ಅಮೂರ್ತ ಕನ್ನಡಿ

Author : ಟಿ.ಡಿ.ರಾಜಣ್ಣ ತಗ್ಗಿ

Pages 160

₹ 100.00




Year of Publication: 2010
Published by: ಸೃಷ್ಟಿ ಪಬ್ಲಿಕೇಷನ್ಸ್
Address: ನಂ.121, 13ನೇ ಮುಖ್ಯರಸ್ತೆ, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು- 560040
Phone: 08023153558

Synopsys

‘ಅಮೂರ್ತ ಕನ್ನಡಿ’ ಲೇಖಕ ಡಾ.ಟಿ.ಡಿ. ರಾಜಣ್ಣ ತಗ್ಗಿ ಅವರ ವಿಮರ್ಶಾ ಲೇಖನಗಳ ಸಂಕಲನ. ಅಮೂರ್ತ ಕನ್ನಡಿ ಎಂದರೆ ಕಣ್ಣಿಗೆ ಗೋಚರಿಸದ ಪ್ರತಿಫಲಕ ಎಂದರ್ಥ. ಕೆಲವೊಂದು ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾಷಿಕ ಸತ್ಯಗಳು ನಮ್ಮೆದುರಿಗಿದ್ದರೂ ಅವು ಅಮೂರ್ತ ರೂಪದಲ್ಲಿರುತ್ತವೆ. ಅಂಥವು ನಮ್ಮ ಕಣ್ಣೆದುರಿಗಿದ್ದರೂ ಸಾಮಾಜಿಕ ಪರಿಸರ, ಸಾಹಿತ್ಯ, ಭಾಷೆ, ನುಡಿಗಟ್ಟು ಮತ್ತು ಶಾಸನಗಳಲ್ಲಿ ನಮ್ಮ ಅರಿವಿಗೆ ಬರುತ್ತಾ ಅಗೋಚರವಾಗಿಯೇ ಉಳಿದಿರುತ್ತವೆ ಎಂಬುದು ಮಾತ್ರ ಸತ್ಯ. ಈ ಸತ್ಯಗಳು ಕೆಲವೊಂದು ಸಂದರ್ಭದಲ್ಲಿ ಇಷ್ಟವಾಗಿ ಕಂಡುಬಂದರೆ, ಕೆಲವೊಂದು ಕಷ್ಟವಾಗಿ, ಕಟುವಾಗಿಯೂ ಕಂಡುಬರುತ್ತವೆ. ಆದರೂ ಅಂಥವನ್ನು ಪ್ರತಿಫಲಿಸುವ ಪ್ರಯತ್ನವೇ ಈ ಕೃತಿ.

About the Author

ಟಿ.ಡಿ.ರಾಜಣ್ಣ ತಗ್ಗಿ

ಕನ್ನಡದ ಯುವ ಸಂಶೋಧಕ, ಅನುವಾದಕ ಟಿ.ಡಿ. ರಾಜಣ್ಣ ತಗ್ಗಿ ಅವರು ಮೂಲತಃ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ತಗ್ಗಿಹಳ್ಳಿಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ, ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದಿರುವ ಅವರು ಮದರಾಸು ವಿಶ್ವವಿದ್ಯಾಲಯ ಹಾಗೂ ಜೈನ್ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.  ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮೌಲಿಕ ಪ್ರಬಂಧಗಳನ್ನು ಮಂಡಿಸಿರುವ ರಾಜಣ್ಣ ತಗ್ಗಿ ಅವರು ಮದರಾಸು , ಬೆಂಗಳೂರು ಮತ್ತು ಗುಲಬರ್ಗಾ ಆಕಾಶವಾಣಿ ಕೇಂದ್ರಗಳಲ್ಲಿಯೂ ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.   ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಭಾಷೆ ಬಲ್ಲವರಾಗಿದ್ದು, ...

READ MORE

Related Books