ಅನುಪಮ ಕಥನ

Author : ಅನುಪಮಾ ಮಂಗಳವೇಡೆ

Pages 300

₹ 200.00




Year of Publication: 2018
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ಬೀದಿ, ಹುಬ್ಬಳ್ಳಿ.

Synopsys

ಅಮ್ಮನಾದ ಬಳಿಕ ಅನುಪಮಾ ಮಂಗಳವಾಡೆ ಎಂಬ ಅಮೆರಿಕನ್ನಡತಿಯು ತನ್ನ ಬಾಲ್ಯದ ಕನಸನ್ನು ನನಸು ಮಾಡಿದ ಕಥೆ. ಅನುಪಮ ಅವರ ತಂದೆತಾಯಿ ಅದ್ಯಾಪಕರಾಗಿದ್ದರು.ಈಕೆ ಹಾಸನ ಮೂಲದವಳು. ಚಿಕ್ಕಂದಿನಿಂದಲೂ ಉತ್ಸಾಹಿಯಾದ ಅನುಪಮ ಶಾಲೆಯ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಹಾಡುವ, ನರ್ತಿಸುವ, ಚರ್ಚಾಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸುತ್ತಿದ್ದರು.

ಡ್ಯಾನ್ಸ್ ಕಲಿಯುವ ಅವರ ಬಾಲ್ಯದ ಕನಸನ್ನು ಮದುವೆಯಾಗಿ ಎರಡು ಮಕ್ಕಳ ತಾಯಿಯಾದ ಮೇಲೆ ಪೂರ್ತಿಗೊಳಿಸಿದರು. ಎರಡೂ ಮಕ್ಕಳಾದ ಕೂಡಲೇ ಜೀವನದಲ್ಲಿ ವಿರಕ್ತ ಭಾವ ಮೂಡುವ ಹೆಣ್ಣುಗಳ ಮಧ್ಯೆ ಅನುಪಮಾ ಬೇರೆಯಾಗಿ ನಿಲ್ಲುತ್ತಾರೆ. ಈ ಕೃತಿಯಲ್ಲಿ ಅನುಪಮಾ ಅವರು ತಮ್ಮ ಭರತನಾಟ್ಯ ಸಾಧನೆಯ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲ ಅವರು ಬರೆದ ಲೇಖನಗಳು ಸಣ್ಣ ಕಥೆಗಳೂ ಈ ಕೃತಿಯಲ್ಲಿವೆ. ಈ ಕೃತಿಯಲ್ಲಿ ತಮ್ಮ ಪ್ರತಿಭೆಯನ್ನು ಬಿಡಿಸಿಟ್ಟು ಸಮಾಜಕ್ಕೆ ಮಾದರಿಯಾಗಿದ್ದಾರೆ.

About the Author

ಅನುಪಮಾ ಮಂಗಳವೇಡೆ

ಅಮೆರಿಕಾದ ಶಿಕಾಗೋ ನಗರದಲ್ಲಿ ನೆಲಸಿರುವ ಅನುಪಮಾ ಮಂಗಳವೇಡೆ,  ವೃತ್ತಿಯಲ್ಲಿ ಇಂಜಿನಿಯರ್. ಸಂಗೀತ, ನೃತ್ಯ ಹಾಗೂ ಅಭಿನಯದಲ್ಲಿ ವಿಶೇಷ ಆಸಕ್ತಿ. ಭರತನಾಟ್ಯ ನೃತ್ಯಗಾರ್ತಿಯು ಹೌದು. ವಿದ್ಯಾರಣ್ಯ ಕನ್ನಡ ಕೂಟದ ಸದಸ್ಯರಾಗಿದ್ದು, 'ಡಿಂಡಿಮ' ಎಂಬ ಸಂಚಿಕೆಯ ಸಂಪಾದಕ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬರೆದ ಕೆಲವು ಕವನ, ಕಥೆ ಮತ್ತು ಪ್ರಬಂಧಗಳು ’ದಟ್ಸ್ ಕನ್ನಡ ಡಾಟ್ ಕಾಂ ನಲ್ಲಿ ಪ್ರಕಟವಾಗಿವೆ.  ...

READ MORE

Related Books