ಅನುಪಮ ಆಖ್ಯಾನ -ಉಮೇಶ ದೇಸಾಯಿ ಅವರು ಬರೆದ ಇ-ಕಾದಂಬರಿ. ಅನುಪಮಾ ಈಗಿನ ಪೀಳಿಗೆಯ ಯುವತಿ..ಇವಳು ನೇರವಾಗಿ ಮುನ್ನೆಲೆಗೆ ಬಂದು ಕತೆ ಹೇಳುವುದಿಲ್ಲ ಬದಲು ಇವಳ ಮಾವ, ಅತ್ತೆ ಗಂಡ ಹಾಗೂ ಮ್ಯಾರೇಜ ಕೌನ್ಸಿಲರ್ ಹೀಗೆ ಅವಳ ಸುತ್ತಲಿನ ಜನ ಅನುಪಮಾಳ ಕತೆ ಹೇಳುತ್ತಾ ಹೋಗುತ್ತಾರೆ. ಕಥಾ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ ಎಲ್ಲವೂ ಓದುಗರ ಗಮನ ಸೆಳೆಯುತ್ತವೆ.
ಹುಬ್ಬಳ್ಳಿಯಲ್ಲಿ ಜನಿಸಿದ ಉಮೇಶ ದೇಸಾಯಿ ಸದ್ಯ ಬೆಂಗಳೂರಿನಲ್ಲಿ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲಿಂದಲೂ ಸಾಹಿತ್ಯದಲ್ಲಿ ಆಸಕ್ತಿ. ’ಚೌಕಟ್ಟಿನಾಚೆ’ ಎಂಬ ಕಥಾಸಂಕಲನ ಹಾಗೂ ’ಭಿನ್ನ’ ಎಂಬ ಕಾದಂಬರಿ ಪ್ರಕಟಿಸಿದ್ದಾರೆ. ಸದ್ಯದಲ್ಲಿಯೇ ’ಅನಂತಯಾನ’ ಎನ್ನುವ ಕಾದಂಬರಿ ಬರಲಿದೆ. ಸ್ವತಃ ಪ್ರಕಾಶನ ಸಂಸ್ಥೆ ನಡೆಸುತ್ತಿದ್ದು ಅನೇಕ ಹೊಸಬರ ಕೃತಿ ಪ್ರಕಟಣೆ ಮಾಡುತ್ತಿದ್ದಾರೆ. ...
READ MORE