ಆನಂದಲಹರೀ

Author : ಲಕ್ಷ್ಮೀಶ ತೋಳ್ಪಾಡಿ

Pages 340

₹ 400.00




Year of Publication: 2015
Published by: ಅಭಿನವ
Address: ಅಭಿನವ, 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040.
Phone: 9448804905 / 9448676770

Synopsys

ಕೃಷಿಕ, ಚಿಂತಕ, ಹಿರಿಯ ವಿದ್ವಾಂಸರೂ ಆದ ಲಕ್ಷ್ಮೀಶ ತೋಳ್ಪಾಡಿ ಅವರ ಕೃತಿ’ ಆನಂದಲಹರೀ’ ಕೃತಿ 2024ರಲ್ಲಿ ಮೂರನೇ ಮುದ್ರಣ ಕಂಡಿದೆ. ಶಂಕರಾಚಾರ್ಯರು ರಚಿಸಿದ ಸೌಂದರ್ಯಲಹರಿಯ ಪೂರ್ವಭಾಗದ ವ್ಯಾಖ್ಯಾನದ ಒಳನೋಟವನ್ನು ಈ ಕೃತಿ ತಿಳಿಸುತ್ತದೆ. ಸೌಂದರ್ಯಲಹರಿ ನೂರು ಕವಿತೆಗಳ ಗುಚ್ಛ. ಈ ಲಹರಿಯು ಆನಂದ, ಸೌಂದರ್ಯವೆಂಬ ಎರಡು ಭಾಗಗಳಾಗಿ ಒಡೆದುಕೊಂಡಿರುವುದೂ ಈ ಕೃತಿಗೆ ಸಾಕ್ಷ್ಯವೆಂಬಂತಿದೆ. ಪ್ರಸ್ತುತ ಈ ಪುಸ್ತಕವು ಬಹುಸಂಖ್ಯಾತ ಭಾರತದ ಮಿಶ್ರ-ಸಂಕೀರ್ಣ ದಾರ್ಶನಿಕತೆಯನ್ನು ವಿವರಿಸುವಂತದ್ದು. ಅದ್ವೈತದ ಸಗುಣೋಪಾಸನೆಯ ಮಾರ್ಗವನ್ನು ಸೂಚಿಸುವ ಪಠ್ಯವಾಗಿಯೂ ನೋಡಬಹುದು. ಮತ್ತು ಸಂಪೂರ್ಣವಾಗಿ ತಾಂತ್ರಿಕ ಸಾಧನೆಗಳನ್ನು ಕುರಿತ ವಿವರಗಳನ್ನು ಆಧ್ಯಾತ್ಮಿಕ ನೆಲೆಯಲ್ಲಿ ಕೊಡುವ ಕೈಪಿಡಿ ಎಂದೂ ಈ ಕೃತಿಯನ್ನು ಓದುಗರು ಸ್ವೀಕರಿಸಬಹುದು. 

ರಂಗಕರ್ಮಿ ಕೆ. ವಿ ಅಕ್ಷರ ಅವರು ಈ ಕೃತಿಗೆ ಬರೆದ ಮುನ್ನುಡಿಯ ಮಾತುಗಳು ಹೀಗಿವೆ: 

’ತನ್ನ ಮೊದಲ ಸಾಲುಗಳಲ್ಲಿಯೇ ಈ ಪುಸ್ತಕವು ಲಹರಿಯೆಂಬ ಪದಕ್ಕೆ ಅರ್ಥ ಹೇಳಿಕೊಳ್ಳುತ್ತ, ಅದು ಅಲೆ, ತೆರೆ, ಹರಿಯುವಿಕೆ, ತುಂಟತನ, ಸಂಭ್ರಮ, ಆಹ್ವಾನ, ಲೀಲೆ ಮೊದಲಾದ ಧ್ವನಿಗಳನ್ನು ಹೊರಡಿಸುತ್ತಿರುವುದನ್ನು ಉಲ್ಲೇಳಿಸುತ್ತ ಏಕಕಾಲಕ್ಕೆ ಈ ಲಹರಿಯು ಕಾವ್ಯಕ್ರೀಡೆಯೂ ತಾಂತ್ರಿಕ ಉಪಾಸನೆಯೂ ಆಹಬಹುದೆಂಬ ಮಹತ್ವದ ಪ್ರಸ್ತಾಪವನ್ನು ಮಂಡಿಸುತ್ತಾರೆ. ಕೆಲವೊಮ್ಮೆ ಈ ಲಹರಿಯು ಉಪನಿಷತ್ತಿನಿಂದ ಮೊದಲುಗೊಂಡ ವೇದ-ಗೀತೆ-ವಚನಗಳನ್ನೆಲ್ಲ ಒಳಗೊಳ್ಳುತ್ತ ಅರವಿಂದರವರೆಗೆ ಹಬ್ಬಿರುವ ಭಾರತದ ದಾರ್ಶನಿಕ ಧಾರೆಗಳನ್ನು ನಮಗೆ ತೆರೆಸುತ್ತಾ ಹೋದರೆ, ಇನ್ನೂ ಕೆಲವೊಮ್ಮೆ ತಂತ್ರಶಾಸ್ತ್ರದ ಪಾರಿಭಾಷಿಕ ವಿವರಗಳೊಳಗೆ ಮುಳುಗಿ, ಶ್ರೀಚಕ್ರದ ಒಂದೊಂದು ಆಕೃತಿಗೂ ಕೊಡಬಹುದಾದ ಅರ್ಥವಿಸ್ತಾರಗಳನ್ನು ಬಿಚ್ಚುತ್ತದೆ. 

ಬಹುಧ್ವನಿಯ ಕಥನವಿಧಾನವೂ ಮತ್ತು ಅರ್ಥಕ್ಕೆ ತಲುಪುವ ಅವಸರವಿಲ್ಲದ ಓದಿನ ಕ್ರಮವೂ ಕೇವಲ ತೋಳ್ಳಾಡಿಯವರ ವ್ಯಕ್ತಿವಿಶಿಷ್ಟತೆಯಾಗಲೀ ಅಥವಾ ಅವರ ಬಹುಶ್ರುತ ಪಾಂಡಿತ್ಯದಿಂದ ಹುಟ್ಟಿದ ಅಂತರ್‌ಪಲ್ಮೀಯತೆಯಾಗಲೀ ಮಾತ್ರವೇ ಅಲ್ಲ - ಎಂಬುದನ್ನು ನಾವು ಅಗತ್ಯವಾಗಿ ಗಮನಿಸಬೇಕು. ನನಗನ್ನಿಸುವಂತೆ ಅದು, ಪ್ರಜ್ಞಾಪೂರ್ವಕವಾಗಿಯೋ ಅಥವಾ ಅಲ್ಲದೆಯೋ, ಅವರು ಇವತ್ತಿನ ಕಾಲದೇಶದ ಅಗತ್ಯಗಳಿಗೆ ಪ್ರತಿಸ್ಪಂದಿಯಾಗಿ ಕಟ್ಟುತ್ತಿರುವ ಒಂದು ಕಥನವಿಶೇಷ. ಹೇಳಿಕೇಳಿ ನಾವು ಬದುಕುತ್ತಿರುವ ಈ ಕಾಲವು ವಿಶೇಷಜ್ಞರ ಯುಗ - ಇಂಥ ವಿಶೇಷಜ್ಞರ ಜಗತ್ತಿನಲ್ಲಿ ಧರ್ಮದ ಅಧ್ಯಯನ ಮಾಡುತ್ತಿರುವಾತ ಕಾವ್ಯಧ್ವನಿಯ ಕುರಿತು ಮಾತನಾಡಿದರೆ, ಅಥವಾ, ಅರ್ಥಶಾಸ್ತ್ರಜ್ಞನೊಬ್ಬ ಸಂಗೀತದ ಕುರಿತು ಪುಸ್ತಕ ಬರೆದರೆ, ಅದು ಹೃದಯ ತಜ್ಞನೊಬ್ಬ ಮೂತ್ರಪಿಂಡದ ಶಸ್ತ್ರಚಿಕಿತ್ಸೆ ಮಾಡುವಷ್ಟೇ ಅನರ್ಥಕಾರಿಯೆಂದು ಇವತ್ತಿನ ನಮ್ಮ ಸಾಮಾನ್ಯ ಜ್ಞಾನ ಭಾವಿಸಿಕೊಂಡಿದೆ. ಆದರೆ, ಭಾರತದ ಬಹುತೇಕ ಸಾಂಪ್ರದಾಯಿಕ ಪಠ್ಯಗಳನ್ನು ಇಂಥ ಸೀಮಿತ ವ್ಯಾಪ್ತಿಯ ವಿಶೇಷಜ್ಞತೆಯಿಂದ ಓದುವುದಕ್ಕಿಂತ, ಎಲ್ಲ ಮನೋಮಾರ್ಗಗಳಿಗೂ ತೆರೆದ ಕಣ್ಣುಗಳನ್ನಿಟ್ಟುಕೊಂಡ ಶ್ರದ್ದೆಯಿಂದ ಮತ್ತು ತೀರ್ಮಾನಕ್ಕೆ ತಲುಪುವ ತುರ್ತಿಲ್ಲದ ರಸಭಿಜ್ಞತೆಯಿಂದ ಓದುವುದೇ ಹೆಚ್ಚು ಲಾಭದಾಯಕ ಮಾತ್ರವಲ್ಲ, ಇದೇ ಈ ಸಂಪ್ರದಾಯಗಳ ಬಹುತ್ತವನ್ನೂ ಪರಸ್ಪರತೆಯನ್ನೂ ಅರಿಯುವ ಏಕೈಕ ದಾರಿ - ಎಂಬ ಒಂದು ಸೂಕ್ಷ್ಮ ಸಂದೇಶವನ್ನು ತೋಳ್ಳಾಡಿಯವರ ಈ ಕಥನವಿಶೇಷವು ಅವ್ಯಕ್ತವಾಗಿ ಹೇಳುತ್ತಿದೆಯೆಂದು ನಾನು ತಿಳಿಯುತ್ತೇನೆ. ಆದ್ದರಿಂದಲೇ, ಮೇಲ್ನೋಟಕ್ಕೆ ಸಿದ್ದಾಂತದ ಹಂಗಿಲ್ಲದಂತೆ ಕಾಣುವ ತೋಳ್ಳಾಡಿಯವರ “ಎ-ಪೊಲಿಟಿಕಲ್' ನಿಲುವಿನೊಳಗೆ ಗಹನವಾದ ಒಂದು ಕಥನರಾಜಕಾರಣವು ಅಂತರ್ಗತವಾಗಿದೆ - ಎಂಬುದು ನನ್ನ ನಂಬಿಕೆ. ’ ಎಂದಿದ್ದಾರೆ.

 

About the Author

ಲಕ್ಷ್ಮೀಶ ತೋಳ್ಪಾಡಿ

ಲಕ್ಷ್ಮೀಶ ತೋಳ್ವಾಡಿ ಕೃಷಿಕ, ಚಿಂತಕ ಮತ್ತು ವಿದ್ವಾಂಸರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಶಾಂತಿಗೋಡು ಗ್ರಾಮದವರು. ಇವರದು ತೋಳ್ಳಾಡಿತ್ತಾಯ ವೈದಿಕ ಮನೆತನ, ಉತ್ತುಬಿತ್ತು ಗೇಯುವ ಕಾಯಕ. ಆಡುಭಾಷೆ ತುಳು. ವೈದಿಕ ಮತ್ತು ವೈಚಾರಿಕ ನಿಲುವುಗಳನ್ನು ಪರಸ್ಪರ ಮುಖಾಮುಖಿಯಾಗಿಸಿದರು. ತಾರುಣ್ಯದಲ್ಲಿ ಕೆಲ ಕಾಲ ಬೆಂಗಳೂರಿನಲ್ಲಿದ್ದರು. ವೈ.ಎನ್.ಕೆ, ಗೋಪಾಲಕೃಷ್ಣ ಅಡಿಗ, ಲಂಕೇಶ ಪತ್ರಿಕೆ, ಕಿ.ರಂ. ನಾಗರಾಜ  ಅವರ ಒಡನಾಟ ಸಿಕ್ಕಿತ್ತು. ಭಕ್ತಿ-ವಿಭಕ್ತಿಗಳ ನಡುವಿನ ಆಧ್ಯಾತ್ಮಿಕ ವ್ಯಾಕರಣದ ಹುಡುಕಾಟ ತೀವ್ರಗೊಂಡು ಶಿವಮೊಗ್ಗಕ್ಕೆ ತೆರಳಿದಾಗ ಅಲ್ಲಿ ಸತ್ಯಕಾಮರ ಒಡನಾಟ ದಕ್ಕಿತು. ಪುತ್ತೂರಿನ ಅಜ್ಜನ ಸಾಧನೆಯ ಗವಿಯೊಳಗೆ ಕಂಡ ಬೆಳಕು ಕೆಲಕಾಲ ಇವರನ್ನು ಕೈಹಿಡಿದು ನಡೆಸಿತು. ಬುದ್ಧ, ಗಾಂಧಿಯವರ ಮಧ್ಯಮ ...

READ MORE

Related Books