ಅನುಭಾವ

Author : ಶ್ರೀರಾಮ ಇಟ್ಟಣ್ಣವರ

Pages 283

₹ 200.00




Year of Publication: 2019
Published by: ಶ್ರೀ ಗುರುದೇವ ದೇವರ ಗುರು ಪಟ್ಟಾಧಿಕಾರ ಮಹೋತ್ಸವ
Address: ಬೀಳಗಿ, ಬಾಗಲಕೋಟೆ ಜಿಲ್ಲೆ

Synopsys

ಜಾನಪದ ತಜ್ಞ ಡಾ. ಶ್ರೀರಾಮ ಇಟ್ಟಣ್ಣವರ  ಅವರು ಸಂಪಾದಿತ ಕೃತಿ ’ಅನುಭಾವ’. ಬೀಳಗಿಯ ಕಲ್ಲಡ್ಕ ಶ್ರೀ ಗುರುಪಾದ ದೇವರ ಪಟ್ಟಾಧಿಕಾರ ಮಹೋತ್ಸವದ ಸಂದರ್ಭದಲ್ಲಿ ಹೊರತಂದ ಸಂಪಾದಿತ ಕೃತಿ ಇದು. ಅನುಭಾವ ಪರಂಪರೆಯಲ್ಲಿ ವಿಶೇಷ ಸಾಧನೆ ಮಾಡಿದ ಒಟ್ಟು 13 ಜನ ಅನುಭಾವಿಗಳ ವಿಚಾರ ಧಾರೆಗಳನ್ನು ವಿದ್ವಜ್ಜನರಿಂದ ಬರೆಯಿಸಿ ಸಂಪಾದಿಸಲಾಗಿದೆ. ಜನಪದರ ಸಾಹಿತ್ಯ, ಕಲೆಗಳಲ್ಲಿ ಅಡಕವಾಗಿರುವ ಅನುಭಾವ ಪರಂಪರೆ ಲೇಖನಗಳೂ ಇಲ್ಲಿವೆ. ಅನುಭಾವ ಪರಿಕಲ್ಪನೆ ಮತ್ತು ಕನ್ನಡ ಸಾಹಿತ್ಯದಲ್ಲಿ ಅನುಭಾವ ಪರಂಪರೆ ಎಂಬೆರಡು ಆರಂಭದ ಲೇಖನಗಳು ಮುಂದಿನ ಲೇಖನಗಳಿಗೆಲ್ಲ ಪ್ರವೇಶಿಕೆಗಳಾಗಿವೆ.

About the Author

ಶ್ರೀರಾಮ ಇಟ್ಟಣ್ಣವರ
(01 June 1948)

ಶ್ರೀಕೃಷ್ಣ ಪಾರಿಜಾತ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್‌.ಡಿ . ಪದವಿ ಪಡೆದಿರುವ ಶ್ರೀರಾಮ ಇಟ್ಟಣ್ಣವರ ಅವರು ಬೀಳಗಿಯ ಶ್ರೀಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಇಟ್ಟಣ್ಣವರ ಅವರು ಬಯಲಾಟ-ಕೃಷ್ಣ ಪಾರಿಜಾತ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಹೊಳಿಸಾಲ ಬಳ್ಳಿ; ಗಾಲಿ ಉಳ್ಳತೈತಿ; ನೂರು ಶಿಶುಗೀತೆಗಳು; ಹಾಡುಣು ಬಾಪ್ರೇಮದ ಪಾಡಾ; ಹೊತ್ತು ಮೂಡುವ ಸಮಯ (ಕಾವ್ಯ), ಪಾರಿಜಾತದವರು (ನಾಟಕ),  ಜನಪದ ಪಶುವೈದ್ಯ ಬೀಳಗಿ ಸಿದ್ಧಪ್ಪ; ಕೊಣ್ಣೂರ ಕರಿಸಿದ್ದೇಶ್ವರ ದೇವಸ್ಥಾನ (ಜಾನಪದೀಯ) ಹಲಗಲಿ-ಗ್ರಾಮ ಚಾನಪದ (ಅಧ್ಯಯನ), ಲಾವಣಿ: ಸಣ್ಣಾಟ (ಸಂಶೋಧನೆ)  ತಟ್ಟಿ ಚಿನ್ನ-ಸಣ್ಣಾಟ; ...

READ MORE

Related Books