ಅಪರಾಜಿತ

Author : ಧನಪಾಲ ನಾಗರಾಜಪ್ಪ

Pages 72

₹ 70.00
Year of Publication: 2018
Published by: ಧನಪಾಲ ನಾಗರಾಜಪ್ಪ
Address: ಹೊಸಕೋಟೆ, ಬೆಂಗಳೂರು. 562122
Phone: 6362567802, 7892546523

Synopsys

ಸಲೀಂ ತೆಲುಗು ಭಾಷೆಯ ಸೂಕ್ಷ್ಮ ಸಂವೇದಿ ಲೇಖಕ. ಅವರು ತೆಲುಗಿನಲ್ಲಿ ಪ್ರಕಟಿಸಿದ 'ಅಪರಾಜಿತ' ಮಕ್ಕಳ ಕಾದಂಬರಿಯನ್ನು ಧನಪಾಲ ನಾಗರಾಜಪ್ಪ ಅವರು ಅದೇ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. 'ಲಿಟಲ್” ಎಂಬ ನಾಯಿಮರಿಯಿಂದಲೇ ಕಥೆ ಪ್ರಾರಂಭಿಸುವುದು ಮಕ್ಕಳನ್ನು ಸೆಳೆಯಬಹುದಾದ ಹಂದರ. ರಜಿತ ಎನ್ನುವ ಪುಟ್ಟ ಬಾಲಕಿ ಮತ್ತು ಲಿಟಲ್ ಎಂಬ ನಾಯಿಯ ನಡುವಿನ ಸಂಬಂಧವನ್ನು ತಿಳಿಸುವ ಈ ಕಿರು ಕಾದಂಬರಿ ರೋಚಕತೆ, ಸಾಹಸ ಇತ್ಯಾದಿಯನ್ನು ಒಳಗೊಂಡಿದೆ. ಮರಿಯಾಗಿ ಮನೆಗೆ ಬರುವ ಲಿಟಲ್ ಆ ಕುಟುಂಬದ ಸಂಬಂಧಗಳನ್ನು, ದೃಷ್ಟಿಕೋನಗಳನ್ನು ಬದಲಿಸುತ್ತಲೇ ರಜಿತಾಳ ಎಲ್ಲ ಸಾಹಸ ಕಾರ್ಯಗಳಲ್ಲೂ ಭಾಗವಹಿಸಿ ಆಕೆ ಅತ್ಯುನ್ನತ ಪುರಸ್ಕಾರ ಪಡೆಯುವುದರಲ್ಲಿ ತನ್ನ ಪಾತ್ರವನ್ನು ನಿಭಾಯಿಸುತ್ತದೆ.

About the Author

ಧನಪಾಲ ನಾಗರಾಜಪ್ಪ

ಧನಪಾಲ ನಾಗರಾಜಪ್ಪನವರು ಅನುವಾದಕರಾಗಿ ಚಿರಪರಿಚಿತರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಲೀಂ ಅವರ ಆಯ್ದ ಹದಿನೈದು ತೆಲುಗು ಕಥೆಗಳನ್ನು ‘ಕಾಡುವ ಕಥೆಗಳು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿರುವುದಲ್ಲದೆ ‘ಜೀವನ್ಮೃತರು’, ‘ಮೇಧ-017’ ಹಾಗೂ ಅಪರಾಜಿತ ಎಂಬ ಮೂರು ಕಾದಂಬರಿಗಳನ್ನು ಕೂಡಾ ಕನ್ನಡಕ್ಕೆ ಅನುವಾದಿಸಿದ್ದಾರೆ. ಇಷ್ಟೇ ಅಲ್ಲದೇ ಒಂಬತ್ತು ಲೇಖಕರ ಆಯ್ದು ಇಪ್ಪತ್ತೈದು ತೆಲುಗು ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ ‘ತಣ್ಣೀರ ಬಟ್ಟೆಯ ಬಿಸಿ’ ಎಂಬ ಹೆಸರಿನಲ್ಲಿ ಕಥಾ ಸಂಕಲನವಾಗಿ ಪ್ರಕಟಿಸಿದ್ದಾರೆ.  ...

READ MORE

Related Books