ಅಪ್ಪನ ಹಾದಿ

Author : ರಂಗಸ್ವಾಮಿ ಮೂಕನಹಳ್ಳಿ

Pages 120

₹ 150.00




Year of Publication: 2023
Published by: ಸಾವಣ್ಣ ಎಂಟರ್‌ಪ್ರೈಸಸ್‌
Address: ಸಾವಣ್ಣ ಎಂಟರ್‌ಪ್ರೈಸಸ್‌, ನಂ. 12, ಭೈರಸಂದ್ರ ಮುಖ್ಯರಸ್ತೆ, ಜಯನಗರ 1ನೇ ಬ್ಲಾಕ್‌ ಪೂರ್ವ, ಬೆಂಗಳೂರು-560011
Phone: 080-41229757/ 9036312786

Synopsys

‘ಅಪ್ಪನ ಹಾದಿ’ ಕೃತಿಯು ರಂಗಸ್ವಾಮಿ ಮೂಕನಹಳ್ಳಿ ಅವರ ಲೇಖನ ಸಂಕಲನವಾಗಿದೆ. ಅಣ್ಣ ಸದಾ ಹೇಳುತ್ತಿದ್ದ ಬದುಕಿನ ಪಾಠಗಳು ನೂರಾರು, ಅಂದಿಗೆ ಅವು ಬದುಕಿಗೆ ಬೇಕಾಗುತ್ತದೆ, ಅವು ಅನುಭವದಿಂದ ದಕ್ಕಿದ ಪಾಠ, ನನಗೆ ಸರಾಗವಾಗಿ ಸಿಕ್ಕುತ್ತಿದೆ ಎನ್ನುವ ಲವಲೇಶ ಜ್ಞಾನವೂ ಇರಲಿಲ್ಲ. ಇಂದಿಗೆ ಅಣ್ಣ ಬೆಲೆ ಕಟ್ಟಲಾಗದ ಖಜಾನೆ ನನಗಾಗಿ ಬಿಟ್ಟು ಹೋಗಿದ್ದಾರೆ ಎನ್ನಿಸುತ್ತದೆ ಎಂಬುದನ್ನು ಕೃತಿಯ ಮುಖೇನ ಹಂಚಿಕೊಂಡಿದ್ದಾರೆ ಇಲ್ಲಿ ಲೇಖಕ. ಅಪ್ಪನ ಹಾದಿ ಕೃತಿಯಲ್ಲಿನ ಕೆಲವೊಂದು ನೆನಪುಗಳನ್ನು ಲೇಖಕ ಹೀಗೆ ತೆರೆದಿಟ್ಟಿದ್ದಾರೆ; 'ಭಟ್ಟ ಮಧ್ಯಮವರ್ಗದ ಜನರ ಮುಂದೆ ಹೆಚ್ಚಿನ ಆಯ್ಕೆಗಳಿಲ್ಲ . ನಾವು ಪ್ರಯತ್ನ ಪಡುತ್ತಲೆ ಇರಬೇಕು. ಸೋತಾಗ ಕುಗ್ಗದೆ , ಗೆದ್ದಾಗ ಬೀಗದೆ ನಡೆಯುತ್ತಲೆ ಇರಬೇಕು.' 'ಬದುಕಿಗೆ ಬೇಕಾಗಿರುವುದು ಎಂಪಥಿ , ಸಿಂಪಥಿಯಲ್ಲ'. 'ಲಾಟರಿ ಟಿಕೆಟ್ ಕೊಳ್ಳದಿದ್ದರೆ ಅದು ನಮಗೆ ಸಿಕ್ಕುವ ಸಂಭಾವ್ಯತೆ ಶೂನ್ಯ .ನಾವು ಪ್ರಯತ್ನವನ್ನೇ ಪಡದಿದ್ದರೆ ? ಗೆಲುವಿನ ಸಂಭಾವ್ಯತೆ ಕೂಡ ಶೂನ್ಯ. ಸೊ ಬದುಕಿನಲ್ಲಿ ಚಾನ್ಸ್ ತೆಗೆದುಕೊಳ್ಳುತ್ತಾ ಇರಬೇಕು.' 'ಯಾರೂ ಸೋಲಬೇಕು , ಹಾಳಾಗಬೇಕು ಎಂದು ಯಾವುದನ್ನೂ ಮಾಡುವುದಿಲ್ಲ , ಬಟ್ ಕೆಲವೊಮ್ಮೆ ಸನ್ನಿವೇಶ , ಸಮಯ ನಮಗೆ ಜೊತೆಯಾಗುವುದಿಲ್ಲ ಎಂದಿದ್ದಾರೆ.

About the Author

ರಂಗಸ್ವಾಮಿ ಮೂಕನಹಳ್ಳಿ

ರಂಗಸ್ವಾಮಿ ಮೂಕನಹಳ್ಳಿ ಅವರು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಇರುವ ಗ್ರಾಹಕರಿಗೆ ಹಣ ಹೂಡಿಕೆಯ ತಜ್ಞ. ಸಲಹೆಗಾರರಾಗಿ ವೃತ್ತಿ ನಿರತರು. ಹಲವಾರು ಉದ್ಯಮಗಳಲ್ಲಿ ಸಹ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಹಲವು ಪ್ರಮುಖ ಪತ್ರಿಕೆ ನಿಯತಕಾಲಿಕೆಗಳಲ್ಲಿ ಹಣಕಾಸು ವಿಷಯಗಳ ಬಗ್ಗೆ ತ ಅಂಕಣಗಳನ್ನು ನಿಯಮಿತವಾಗಿ ಬರೆಯುತ್ತ ಬಂದಿದ್ದಾರೆ. ಕನ್ನಡ ಮತ್ತು ಸ್ಪಾನಿಷ್ ಭಾಷೆಯ ಸಮಾನಾಂತರ ಗಾದೆಗಳನ್ನು ಗುರುತಿಸಿ ಕೃತಿಯನ್ನು ರಚಿಸಿದ್ದು, ಇದು ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿದೆ. ಹಣಕಾಸಿಗೆ ಸಂಬಂಧಿಸಿದ ಮೂರು ಅಂಕಣ ಗುಚ್ಛಗಳ ಕೃತಿಗಳು ಸಹ ಪ್ರಕಟಗೊಂಡಿವೆ. ‘ಬದುಕಿಗೊಂದು ಆಶಾಭಾವ, ವಿತ್ತ ಜಗತ್ತು ತಿಳಿಯಬೇಕಾದ ವಿಷಯ ಹಲವು ಹತ್ತು’ ಅವರ ...

READ MORE

Related Books