ಅನ್ನದ ಮರ

Author : ನಾ. ಕಾರಂತ ಪೆರಾಜೆ

Pages 112

₹ 120.00
Year of Publication: 2021
Published by: ಶ್ರೀ ಜ್ಞಾನಗಂಗಾ ಪುಸ್ತಕ ಮಳಿಗೆ
Address: ಶ್ರೀ ಕಾಂತ ಲಾಡ್ಜ್ ಹಿಂಬದಿ, ಅರುಣಾ ಟಾಕೀಸ್ ಸನಿಹ, ಪುತ್ತೂರು -574 201 (ದ.ಕ)
Phone: 9430451560

Synopsys

ಹಿರಿಯ ಪತ್ರಕರ್ತ ನಾ.ಕಾರಂತ ಪೆರಾಜೆಯವರು ರೂಪಿಸಿದ ಕೃತಿ ‘ಅನ್ನದ ಮರ’. ಹಲಸು ಈಗ ಜಗದಗಲ ಎಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. 'ಅನ್ನದ ಮರ' ಪುಸ್ತಕ ಹಲಸಿನ ವೈವಿಧ್ಯಮಯ ಸಾಧ್ಯತೆಗಳನ್ನು ಬಿಚ್ಚಿಡುತ್ತದೆ. ಪ್ರಸ್ತುತ ದಿನಗಳಲ್ಲಿ ಹಲಸು ಹೇಗೆ ಉದ್ಯಮವಾಗಿ ಬೆಳೆದುಬರುತ್ತಿದೆ ಎಂಬ ಚಿತ್ರಣವೂ ಇದೆ. ಭವಿಷ್ಯದಲ್ಲಿ ಉದ್ಯಮಕ್ಕೆ ಅಡಿಯಿಡಬೇಕೆಂಬ ಉತ್ಸಾಹ ಇದ್ದವರಿಗೆ 'ಹಲಸೂ ಒಂದು ಸಾಧ್ಯತೆ' ಎಂಬಷ್ಟರ ಮಟ್ಟಿಗೆ ಭರವಸೆಯನ್ನೂ ಈ ಕೃತಿ‌ ನೀಡಬಲ್ಲುದು.

ಹಲಸು ಇಂದು ಕೃಷಿಯಾಗಿ ಬದಲಾಗಿ ಬೆಳೆದವನಿಗೆ ಅನ್ನದ ದಾರಿ ತೋರುವ ಬೆಳೆಯೆನಿಸಿಕೊಳ್ಳುತ್ತಿದೆ. ಹಾಗಾಗಿ ಅದು ಈಗೀಗ ಅನ್ನದ ಮರವಾಗಿ  ಪರಿವರ್ತನೆಗೊಳ್ಳುತ್ತಿರುವುದು ಸತ್ಯ. ಆದರೆ ಎಲ್ಲೋ‌ ಮೂಲೆಯಲ್ಲಿ ಬಿದ್ದುಕೊಂಡಿದ್ದ ಈ ಹಲಸಿಗೆ ಪೋಷಿಸಿ 'ಅನ್ನದ ಮರ' ವಾಗಿ ಬೆಳೆಸಿ, ನೂತನ ಸಾಧ್ಯತೆಗಳ ಬಗ್ಗೆ ಚರ್ಚಿಸಲಾದ ಅನೇಕ ಮಾಹಿತಿಗಳನ್ನು ಈ ಕೃತಿ ಅನಾವರಣಗೊಳಿಸಿದೆ. ಅಡ್ಡೂರು ಕರಷ್ಣ ರಾವ್ ಅವರು ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ.

ಕೃತಿಯ ಪರಿವಿಡಿಯಲ್ಲಿ ಹಲಸಿಗೆ ‘ರಾಯಭಾರಿ’ ಯೋಗ, ದೇವರ ನಾಡಿನಲ್ಲಿ ಹಲಸಿಗೆ ರಾಜಕಿರೀಟ, ಅನಾಥ ಹಣ್ಣಿನ ಮಾನ ವರ್ಧಿಸಿದ ಉಪಕುಲಪತಿ, ದೇಶದಲ್ಲೇ ಪ್ರಥಮ ಈ ಚಕ್ಕವಂಡಿ!, ಅಸೀಸ್ ಯುವಕರನ್ನು ಸೆಳೆದ ‘ಹಲಸಿನ ಪೋಲು’, ಹಲಸಿನ ಸಸ್ಯ ಮಾಂಸ, ಚೇಳೂರು ಹಲಸು ಸಂತೆ, ಹಲಸು- ಹುಮ್ಮಸ್ಸು, ಹಬೀ ಹುಡಿ, ಹಲಸಿನಂಗಡಿ ಸೇರಿದಂತೆ ಅನೇಕ ಶೀರ್ಷಿಕೆಗಳ ಬರಹಗಳಿವೆ.

About the Author

ನಾ. ಕಾರಂತ ಪೆರಾಜೆ
(19 August 1964)

ಪತ್ರಕರ್ತರಾಗಿರುವ ನಾ. ಕಾರಂತ ಪೆರಾಜೆ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಸುಳ್ಯದ ನಿವಾಸಿ ಅಗಿರುವ ಅವರು ಯಕ್ಷಗಾನದಲ್ಲಿ ವಿಶೇಷ ಅಸಕ್ತಿ ಉಳ್ಳವರು.  ನಾ. (ನಾರಾಯಣ) ಕಾರಂತ ಪೆರಾಜೆಯವರು ಪತ್ರಕರ್ತ, ಸಾಹಿತಿ, ಯಕ್ಷಗಾನ ಕಲಾವಿದ, ಕೃಷಿಕ ಮತ್ತು ಚಿಂತಕ. ಅವರು ಕೃಷಿ ಮಾಸಿಕ ’ಅಡಿಕೆ ಪತ್ರಿಕೆ’ಯಲ್ಲಿ ಸಹಾಯಕ ಸಂಪಾದಕರಾಗಿದ್ದಾರೆ. ಕೃಷಿ, ಗ್ರಾಮೀಣ ರಂಗದ ಬಗ್ಗೆ, ಯಕ್ಷಗಾನದ ಬಗ್ಗೆ ಮಾಹಿತಿಪೂರ್ಣವಾಗಿ ಆಕರ್ಷಕವಾಗಿ ಬರೆಯುವ ಕಾರಂತರು 'ನೆಲದ ನಾಡಿ' (ಉದಯವಾಣಿ), ಹೊಸದಿಗಂತದಲ್ಲಿ 'ಮಾಂಬಳ' (ಹೊಸದಿಗಂತ) “ದಧಿಗಿಣತೋ' (ಪ್ರಜಾವಾಣಿ) ಅಂಕಣಗಳನ್ನು ಬರೆಯುತ್ತಿದ್ದಾರೆ. 'ತಳಿತಪಸ್ವಿ', 'ಮಾಂಬಳ', 'ಮನಮಿಣುಕು', 'ಮಣ್ಣಮಿಡಿತ', 'ಮಣ್ಣಮಾಸು', ...

READ MORE

Related Books