ಆನೆ ಕಥೆ

Author : ನಾಗರಾಜ್ ನವೀಮನೆ

Pages 76

₹ 50.00




Year of Publication: 2019
Published by: ಅಭಿನವ ಪ್ರಕಾಶನ
Address: ಸುಂಕೇನಹಳ್ಳಿ, ಹನುಮಂತನಗರ, ಬೆಂಗಳೂರು
Phone: 9480686862

Synopsys

ಈ ಕೃತಿಯಲ್ಲಿ ಲೇಖಕರು ಸಾಕಾನೆ ಮತ್ತು ಮಾವುತರ ಬದುಕು ಹಾಗೂ ಒಡನಾಟವನ್ನು ಚಿತ್ರಿಸಿದ್ದಾರೆ. ಅಷ್ಟೆ ಅಲ್ಲದೆ; ಆನೆ ಡಾಕ್ಟರ್, ಆನೆ ಡಾಕ್ಯುಮೆಂಟರಿ ಮತ್ತು ಇನ್ನಿತರ ವಿವರಗಳನ್ನು ದಾಖಲಿಸುತ್ತಾ ಹೋಗುತ್ತಾರೆ. ಅವರ ಬರವಣಿಗೆಯಲ್ಲಿ ಕಳಕಳಿ ಇದೆ. ವ್ಯವಹಾರಿಕ ಸಮಾಜದ ಅರಿವಿಗೆ ಬಾರದ ಇಲ್ಲಿನ ಅನೇಕ ಸಂಗತಿಗಳು ಓದುಗರ ಮುಂದೆ ತೆರೆದಿಟ್ಟಿದ್ದಾರೆ. 

About the Author

ನಾಗರಾಜ್ ನವೀಮನೆ

ನಾಗರಾಜ್ ನವೀಮನೆ ಅವರು ಮೂಲತಃ ಹಾಸನದವರು. ಪ್ರಸ್ತುತ 20 ವರ್ಷದಿಂದ ಮೈಸೂರಿನಲ್ಲಿ ವಾಸ್ತವ್ಯ. ಪತ್ರಿಕೋದ್ಯಮದಲ್ಲಿ ಎಂ. ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪಿಎಚ್.ಡಿ ಅಧ್ಯಯನ ಕೂಡ ಮಾಡುತ್ತಿದ್ದಾರೆ. 'ಕನ್ನಡಪ್ರಭ' ಪತ್ರಿಕೆಯಲ್ಲಿ ವೃತ್ತಿ ಪ್ರಾರಂಭಿಸಿದ ಅವರು ಪ್ರಸ್ತುತ 'ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯದ ಬಗ್ಗೆ ವಿಶೇಷ ಆಸಕ್ತಿ. ವನ್ಯಜೀವಿ, ಪರಿಸರ, ಕಾಡೆಂದರೆ ಒಲವು, ಪ್ರವಾಸವೆಂದರೆ ಅಚ್ಚುಮೆಚ್ಚು. 'ಆನೆ ಕಥೆ' ಅವರ ಮೊದಲ‌ ಕೃತಿ.   ...

READ MORE

Related Books