ಅಪೂರ್ಣವಲ್ಲ

Author : ಸುಧಾ ಎಂ

Pages 112

₹ 120.00




Year of Publication: 2022
Published by: ಸ್ವಸ್ತಿ ಪ್ರಕಾಶನ
Address: C/of :ಐಸಿರಿ ಲೇಡೀಸ್ ಸೆಂಟರ್. ಹೊಸ ಬಸ್ಟ್ಯಾಂಡ್ ಹತ್ತಿರ. ಎನ್.ಎಚ್.66 ಕುಮಟಾ. 581343 (ಉತ್ತರ ಕನ್ನಡ)
Phone: 9483617879

Synopsys

ಅಪೂರ್ಣ ವಲ್ಲ ಸುಧಾ ಎಂ ಕಥಾಸಂಕಲನವಾಗಿದೆ. ಕಥೆಗಳನ್ನು ಓದಿದ ನಂತರ ನನಗನ್ನಿಸಿದ್ದು, ಈ ಕಥೆಗಾರರಿಗೆ ಬದುಕಿನ ಕುರಿತು, ಸುತ್ತಲಿನ ಪರಿಸರದ ಕುರಿತು ಹೆಚ್ಚು ಭಾವನಾತ್ಮಕ ಒಳನೋಟವಿದೆ. ಹೀಗಾಗಿ ಪ್ರತೀ ಕಥೆಯ ಪಾತ್ರಗಳನ್ನು ಅವರು ಯಾಂತ್ರಿಕವಾದ ನೆಲೆಗಟ್ಟಿನಲ್ಲಿ ಕಟ್ಟದೆ, ಭಾವನೆಗಳೊಂದಿಗೆ ಹಾಗೂ ಒಂದು ನಮೂನೆಯ ತೀವ್ರ ಪ್ರೀತಿಯೊಂದಿಗೆ ಪರಸ್ಪರ ಬೆಸೆಯುತ್ತಾರೆ. ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ ಕಥೆಗಳನ್ನು ಗ್ರಾಂಥಿಕ ಭಾಷೆಯಲ್ಲಿ ಹೇಳದೆ, ತಾವು ನಿತ್ಯ ಜೀವಿಸುವ, ಆಲೋಚಿಸುವ, ಕನಸು ಕಾಣುವ ತಮ್ಮದೇ ಸೊಗಡಿನಲ್ಲಿ ಬರೆದಿದ್ದಾರೆ; ಇದು ತುಂಬಾ ಮುಖ್ಯವಾದದ್ದು. ಇಲ್ಲಿ ಯಾವ ಕಥೆಗಳೂ ಅಪೂರ್ಣವಲ್ಲ.. ಬದಲಾಗಿ ಪರಿಪೂರ್ಣತೆಯ ಕಡೆಗಿನ ಹೆಜ್ಜೆಗಳು. ಲೇಖನಿ ಇನ್ನಷ್ಟು ಸವೆಯಲಿ. ಸವೆತವು ಮತ್ತಷ್ಟು ಹೊಸ ಕತೆಗಳಿಗೆ ದಾರಿಯಾಗಲಿ. ಸುಧಾ ಅವರಿಗೆ ಶ್ರೇಯಸ್ಸಾಗಲಿ ಎಂದು ಕಾರ್ತಿಕಾದಿತ್ಯ ಬೆಳ್ಗೋಡು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಸುಧಾ ಎಂ

ಸುಧಾ ಎಂ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಒಂದು ಪುಟ್ಟ ಹಳ್ಳಿಯಲ್ಲಿ ರೈತ ಕುಟುಂಬದ ಸದ್ಗೃಹಿಣಿ. ತವರಿನವರೂ ಕೂಡ ಕೃಷಿ ಪ್ರಧಾನ ಕುಟುಂಬವೇ ಆಗಿದ್ದು ಸಣ್ಣಂದಿನಿಂದ ಓದಿನ‌ ಅಭಿರುಚಿ ಇಟ್ಟುಕೊಂಡವರು. ತನ್ನ ಊರಾದ ಕರ್ಕಿಸವಲ್ನಲ್ಲಿ ಪುಟ್ಟದೊಂದು ವಾಚನಾಲಯ ಹುಟ್ಟು ಹಾಕಿ ಮಕ್ಕಳಿಗೆ ಓದಿನ ಅಭಿರುಚಿ ಬೆಳೆಸುತ್ತ ಸಾಮಾಜಿಕ ಕಾರ್ಯಗಳಲ್ಲಿ ತನ್ನ ತಾನು ತೊಡಗಿಸಿಕೊಂಡಿದ್ದಾರೆ . ಈಗ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಘಟಕ ಹಾರ್ಸಿಕಟ್ಟದಲ್ಲಿ ಪ್ರಧಾನ ಪುಸ್ತಕ ಬರಹಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕೃತಿಗಳು : ಅಪೂರ್ಣವಲ್ಲ ...

READ MORE

Related Books