ಅನುಪಮ ಅಭಿನಂದನ

Author : ಬೋಳಂತಕೋಡಿ ಈಶ್ವರ ಭಟ್ಟ

Pages 400

₹ 80.00




Year of Publication: 1988
Published by: ಕರ್ನಾಟಕ ಸಂಘ, ಪುತ್ತೂರು

Synopsys

ಅನುಪಮ ಅಭಿನಂದನ ಎಂಬ ಪುಸ್ತಕವು ಲೇಖಕಿ ಅನುಪಮಾ ನಿರಂಜನ ಅವರ ಅಭಿನಂದನಾ ಗ್ರಂಥವಾಗಿದೆ. ಬೋಳಂತಕೋಡಿ ಈಶ್ವರ ಭಟ್ಟ ಅವರ ಸಂಪಾದಕತ್ವದಲ್ಲಿ ಬಂದಿರುವ ಕೃತಿ ಇದು. ಡಾ. ಅನುಪಮಾ ನಿರಂಜನ ಅವರು ಕನ್ನಡದ ಮೊದಲ ಪಂಕ್ತಿಯ ಲೇಖಕಿಯರಲ್ಲಿ ಒಬ್ಬರು. ವಿಮರ್ಶಕರ ಅವಜ್ಞೆಗೆ ತುತ್ತಾಗಿದ್ದರೂ, ಅವರ "ಘೋಷ" ಮತ್ತು “ಮಾಧವಿ" ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿದ ಕೃತಿಗಳು. ಆತ್ಮವೃತ್ತ “ನೆನಪು: ಸಿಹಿ - ಕಹಿ" ಒಂದು ವಿಶಿಷ್ಟ ಆತ್ಮಕಥನ. ಅವರ ವಿಜ್ಞಾನ ಸಾಹಿತ್ಯ ಕನ್ನಡಕ್ಕೆ ಅಮೂಲ್ಯ ಕೊಡುಗೆ. ಈ ಕೃತಿಗೆ ವಿ.ಬಿ.ಮೊಳೆಯಾರ ಮತ್ತು ವಿ.ಬಿ. ಅರ್ತಿಕಜೆಯವರು ಸಹ ಸಂಪದಾಕರಾಗಿದ್ದಾರೆ. 

About the Author

ಬೋಳಂತಕೋಡಿ ಈಶ್ವರ ಭಟ್ಟ

ಬೋಳಂತಕೋಡಿ ಎನ್ನುವುದು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ಒಂದು ಪುಟ್ಟ ಪ್ರದೇಶಕ್ಕೆ ಇರುವ ಹೆಸರು. ಆ ಹೆಸರು ಕನ್ನಡದ ಅಕ್ಷರಗಳು ಇರುವಷ್ಟೂ ದಿನ ಇರಬೇಕೆನ್ನುವ ಹಾಗೆ ಪುಸ್ತಕ ಪ್ರೀತಿಯಲ್ಲಿ ಅದನ್ನು ಶಾಶ್ವತಗೊಳಿಸಿದವರು, ಅಲ್ಲಿ ಹುಟ್ಟಿ ಬೆಳೆದ ಈಶ್ವರ ಭಟ್ಟರು. ವಿಶ್ವವಿದ್ಯಾನಿಲಯಗಳು ಪ್ರಕಟನೆಗೆ ಉತ್ಸಾಹ ತೋರಿಸಬೇಕಿದ್ದ "ಉಗ್ರಾಣ ಸಾಹಿತ್ಯ", ಎಂ.ಎನ್. ಕಾಮತ್ ಸಾಹಿತ್ಯ'ದಂಥ ಬೃಹತ್ ಸಾಹಿತ್ಯ ಸಂಪುಟಗಳ ಜೊತೆ ನೂರಾರು ಮೌಲಿಕ ಸಾಹಿತ್ಯ ಕೃತಿಗಳ ಪ್ರಕಟಣೋತ್ಸವವನ್ನೇ ಕೈಕೊಂಡ ಅಪರೂಪದ ಸಾರ್ಥಕ ಬದುಕು ಅವರದು. ಅಣ್ಣಂದಿರಾದ ಬಿ.ಎಂ. ಶರ್ಮ, ಬಿ. ಶಂಕರ ಭಟ್ಟರು, ಇವರು ಚಿಕ್ಕವರಿದ್ದಾಗಲೇ ಕನ್ನಡ ಪ್ರಪಂಚ ಪ್ರಕಾಶ ...

READ MORE

Related Books