ಅಂತರಂಗದ ವಿಜ್ಞಾನ: ಆನಂದಕ್ಕೆ ಯೋಗಿಯ ಕೈಪಿಡಿ

Author : ಸದ್ಗುರು (ಜಗ್ಗಿ ವಾಸುದೇವ)

Pages 324

₹ 225.00




Year of Publication: 2014
Published by: ಸಪ್ನ ಬುಕ್ ಹೌಸ್,
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಪ್ರವಚನ ಖ್ಯಾತಿಯ ಧಾರ್ಮಿಕ ಗುರು ಸದ್ಗುರು (ಜಗ್ಗಿ ವಾಸುದೇವ) ಅವರ ಕೃತಿ-ಅಂತರಂಗದ ವಿಜ್ಞಾನ. ಆನಂದಕ್ಕೆ ಯೋಗಿಯ ಕೈಪಿಡಿ ಎಂಬುದು ಈ ಕೃತಿಗೆ ನೀಡಿರುವ ಉಪಶೀರ್ಷಿಕೆ. ಈ ಕೃತಿಯ ಆಂಗ್ಲ ಆವೃತ್ತಿಯ 2ಲಕ್ಷ ಪ್ರತಿಗಳು ಮಾರಾಟವಾಗಿದೆ. ಈ ಕೃತಿಯು ಪ್ರಪಂಚದ 14 ಭಾಷೆಗಳಲ್ಲಿ ಅನುವಾದಗೊಂಡಿದೆ. ಬದುಕಿನ ರಹಸ್ಯತಮ, ನಿಗೂಢ ಅಂಶಗಳನ್ನು, ಅತ್ಯಂತ ಸರಳ ಭಾಷೆಯಲ್ಲಿ ವಿವರಿಸಿದ್ದೇ ಓದುಗರ ಆಕರ್ಷಣೆಗೆ ಪ್ರಮುಖ ಕಾರಣ. ಅಂತರಂಗವು ಸರಳತೆಯನ್ನು ಬಯಸುತ್ತದೆ. ಆದೇ ಅದರ ಮೂಲ ವಿಜ್ಞಾನ. ಬದುಕಿನಲ್ಲಿ ಸಂಕೀರ್ಣತೆಯನ್ನು ನಾವು ತೆಗೆದುಕೊಂಡು ಬರುತ್ತೇವೆ. ಸಮಸ್ಯೆ ಇಲ್ಲದಿದ್ದರೂ ನಮ್ಮ ದೌರ್ಬಲ್ಯದ ಪರಿಣಾಮ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳುತ್ತೇವೆ. ಹೀಗೆ ಮನೋಬಲ ಹೆಚ್ಚಿಸುವ ಅಂಶಗಳು ಅಂತರಂಗ ಶೋಧದಲ್ಲೇ ಇವೆ ಎಂಬ ಸತ್ಯವನ್ನು ಮನವರಿಕೆ ಮಾಡಿಕೊಡುವ ಕೃತಿ ಇದು.

About the Author

ಸದ್ಗುರು (ಜಗ್ಗಿ ವಾಸುದೇವ)

.ಜಗ್ಗಿ ವಾಸುದೇವ ಅವರು ಜನಮಾನಸದಲ್ಲಿ ‘ಸದ್ಗುರು’ ಎಂದೇ ಖ್ಯಾತಿ. ಭಾರತೀಯ ಪರಂಪರೆ-ಸಂಸ್ಕೃತಿ, ಮಾನವ ಸ್ವಭಾವಗಳ ವ್ಯಾಖ್ಯಾನ, ಸಾಮಾಜಿಕ ಆಚರಣೆ-ಹಬ್ಬಗಳ-ಧಾರ್ಮಿಕ ವಿಧಿ-ವಿಧಾನಗಳನ್ನು ತಮ್ಮದೇ ವಿಶಿಷ್ಟ ವೈಚಾರಿಕ ದೃಷ್ಟಿಕೋನದಿಂದ ಪ್ರವಚನಗಳನ್ನು ಹೇಳುವುದು ಇವರ ವ್ಯಕ್ತಿತ್ವದ ಪ್ರಮುಖ ಅಂಶ.  ಕೃತಿಗಳು: ಮರಣ,  ...

READ MORE

Related Books