ಅಪ್ಪಣ್ಣಗೌಡ ಪಾಟೀಲ

Author : ಗುರುಪಾದ ಮರಿಗುದ್ದಿ

Pages 94

₹ 20.00




Year of Publication: 1987
Published by: ಲಿಂಗಾಯತ ಅಧ್ಯಯನಸಂಸ್ಥೆ
Address: ಶ್ರೀ ಜಗದ್ಗುರು ತೋಂಟದಾರ್ಯ ಮಠ,ಗದಗ-582101

Synopsys

ಶ್ರೀ ಅಪ್ಪಣ್ಣಗೌಡ ಪಾಟೀಲರು ಗ್ರಾಮೀಣ ಪರಿಸರದಲ್ಲಿ ಹುಟ್ಟಿ,ಗ್ರಾಮೀಣ ಶೈಲಿಯಲ್ಲಿ ಬೆಳೆದ ಸತ್ವಶಾಲಿ ವ್ಯಕ್ತಿ. ಪಟ್ಟಣದ ಕೃತಕತೆ,ನಾಜೂಕತೆಗಳಿಗೆ ಬಲಿಯಾಗದೆ, ಸ್ವಯಂಭೂ ಲಿಂಗದಂತೆ ಬಯಲಲ್ಲಿಯೇ ಬೆಳೆದ ಗೌಡರು ನಮ್ಮ ಹಳ್ಳಿಗಾಡಿನ ಮುಖಂಡರು ಹೇಗಿರಬೇಕೆಂಬುದಕ್ಕೆ ನಿದರ್ಶನವೆನಿಸಿದ್ದರು. ಸ್ವಾತಂತ್ರ್ಯ ಹೋರಾಟ, ಸಹಕಾರತತ್ವ, ಸೇವಾಮನೋಭಾವಗಳ ಸಾಕಾರವಾಗಿದ್ದ “ಕುರುಕ್ಷೇತ್ರದಲ್ಲಿ ಭೀಮಸೇನ ಗದೆಯೂರದ ಸ್ಥಳವಿಲ್ಲ''ವೆಂಬಂತೆ ತಮ್ಮ ಪ್ರದೇಶದ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಹೆಜ್ಜೆ ಗುರುತಗಳನ್ನು ಮೂಡಿಸಿದರು. ಭಾರತದ ಉದ್ಧಾರ ಹಳ್ಳಿಗಳಲ್ಲಿದೆ ಎಂಬ ಸತ್ಯವನ್ನು ಅರ್ಥಮಾಡಿಕೊಂಡು, ಅದನ್ನು ಸರಿಯಾಗಿ ಅನುಷ್ಠಾನಕ್ಕೆ ತಂದರು. ಇದರ ಫಲವಾಗಿ ಸಂಕೇಶ್ವರದ ಸುತ್ತಮುತ್ತ ಶಿಕ್ಷಣಸಂಸ್ಥೆ ಸಹಕಾರಿ ಸಂಸ್ಥೆಗಳು ಗೌಡರ ಹೆಸರು ಹೇಳುತ್ತ ನಿಂತುಕೊಂಡಿವೆ.ಒಬ್ಬ ವ್ಯಕ್ತಿ ಏಕಕಾಲಕ್ಕೆ ಹೇಗೆ ರಾಷ್ಟ್ರೀಯ ಪ್ರಜ್ಞೆ. ಗ್ರಾಮೀಣ ಪ್ರಜ್ಞೆಗಳ ಸೇತುವೆಯಾಗಬಲ್ಲನೆಂಬುದಕ್ಕೆ ಪರಮಾವಧಿ ನಿದರ್ಶನವನಿಸಿದವರು ಶ್ರೀ ಅಪ್ಪಣ್ಣಗೌಡರು.

About the Author

ಗುರುಪಾದ ಮರಿಗುದ್ದಿ
(20 June 1956)

ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’.  ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...

READ MORE

Related Books