ಅನಾಮದಾಸನ ಕಡತ

Author : ಮ.ಸು. ಕೃಷ್ಣಮೂರ್ತಿ

Pages 225

₹ 450.00




Year of Publication: 2021
Published by: ಬಹುವಚನ ಪ್ರಕಾಶನ
Address: ನಂ.61(ಫಸ್ಟ್ ಫ್ಲೋರ್), ಸುಕೃತ, ದೇಸಾಯಿ ಗಾರ್ಡನ್, ವಸಂತಪುರ ಮುಖ್ಯರಸ್ತೆ, ಬೆಂಗಳೂರು - 560062
Phone: 6362588659

Synopsys

ಹಿಂದಿ ಸಾಹಿತ್ಯದಲ್ಲಿ ಕಳೆದ ಮೂವತ್ತು ವರ್ಷಗಳಲ್ಲಿ ಬಂದ ಶ್ರೇಷ್ಠ ಕಾದಂಬರಿಗಳಲ್ಲಿ ಹಜಾರೀಪ್ರಸಾದ ದ್ವಿವೇದಿಯವರು ಬರೆದ ‘ಅನಾಮದಾಸನ ಕಡತ’ ಪರಿಗಣಿತವಾಗಿದೆ. ಈ ಕಾದಂಬರಿಯನ್ನು ಕನ್ನಡಕ್ಕೆ ಅದ್ಭುತವಾಗಿ ಅನುವಾದಿಸಿದವರು ಮ. ಸು. ಕೃಷ್ಣಮೂರ್ತಿಯವರು.

ಬ್ರಾಹ್ಮಣ ರೈಕ್ವ ಶೂದ್ರ ರಾಜಕುಮಾರಿಯನ್ನು ಮದುವೆಯಾಗುತ್ತಾನೆ, ಅವನು ತನ್ನ ಪ್ರಿಯೆ ರಾಜಕುಮಾರಿ ಜಾಬಾಲಾಳ ನೆನಪಿನಲ್ಲಿ ತನ್ನ ಬೆನ್ನು ಕೆರೆದುಕೊಳ್ಳುತಿರುತ್ತಾನೆ; ಒಮ್ಮೆ ವಿನೋದದಿಂದಾದರೆ, ಮತ್ತೊಮ್ಮೆ ಅರ್ಧಸಾಧನಾವಸ್ಥೆಯಲ್ಲಿ. ಇಂಥ ಪಾತ್ರದೊಂದಿಗೆ ಓದುಗ ವಿಚಿತ್ರವಾದ ತನ್ಮಯತೆಯನ್ನು ಅನುಭವಿಸುತ್ತಾನೆ. ಇಡೀ ಕಾದಂಬರಿಯಲ್ಲಿ ಒಂದು ಅಂತರ್ಗೀತೆಯಿರುವಂತೆ ಕಾಣುತ್ತದೆ, ರೈಕ್ವನ ಈ ಕಡಿತ, ಕೆರೆತ ಅದರ ಶ್ರುತಿ. ಉಪನಿಷತ್ಕಾಲೀನ ಜೀವನದ ಈ ಸರಳ ಸುಂದರ ಚಿತ್ರಣದಲ್ಲಿ ಧರ್ಮವಿದೆ, ದರ್ಶನವಿದೆ, ಕಲೆಯಿದೆ. ಆದರೆ ಎಲ್ಲೂ ಅವು ಹೊರೆಯಾಗಿಲ್ಲ.

About the Author

ಮ.ಸು. ಕೃಷ್ಣಮೂರ್ತಿ
(16 June 1931)

ಮ.ಸು.ಕೃಷ್ಣಮೂರ್ತಿ ಅವರು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಮಂದಗೆರೆ ಗ್ರಾಮದವರು. 1931ರ ಜೂನ್ 16 ರಂದು ಜನಿಸಿದರು. ತಂದೆ ಎಂ.ಸುಬ್ಬರಾವ್, ತಾಯಿ ನಂಜಮ್ಮ. ಬನಾರಸ ವಿ.ವಿ.ಯಿಂದ ಹಿಂದಿ ಎಂ.ಎ ಹಾಗೂ ಮೈಸೂರು ವಿ.ವಿ.ಯಿಂದ ಪಿಎಚ್ ಡಿ ಪದವೀಧರರು. ಮೈಸೂರು ವಿ.ವಿ. ಹಿಂದಿ ವಿಭಾಗ ಮುಖ್ಯಸ್ಥರಾಗಿ ನಿವೃತ್ತರು. ಕನ್ನಡ, ಸಂಸ್ಕೃತ ಹಾಗೂ ಹಿಂದಿ ಭಾಷೆಯಲ್ಲಿ ಬೋಧನೆ ಮಾಡಿದ ಕೀರ್ತಿ ಇವರದು.  ಕೃತಿಗಳು: ಫಲ್ಗುಣಿ, ರಥಚಕ್ರ, ಕಸ್ತೂರಿ ಮೃಗ, ನಾದ ಸೇತು, ಹಡಗಿನ ಹಕ್ಕಿ, ಕುರಿ ಸಾಕಿದ ತೋಳ, ಪರಶುರಾಮನ ತಂಗಿಯರು, ಚತುರ್ಮುಖ, ರಥ ಚಕ್ರ, ಒಂಟಿ ಸಲಗ  ಸೇರಿದಂತೆ 60ಕ್ಕೂ ಅಧಿಕ ಕಾದಂಬರಿಗಳನ್ನು ಮತ್ತು ಯುಗಾಂತ, ರತ್ನಕಂಕಣ, ರಂಗಸಪ್ತಕ, ನಾಟ್ಯ ಪಂಚಕ ...

READ MORE

Related Books