ಅಂಜಿ

Author : ಸಿದ್ಧಲಿಂಗ ಪಟ್ಟಣಶೆಟ್ಟಿ

Pages 116

₹ 12.00




Year of Publication: 1983
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
Phone: 94488 61604

Synopsys

ಖ್ಯಾತ ಮರಾಠಿ ನಾಟಕಕಾರ ವಿಜಯ ತೆಂಡೂಲ್ಕರ್‌ ಅವರ ಮರಾಠಿ ನಾಟಕದ ಕನ್ನಡ ಅನುವಾದ. ಈ ಅನುವಾದದ ಕುರಿತು ಎಂ. ವಿ. ನಾರಾಯಣರಾವ್ ಅವರು ’ಮುದ್ದಾದ “ಅಂಜಿ” ಕನ್ನಡದ್ದೇ ಮೂಲ ಕೃತಿಯೇನೋ ಅನ್ನುವಷ್ಟು ಚೆನ್ನಾಗಿ ಬಂದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರೆ, ಕಲಾವಿದೆ ಯಮುನಾ ಮೂರ್ತಿ ಅವರು ’ತಮ್ಮದೇ ಸರಸ ಸಲ್ಲಾಪದಲ್ಲಿ ಮುಳುಗಿದ ತಂದೆ-ತಾಯಿ, ಅಡ್ಡ ಹಾದಿಗೆ ಎಳೆಯಲು ಮತ್ತೆ ಮತ್ತೆ ಪ್ರಯತ್ನಿ ಸುತ್ತಿರುವ ಸಹೋದ್ಯೋಗಿ ಪ್ರಭುಣೆ, ಕಬಳಿಸಲು ಕಾತರ ರಾಗಿರುವ ಮುದುಕರು ಮತ್ತು ಯುವಕರನ್ನೊಳಗೊಂಡ ಸಮಾಜ, ಇವುಗಳ ಮಧ್ಯೆ ಒಬ್ಬಂಟಿಗಳಾಗಿ ವರಾನ್ವೇಷಣೆ ಯಲ್ಲಿ ತೊಡಗಿದ ಯುವತಿ ಅಂಜಿಯ ಅಸಹಾಯಕತೆ ಈ ನಾಟಕದ ವಸ್ತು ಪ್ರದರ್ಶನಕ್ಕೆ ಸಾಮಗ್ರಿ ಒದಗಿಸುವ ಒಳ್ಳೆಯ ನಾಟಕ. . ವಿಜಯ ತೆಂಡುಲಕರರ ಮೂಲ ಮರಾಠಿ ನಾಟಕವನ್ನು ಸಿದ್ದಲಿಂಗ ಪಟ್ಟಣಶೆಟ್ಟಿಯವರು ಅನುವಾದಿಸಿರುವ ಶೈಲಿ ಕನ್ನಡವೇ ಮೂಲವಾಗಿರಬಹುದು ಎಂಬಷ್ಟು ಸರಳ, ಸಹಜ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿರ್ದೇಶಕ ಸಂಪಿಗೆ ತೋಂಟದಾರ್ಯ ಅವರು ’ನೀಚ ಸ್ವಾರ್ಥ, ಲಾಲಸೆಗಳಿಂದ ತುಂಬಿದ ಭ್ರಷ್ಟ ಗೃಢ ಸಮಾಜ ಹೆಣೆದ ಮೋಸದ ಸಂಪ್ರದಾಯ, ನೀತಿ ನಿಯಮಗಳ

ಜಾಲಕ್ಕೆ ಸಿಲುಕಿದ ಸಭ್ಯ ತರುಣಿಯೊಬ್ಬಳ ದುರಂತ ಜೀವನ ಚಿತ್ರಣ ’ಅಂಜಿ’ ಎಂದು ವಿವರಿಸಿದ್ದಾರೆ.

About the Author

ಸಿದ್ಧಲಿಂಗ ಪಟ್ಟಣಶೆಟ್ಟಿ
(03 November 1939)

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...

READ MORE

Awards & Recognitions

Related Books