ಅಪ್ರತಿಮ ಪಟೇಲ್

Author : ಕೆ. ಎನ್‌. ರೆಡ್ಡಿ

Pages 307

₹ 350.00




Year of Publication: 2010
Published by: ಅಮೂಲ್ಯ ಕ್ರಿಯೇಟಿವ್ ಮೀಡಿಯಾ ಹೌಸ್
Address: ಬೆಂಗಳೂರು

Synopsys

ಲೇಖಕ-ಪತ್ರಕರ್ತ ಕೆ.ಎನ್. ರೆಡ್ಡಿ ಅವರು ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ವ್ಯಕ್ತಿತ್ವ-ಬದುಕು-ಸಾಧನೆ ಕುರಿತ ಚಿತ್ರಣ ನೀಡಿದ ಕೃತಿ ಇದು. ಜೆ.ಎಚ್. ಪಟೇಲರ ವ್ಯಕ್ತಿತ್ವ ರಂಗುರಂಗಿನಿಂದ ಕೂಡಿದೆ. ಅಷ್ಟೇ ವರ್ಣರಂಜಿತವಾಗಿ ಅವರು ಹಾಸ್ಯಮಯ ಜೋಕುಗಳಿಂದ ವಿಪಕ್ಷದವರ ಬಾಯಿ ಮುಚ್ಚಿಸುತ್ತಿದ್ದರು. ನೇರ-ನಿಷ್ಠುರ ನಡೆಗೆ ಹೆಸರುವಾಸಿಯಾಗಿದ್ದ ಜೆ.ಎಚ್. ಪಟೀಲರು ಸಮಾನತಾವಾದಿಗಳು. ಸಮಾಜವಾದವನ್ನು ಸಾರ್ವಜನಿಕ ಜೀವನದಲ್ಲಿ ಅಪ್ಪಿಕೊಂಡಿದ್ದು, ರೈತ ಕಳಕಳಿ ಉಳ್ಳವರು. ಬಸವಾದಿ ಶರಣರ ವಿಚಾರಧಾರೆಗಳನ್ನು ಒಪ್ಪಿಕೊಂಡಿದ್ದ ಅವರು ಬಸವಕಲ್ಯಾಣ ಹಾಘೂ ಕೂಡಲ ಸಂಗಮ ಸಮಗ್ರ ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಂಡಿದ್ದರು.

About the Author

ಕೆ. ಎನ್‌. ರೆಡ್ಡಿ

ಪತ್ರಕರ್ತರಾದ ಕೆ. ಎನ್‌. ರೆಡ್ಡಿ ಮೂಲತಃ ಕಲಬುರಗಿಯವರು. ಬರವಣಿಗೆಯೊಂದಿಗೆ ಪರಿಸರದೊಂದಿಗೆ ನಿಟಕ ಭಾವನಾತ್ಮಕತೆ ಹೊಂದಿದ ಪ್ರಕೃತಿ ಪ್ರೇಮಿ. ಇಂಗ್ಲೀಷ್ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ನಿರ್ವಹಿಸಿದ್ದು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪಾಂಡಿತ್ಯ ಸಾಧಿಸಿದ್ದಾರೆ. ಸರಿಸುಮಾರು ಎರಡುವರೆ ದಶಕಗಳಿಂದ ರಾಜಕೀಯ ವರದಿಗಾರನಾಗಿ ಕೆಲಸ. ಜೆ. ಎಚ್‌. ಪಟೇಲರ ಬದುಕಿನ ಅನಾವರಣವನ್ನು ‘ಪಟೇಲ್ ನಾವು ಕಂಡಂತೆ ಕಂಡಷ್ಟು’ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ...

READ MORE

Related Books