತನ್ನ ಹುಟ್ಟೂರಾದ ಪುಳಿಜೆಯಲ್ಲಿ ಖ್ಯಾತಿ ಪಡೆದು ಲಿಂಗೈಕ್ಯನಾಗುತ್ತಾನೆ. ಈ ಕುರಿತು ಸಮಗ್ರ ಚಿತ್ರಣವನ್ನು ದಾಖಲಿಸುವ ಕೃತಿ. ಪ್ರೊ. ಭಾಲಚಂದ್ರ ಜಯಶೆಟ್ಟಿ ಅವರು ರಚಿಸಿದ್ದಾರೆ. 

About the Author

ಬಾಲಚಂದ್ರ ಜಯಶೆಟ್ಟಿ
(22 November 1939)

ಲೇಖಕ, ಅನುವಾದಕ ಭಾಲಚಂದ್ರ ಜಯಶೆಟ್ಟಿ ಅವರು ಮೂಲತಃ ಬೀದರ ಜಿಲ್ಲೆಯವರು. ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ರಾಜೇಶ್ವರದಲ್ಲಿ  ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ರಾಜೇಶ್ವರ, ಬಸವಕಲ್ಯಾಣದಲ್ಲಿ ಪಡೆದರು. ಆನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎ ಪದವಿ ಪಡೆದರು. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರಭುತ್ವ ಪಡೆದಿದ್ದ ಅವರು ಶಿಕ್ಷಣ ಇಲಾಖೆಯಲ್ಲಿ ವೃತ್ತಿಯನ್ನು ಆರಂಭಿಸಿದರು.  ಸರಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿ, ಸರಕಾರಿ ಮಹಾವಿದ್ಯಾಲಯ ಗುಲಬರ್ಗಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೀದರ ಮುಂತಾದೆಡೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿಯಾದರು. ಹಲವಾರು ಶಿಕ್ಷಣ ಸಂಸ್ಥೆಗಳ ...

READ MORE

Related Books