ಅಂತಃಕರಣದ ರಾಯಭಾರಿಗಳು

Author : ಶೈಲಾ ಸಿ.ಬಿ



Published by: ಎಚ್.ಎಸ್.ಆರ್.ಎ.ಪ್ರಕಾಶನ
Address: ಬೆಂಗಳೂರು

Synopsys

ಸಿ.ಬಿ.ಶೈಲಾ.ಜಯಕುಮಾರ ಅವರ ಕೃತಿ ‘ಅಂತಃಕರಣದ ರಾಯಭಾರಿಗಳು’..ಸೌಭಾಗ್ಯ ರಾಂಪುರ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಗಿರೀಶ್ ಕುಲಕರ್ಣಿ ಅವರ ಬೆನ್ನುಡಿಯನ್ನು ಬರೆದಿದ್ದಾರೆ. ಕೃತಿಯ ಆರಂಭದಲ್ಲೇ ಪದ ಮಾಂತ್ರಿಕ , ವರ ಕವಿ ಡಾ|| ದ. ರಾ. ಬೇಂದ್ರೆಯವರ ಮತ್ತು ಒಬ್ಬ ಸಾಮಾನ್ಯ ಮೋಚಿಯ ನಡುವಿನ ಸಂಭಾಷಣೆಯ ಮೂಲಕ ಇಬ್ಬರಲ್ಲೂ ಅಡಗಿದ್ದ ಮಾನವೀಯತೆಯ ಸೆಲೆಯನ್ನು ಬರಹದ ಮೂಲಕ ತಿಳಿಸಿದ್ದಾರೆ.ಹಿರಿಯರು ಹೇಳಿದ್ದನ್ನು ಶ್ರದ್ಧೆಯಿಂದ ಪಾಲಿಸಿ ಮಾತೃಭಾಷೆಯಲ್ಲೇ ಬರೆಯಲು ಮನಸ್ಸು ಮಾಡಿದ ರಾಷ್ಟ್ರ ಕವಿ ಕುವೆಂಪುರವರ ಸಜ್ಜನಿಕೆ..ರೈತನೊಬ್ಬನ ಮಾತಿನಿಂದ ಆತ್ಮವಲೋಕನ ಮಾಡಿಕೊಂಡ ಕನ್ನಡದ ಆಸ್ತಿ ಶ್ರೀಯುತ ಮಾಸ್ತಿ ವೆಂಕಟೇಶರವರ ಸರಳತೆ.. ಸ್ವಪ್ರಶಂಸೆಯನ್ನು ಬಳಸಿಕೊಳ್ಳದೇ‌ ಹೊಲಿದುಕೊಳ್ಳಬೇಕು ಎಂಬ ಶ್ರೀ ಡಿ ವಿ ಜಿ ಯವರ ಆದರ್ಶ.. ವೈಶ್ಯಕುಲದ ಕನ್ಯೆಯರಿಗೂ ಬದುಕು ಕಟ್ಟಿಕೊಡುವ ಶ್ರೀ ಶಿವರಾಮ ಕಾರಂತರ ಹೃದಯವಂತಿಕೆ.. ಕರುಣೆಯ ಸಿರಿ, ತಾಯಂದರಿಗೆ ತಾಯಿಯಾದ ಸೂಲಗಿತ್ತಿ ನರಸಮ್ಮನ ನಿಸ್ವಾರ್ಥ ಸೇವೆ..ಇದೇ ರೀತಿ ಗಳಗನಾಥರು ,ಜಗದ್ಗುರು ಬಸವಣ್ಣನವರು, ಜನರಲ್ ಕಾರಿಯಪ್ಪ, ಗೋವಿಂದ ಪೈ , ಕನಕದಾಸರು ಡಾ. ಎಮ್ ಸಿ ಮೋದಿ , ಗೊರೂರು ರಾಮಸ್ವಾಮಿ ಅಯ್ಯಂಗಾರ್, ಶ್ರೀ ದೇವುಡು ನರಸಿಂಹ ಶಾಸ್ತ್ರೀಗಳು, ಡಾ. ಜಯದೇವಿ ತಾಯಿ ಲಿಗಾಡೆ, ಶ್ರೀಮತಿ ಎಂ ಕೆ ಇಂದಿರಾ, ಫ .ಗು.ಹಳಕಟ್ಟಿಯವರು, ನಾಡೋಜ ಏಣಗಿ ಬಾಳಪ್ಪನವರು ,ಯಶೋಧರಾ ದಾಸಪ್ಪನವರು , ನಿಜಗುಣ ಶಿವಕುಮಾರ ಸ್ವಾಮಿಗಳು ,ಕಲಾವಿದರಾದ ವಜ್ರಮುನಿ, ಡಾ.ರಾಜಕುಮಾರ, ಸಾಲುಮರದ ತಿಮ್ಮಕ್ಕ… ಹೀಗೆ ಹಲವಾರು ಮಹನೀಯರ ಹೃದಯ ವೈಶಾಲ್ಯತೆಯನ್ನು ಓದುವಾಗ ಖಂಡಿತಾ ನಮ್ಮಲ್ಲಿ ಒಂದು ಉತ್ಕಟವಾದ ಭಾವ ಮೂಡುತ್ತದೆ. ಕರ್ತವ್ಯ ಪ್ರಜ್ಞೆ , ನಿಸ್ವಾರ್ಥ ಸೇವೆ, ಸ್ವಾಭಿಮಾನ, ಗೌರವ,ಸಹಾಯ , ಸಹಕಾರ,ಕರುಣೆ, ವೃತ್ತಿನಿಷ್ಠೆ , ಪರಿಸರ ಪ್ರಜ್ಞೆ,ಮಾತೃ ವಾತ್ಸಲ್ಯ ಇನ್ನೂ ಹಲವಾರು ಮೌಲ್ಯಗಳ ಪರಿಮಳವನ್ನು ಪಸರಿಸುವ ಕೃತಿ ಇದಾಗಿದೆ.

About the Author

ಶೈಲಾ ಸಿ.ಬಿ

ಲೇಖಕಿ ಶೈಲಾ ಸಿ.ಬಿ ಅವರು  ಎಂ.ಎ., ಎಂ.ಎಡ್ ಪದವೀಧರರು. ವೃತ್ತಿಯಿಂದ ಉಪನ್ಯಾಸಕಿ. ಬಳ್ಳಾರಿಯಲ್ಲಿ 24-09-1960 ರಂದು ಜನಿಸಿದರು. ತಂದೆ ಬಿ.ಟಿ. ಬಸವರಾಜಪ್ಪ, ತಾಯಿ-ಬಿ. ವೀರ ಮಂಗಳ. ತಾಯಿಗಾದ ನೋವು (ಕವನ ಸಂಕಲನ-2002)  ಪ್ರಕಟವಾಗಿದೆ. ...

READ MORE

Related Books