ಅನುಭಾವ: ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ

Author : ಬಸವರಾಜ ಕಲ್ಗುಡಿ

Pages 294

₹ 225.00




Year of Publication: 2013
Published by: ಬರಹ ಪಬ್ಲಿಷಿಂಗ್ ಹೌಸ್
Address: ಬೆಂಗಳೂರು
Phone: 9448102158

Synopsys

ಡಾ. ಬಸವರಾಜ ಕಲ್ಗುಡಿ ಅವರು ಬರೆದ ಕೃತಿ-ಅನುಭಾವ; ಸಾಂಸ್ಕೃತಿಕ ಸಮಸ್ತೆ ಮತ್ತು ಹುಡುಕಾಟ. ಈ ಶೀರ್ಷಿಕೆಯ ಕೃತಿಯು ಅವರ ಸಂಶೋಧನಾ ಮಹಾಪ್ರಬಂಧ. ಇಡೀ ಸಂಶೋಧನೆಯನ್ನು ನಾಲ್ಕು ಪ್ರಮುಖ ಭಾಗಗಳಾಗಿ ವಿಭಾಗಿಸಿದ್ದು, 1. ಅಧ್ಯಯನದ ತಾತ್ವಿಕ ಹಿನ್ನೆಲೆ 2. ಮನುಷ್ಯನ ಅಸ್ತಿತ್ವವವನ್ನು ಕುರಿತ ಆಲೋಚನೆಯ ಕ್ರಮಗಳು, 3. ಸಮಾಜದ ಸ್ವರೂಪವನ್ನು ಕುರಿತ ಹಾಗೆ ನಡೆದ ಮಧ್ಯಕಾಲೀನ ಚಿಂತನೆಗಳು ಹಾಗೂ 4. ಕಾಲದ ಗ್ರಹಿಕೆಯ ಸ್ವರೂಪಗಳು ಚಾರಿತ್ರಿಕ ಅರಿವಿನ ಲಕ್ಷಣಗಳು ಇವುಗಳಲ್ಲಿ ರೂಪುಗೊಂಡ ಬಗೆಗಳು.

ಈ ಎಲ್ಲ ಪ್ರಮುಖ ಶೀರ್ಷಿಕೆಗಳಡಿ ಚಾರಿತ್ರಿಕ ಅಧ್ಯಯನದ ನೆಲೆಗಳು, ವೀರಶೈವ ಸಿದ್ಧಾಂತದ ನೆಲೆ ಹಾಗೂ ಚಾರಿತ್ರಿಕ ಪ್ರಜ್ಞೆ, ಧಾರ್ಮಿಕ ಮನುಷ್ಯನ ಸ್ವರೂಪಗಳು, ಭಕ್ತಿ ಪಂಥ ಹಾಗೂ ಅನುಭಾವ ಸ್ವರೂಪಗಳು, ಬಸವಣ್ಣನ ವಚನಗಳಲ್ಲಿ ಮಾನವ ಅಸ್ತಿತ್ವದ ಸ್ವರೂಪಗಳು, ಅಕ್ಕಮಹಾದೇವ: ಪ್ರೇಮ ಮತ್ತು ಕಾಮದ ಸಂಘರ್ಷ ಹಾಗೂ ಅನುಭಾವದ ಆಶಯ, ಅನುಷ್ಯನ ಅಸ್ತಿತ್ವದ ಸ್ವರೂಪ: ಅಲ್ಲಮನ ವಿಚಾರಗಳು, ಹಿಂದೂ ಧರ್ಮದ ಜಾತಿ ವ್ಯವಸ್ಥೆ: ಭಕ್ತಿಪಂಥ, ವಚನ ಚಳವಳಿ, ಅಕ್ಕ ಮಹಾದೇವಿಯ ವಚನಗಳಲ್ಲಿ ಸಮಾಜದ ಸ್ವರೂಪ, ಐತಿಹಾಸಿಕ ಕಾಲದ ಸ್ವರೂಪ ಹಾಗೂ ಬಸವ, ಅಕ್ಕಮಹಾದೇವಿ ಮತ್ತು ಅಲ್ಲಮ ಕಾಲವನ್ನು ಗ್ರಹಿಸಿದ ನೆಲೆಗಳು ಇತ್ಯಾದಿ ವಿಷಯಗಳ ವಿಶ್ಲೇಷಣೆಯನ್ನು ಈ ಕೃತಿ ಒಳಗೊಂಡಿದೆ.

About the Author

ಬಸವರಾಜ ಕಲ್ಗುಡಿ

1956ರಲ್ಲಿ ಬೆಳಗಾವಿಯಲ್ಲಿ ಜನಿಸಿದ ಬಸವರಾಜ ಕಲ್ಗುಡಿ ಅವರು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಕಾಲೇಜು ವ್ಯಾಸಂಗವು ಬೆಂಗಳೂರಿನಲ್ಲಿ ನಡೆಸಿದರು.  ಎಂ.ಎ. (1975) ಪದವೀಧರರು. ‘ಅನುಭಾವ ಮತ್ತು ಸಾಂಸ್ಕೃತಿಕ ಸಮಸ್ಯೆಗಳು' ಸಂಶೋಧನಾ ಪ್ರಬಂಧಕ್ಕೆ (1983) ಪಿಎಚ್.ಡಿ. ಪದವಿ. ಕರ್ನಾಟಕದಲ್ಲಿಯ ಮಾಸ್ತಿಕಲ್ಲು ಕುರಿತಾಗಿ ಕ್ಷೇತ್ರಕಾರ್ಯ ಮಾಡಿ ಮಂಡಿಸಿದ ಮತ್ತೊಂದು ಸಂಶೋಧನೆ `ಮಹಾಸತಿ ಆಚರಣೆ'. ಅವರ ಅಧ್ಯಯನ ಶಾಸನವನ್ನು ಕುರಿತಾಗಿದ್ದರೂ, ಶಾಸನದ ಪಠ್ಯವನ್ನು ಕನ್ನಡ ಸಂಸ್ಕೃತಿಯ ಶೋಧನೆಗೆ ಪ್ರಮುಖ ಆಕರವಾಗಿ ಬಳಸಿದ್ದಾರೆ. ಸಂಸ್ಕೃತಿ ಕುರಿತಂತೆ ವ್ಯಾಖ್ಯಾನಿಸುವಲ್ಲಿ ಕಲ್ಗುಡಿಯವರು ಸಂಸ್ಕೃತಿಯಲ್ಲಿಯ ಚಲನೆಯ ಪಲ್ಲಟವನ್ನು ಸಮಗ್ರವಾಗಿ ವಿವಿಧ ನೆಲೆಗಳಿಂದ ಶೋಧಿಸುತ್ತಾರೆ. ಕಲ್ಗುಡಿಯವರು ವಚನ ಸಾಹಿತ್ಯ ಕುರಿತ ಸಂಶೋಧನಾತ್ಮಕ ಅಧ್ಯಯನದಲ್ಲಿ ವಿವಿಧ ಜ್ಞಾನಶಿಸ್ತುಗಳನ್ನು ಒಳಗೊಂಡಿದೆ. ಅವರು ವರ್ತಮಾನದ ಹಿನ್ನೆಲೆಯಿಂದ ವಚನ ಸಂಸ್ಕೃತಿಯನ್ನು ವ್ಯಾಖ್ಯಾನಿಸಿದ್ದು, ...

READ MORE

Related Books