ಅನುರೂಪ

Author : ಶ್ರೀಧರ ಹೆಗಡೆ ಭದ್ರನ್‍

Pages 200

₹ 200.00




Year of Publication: 2018
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

'ಅನುರೂಪ' ಯುವ ವಿದ್ವಾಂಸ ಶ್ರೀಧರ ಹೆಗಡೆ ಭದ್ರನ್ ಅವರು ರಚಿಸಿದ ಪರಂಪರೆ-ಸಾಹಿತ್ಯ-ಸಂಸ್ಕೃತಿ-ವ್ಯಕ್ತಿ ಕುರಿತ ಲೇಖನಗಳ ಸಂಕಲನ.

ಈ ಸಂಕಲನದ ಬಗ್ಗೆ ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಅಭಿಪ್ರಾಯ ಹೀಗಿದೆ-

ಪ್ರಾಚೀನ ಕನ್ನಡ ಸಾಹಿತ್ಯದ ಜೊತೆಗೆ ಸಂಸ್ಕೃತ ಹಾಗೂ ಆಧುನಿಕ ಸಾಹಿತ್ಯವನ್ನೂ ಪ್ರೀತಿಯಿಂದ ಆಧ್ಯಯನ ಮಾಡಿರುವ ಶ್ರೀಧರ ಹೆಗಡೆ ಭದ್ರಣ್ ನಮ್ಮ ವಿದ್ವತ್ ಪರಂಪರೆಗೆ ಸೇರಿದವರು. ಅಪಾರ ಪುಸ್ತಕ ಪ್ರೀತಿಯ ಭದ್ರನ್, ಹೊತ್ತಗೆಗಳ ಸಂಗದಲಿ ಹೊತ್ತುಹೋಗುವುದೇ ತಿಳಿಯದಷ್ಟು ಅಧ್ಯಯನ ವ್ಯಾಮೋಹಿ. ಗಮನಿಸಬೇಕಾದ ಸಂಗತಿಯೆಂದರೆ- ಇವರ ಆಳವಾದ ವಿದ್ವತ್ತು ಜಡವಲ್ಲ, ಸಮಕಾಲೀನ ಸಮಸ್ಯೆಗಳಿಗೆ ಪರಿಹಾರಗಳ ಸಾಧ್ಯತೆಗಳನ್ನು ಅರಸುವ ನಿರಂತರ ಹುಡುಕಾಟ, ಸಾಮಾಜಿಕ ಸಂಕಟಗಳಿಗೆ ಸಾಹಿತ್ಯಕ್ಕಿರುವ ಔಷಧೀಯ ಗುಣ ಸಾಂತ್ವನ ನೀಡಬಲ್ಲುದು ಎಂದು ನಂಬುವ ಶ್ರೀಧರ, ತಮ್ಮ ವಿಸ್ತಾರ ಆಧ್ಯಯನದ ಮೂಲಕ ನಮ್ಮ ಕಾಲದ ತವಕ-ತಲ್ಲಣಗಳಿಗೆ ಸಲ್ಲುವ ಒಳನೋಟ ನೀಡುತ್ತಾರೆಂದೇ ನಮಗೆ ಮುಖ್ಯರಾಗುತ್ತಾರೆ. ಪ್ರಾಚ್ಯ ಆಧ್ಯಯನ, ಜೈನಸಾಹಿತ್ಯ, ವೀರಶೈವ ಪರಂಪರೆ, ಅನುಸೃಷ್ಟಿಯ ಜಗತ್ತು - ಇವುಗಳಲ್ಲಿ ವಿಶೇಷ ಅಧ್ಯಯನ ಮಾಡಿರುವ ಶ್ರೀಧರ ಹೆಗಡೆ ಭದ್ರನ್ ಇವೆಲ್ಲವೂ ಇಂದಿಗೆ ಹೇಗೆ ಸಲ್ಲುತ್ತವೆಂದು ಪರಿಶೀಲಿಸುವ ಹೊಸ ತಲೆಮಾರಿನ ಸೂಕ್ಷ್ಮ ಚಿಂತಕ, ಅವರ ಈ ಪುಸ್ತಕದಲ್ಲಿ ಇಂತಹ ಅನೇಕ ಒಳನೋಟಗಳಿವೆ.

-

About the Author

ಶ್ರೀಧರ ಹೆಗಡೆ ಭದ್ರನ್‍
(01 November 1977)

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರಿನಲ್ಲಿ ಜನನ. ಮೂರೂರು. ಕುಮಟಾ, ಧಾರವಾಡಗಳಲ್ಲಿ ವಿದ್ಯಾಭ್ಯಾಸ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ರಾಂಕ್‌ನಲ್ಲಿ ಬಂಗಾರದ ಪದಕಗಳೊಂದಿಗೆ ಕನ್ನಡ ಎಂ.ಎ., ಪ್ರಶಸ್ತಿ ಸಹಿತ ಪ್ರಥಮ ವರ್ಗದಲ್ಲಿ ಪ್ರಾಚ್ಯಲೇಖನ ಅಧ್ಯಯನ, ಬಸವ ಅಧ್ಯಯನ, ಟ್ರಾನ್ಸ್‌ಲೇಷನ್, ಜೈನಶಾಸ್ತ್ರಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ. ಆಧುನಿಕ ಕನ್ನಡ ಮಾಹಾಕಾವ್ಯಗಳು-ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ. ಹೊನ್ನಾವರದ ಎಸ್.ಡಿ.ಎಂ. ಪದವಿ ಕಾಲೇಜು, ಧಾರವಾಡದ ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆಗಳಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದ ಜೈನಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಕನಕ ಅಧ್ಯಯನ ಪೀಠಗಳಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯಲ್ಲಿ ಹಂಗಾಮಿ ವಾರ್ತಾವಾಚಕ, ಪ್ರಸ್ತುತ ಧಾರವಾಡ ತಾಲೂಕಿನ ನಿಗದಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ...

READ MORE

Related Books