ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರಕರ್

Author : ಚಕ್ರವರ್ತಿ ಸೂಲಿಬೆಲಿ (ಮಿಥುನ್ ಚಕ್ರವರ್ತಿ)

₹ 100.00




Year of Publication: 2004
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ʼಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರಕರ್ʼ ಜೀವನ ಚರಿತ್ರೆ ಕೃತಿಯನ್ನು ಲೇಖಕ ಚಕ್ರವರ್ತಿ ಸೂಲಿಬೆಲೆ ಅವರು ರಚಿಸಿದ್ದಾರೆ. ಯುವಕರಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಸಿ, ಸ್ವಾತಂತ್ರ್ಯಯಜ್ಞದ ಜ್ವಾಲೆ ಧಗಧಗಿಸುವಂತೆ ಮಾಡಿದ ಸಾವರಕರ್ (1983-1966)ರ ಜೀವನ ಹಾಗೂಭಾರತದ ಸ್ವಾತಂತ್ರ್ಯ ಸಮರದ ರೋಮಾಂಚಕಾರಿ ಅಧ್ಯಾಯ. ಹುಟ್ಟಿನಿಂದ ಸಾವಿನವರೆಗೆ ಎಳ್ಳಷ್ಟೂ ಕಡಮೆಯಾಗದ ಪ್ರಖರ ರಾಷ್ಟ್ರಭಕ್ತಿ ಸಾವರಕರ್‌ರ ವಿಶೇಷತೆ. ಸ್ವಾತಂತ್ರ್ಯ ಗಳಿಕೆಗಾಗಿ ಪ್ರಾಣಾರ್ಪಣೆಗೂ ಯುವಕರನ್ನು ಪ್ರೇರೇಪಿಸಿದ ಅವರು ಸ್ವಾತಂತ್ರ್ಯ ಉಳಿಕೆಗಾಗಿ, ಸೈನ್ಯದಲ್ಲಿ ಸೇರ್ಪಡೆಯಾಗುವಂತೆ ತರುಣರಿಗೆ ಕರೆ ನೀಡಿದ ವಾಸ್ತವವಾದಿ. ಬಾಲ್ಯದಲ್ಲಿ ಕವಿತೆಗಳಿಂದ, ಕಾಲೇಜು ದಿನಗಳಲ್ಲಿ ಮಿತ್ರಮಂಡಳಿಯಿಂದ, ತಾರುಣ್ಯದಲ್ಲಿ ಅಭಿನವ ಭಾರತದಿಂದ, ಲಂಡನ್‌ನಲ್ಲಿ ಭಾರತ ಭವನದ ಮೂಲಕ, ನಂತರ ಹಿಂದೂ ಮಹಾಸಭಾದ ಮೂಲಕ, ಅವರು ಸದಾ ಅರ್ಚಿಸಿದ್ದು ಭಾರತಮಾತೆಯನ್ನೇ; ಸ್ತುತಿಸಿದ್ದು ತಾಯಿ ಭಾರತಿಯನ್ನೇ; ಬಯಸಿದ್ದು ಸಶಕ್ತ ಭಾರತದ ನಿರ್ಮಾಣವನ್ನೇ. ಅಸ್ಪ್ರೃಶ್ಯತೆಯ ವಿರುದ್ಧ ಜಾಗೃತಿ ಮೂಡಿಸಿದಾಗ, ಪತಿತಪಾವನ ಮಂದಿರ ಸ್ಥಾಪನೆ ಮಾಡಿದಾಗ, ವಿದೇಶೀ ವಸ್ತುಗಳನ್ನು ಬಹಿರಂಗವಾಗಿ ಸುಟ್ಟುಹಾಕಿದಾಗ, ಭಾರತೀಯ ಭಾಷೆಗಳ ಬಳಕೆಗೆ ಆಗ್ರಹಪಡಿಸಿದಾಗ ಅವರ ದೃಷ್ಟಿ ಇದ್ದಿದ್ದು, ಹಿಂದೂ ಸಮಾಜದ ಏಳಿಗೆಯಲ್ಲಿಯೇ. ತಾಯಿ ಭಾರತಿಯ ಈ ಮಹಾನ್ ಸುಪುತ್ರನನ್ನು ನುಡಿನಮನಗಳಿಂದ, ಭಾವ ಜಾಗರಣದಿಂದ ’ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರಕರ್’ ಕೃತಿಯಲ್ಲಿ ಚರ್ಚಿಸಲಾಗಿದೆ.

About the Author

ಚಕ್ರವರ್ತಿ ಸೂಲಿಬೆಲಿ (ಮಿಥುನ್ ಚಕ್ರವರ್ತಿ)
(09 April 1980)

ಚಕ್ರವರ್ತಿ ಸೂಲಿಬೆಲಿ ಎಂದೇ ಗುರುತಿಸಿಕೊಳ್ಳುವ ಮಿಥುನ್ ಚಕ್ರವರ್ತಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. 1980ರ ಏಪ್ರಿಲ್ 9 ರಂದು ಜನನ. ಓದಿದ್ದು, ಬೆಳೆದಿದ್ದು ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ. ತಂದೆ ದೇವದಾಸ್ ಸುಬ್ರಾಯ್ ಶೇಟ್, ಸೂಲಿಬೆಲಿಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿದ್ದಾರೆ. ಬೆಂಗಳೂರು ಜೈನ್ ಕಾಲೇಜಿನಲ್ಲಿ ಪಿಯುಸಿ ನಂತರ ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದರು.  ವಾಗ್ಮಿ, ಅಂಕಣಕಾರ. ಸಾಮಾಜಿಕ ಕಾರ್ಯಕರ್ತ ಹಾಗೂ ಯುವ ಬ್ರಿಗೇಡ್ ಸಂಘಟನೆ ಸಂಸ್ಥಾಪಕ ಸೂಲಿಬೆಲಿ ಅವರು ‘ಮೇರಾ ಭಾರತ್ ಮಹಾನ್’, ‘ಪೆಪ್ಸಿ ಕೋಕ್ ಅಂತರಾಳ’, ‘ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ...

READ MORE

Related Books