ಅನಾವರಣ

Author : ಸಾರಾ ಅಬೂಬಕ್ಕರ್

Pages 92

₹ 36.00




Year of Publication: 2000
Published by: ಚಂದ್ರಗಿರಿ ಪ್ರಕಾಶನ
Address: ಮಂಗಳೂರು

Synopsys

‘ಅನಾವರಣ’ ಸಾರಾ ಅಬೂಬಕ್ಕರ್ ಅವರ ಅಂಕಣ ಬರಹಗಳಾಗಿವೆ. ಬದುಕಿನಲ್ಲಿ ಸ್ತ್ರೀಯರಿಗೂ ಪುರುಷರಷ್ಟೇ ಸಮಾನ ಅವಕಾಶ- ಹಕ್ಕುಗಳಿರಬೇಕೆಂದು ಒತ್ತಾಯಿಸುತ್ತಾ, ಸ್ತ್ರೀಯರ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟಿಸುತ್ತಾ ಬಂದ ಸಾರಾ ಅವರ ಚಿಂತನಶೀಲ ಬರಹ-ಭಾಷಣಗಳ ಸಂಗ್ರಹವಿದು. ಸ್ತ್ರೀಯರ ಕಷ್ಟಕೋಟಲೆಗಳನ್ನು, ಸಮಾಜದಲ್ಲಿ ಹೆಣ್ಣಿನ ಶೋಷಣೆಯ ಅನೇಕಾನೇಕ ಮುಖಗಳನ್ನು ಅವರು ಸಾಹಿತ್ಯದ ಮೂಲಕ ನಮ್ಮ ಕಣ್ಮುಂದೆ ತಂದು ನಿಲ್ಲಿಸಬಲ್ಲರು. ಸಮರ್ಥವಾದ ಸ್ತ್ರೀಪರ ಧ್ವನಿ ಇಲ್ಲಿದೆ.

About the Author

ಸಾರಾ ಅಬೂಬಕ್ಕರ್
(30 June 1936 - 10 January 2023)

ಕನ್ನಡದ ಪ್ರಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರು 1936ರ ಜೂನ್ 30ರಂದು  ಕಾಸರಗೋಡಿನ ಚಂದ್ರಗಿರಿ ತೀರದ  ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಅವರು ಮತ್ತು  ತಾಯಿ ಚೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಅವರ ಹುಟ್ಟಿದೂರಿನಲ್ಲೇ ನೆರವೇರಿತು.  ಮುಂದೆ ಅವರು ಹೈಸ್ಕೂಲುವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಎಂಜನಿಯರ್ ಆಗಿದ್ದ ಅಬೂಬಕ್ಕರ್‌ ಅವರೊಡನೆ ಸಾರಾ ಅವರ ವಿವಾಹ ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ  ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ...

READ MORE

Related Books