ಅರಣ್ಯಶಾಸ್ತ್ರ

Author : ಅಜ್ಜಂಪುರ ಕೃಷ್ಣಸ್ವಾಮಿ

Pages 416

₹ 300.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001,
Phone: 08022161900

Synopsys

ಲೇಖಕ ಅಜ್ಜಂಪುರ ಕೃಷ್ಣಸ್ವಾಮಿ ಅವರ ಕೃತಿ-ಅರಣ್ಯಶಾಸ್ತ್ರ ಭಾರತ ಕೃಷಿ ಪ್ರಧಾನ ದೇಶ. ಕರ್ನಾಟಕವೂ ಹೊರತಲ್ಲ. ಈ ಭೂಪ್ರಧೇಶದಲ್ಲಿ ಹಚ್ಚ ಹಸುರಿನ ಕಾಡು ಇದೆ. ಪಶ್ಚಿಮ ಘಟ್ಟಗಳಿವೆ. ಅರಣ್ಯಗಳು ಕೃಷಿಗೆ ತಾಯಿಯಂತೆ. ವಿವಿಧ ಭೂಗುಣ ಹವಾಗುಣಗಳಿಗೆ ಒಗ್ಗುವ ಮರಜಾತಿಗಳು, ಸಾಲುಮರಗಳು, ಉದ್ಯಾನವನದ ಮರಗಳು, ಅಂದದ ಹಂದರದ ಸುಂದರ ಪುಷ್ಪಗಳ ಮರಗಳು, ಮೇವಿನ ಹುಲ್ಲುಗಳು, ಔಷಧಿಗೆ ಉಪಯುಕ್ತವಾದ ಅನೇಕ ಅಮೂಲ್ಯ ಮರ, ಗಿಡ, ಮೂಲಿಕೆಗಳು, ವನ್ಯಮೃಗ ಪಕ್ಷಿಗಳು, ಸರ್ಪಗಳು, ಅರಣ್ಯ ಕೀಟಗಳು, ಅರಣ್ಯ ಬುಡಕಟ್ಟಿನವರ ರೀತಿ ನೀತಿಗಳು, ಭೂಸವೆತ - ಅದರ ಕಾರಣ, ಪರಿಣಾಮ, ಪರಿಹಾರಗಳು ಹಾಗೂ ಸಾಮಾಜಿಕ ಅರಣ್ಯಗಳ ನಿರ್ಮಾಣ, ನಿರ್ವಹಣೆ, ನೀತಿ, ಅವುಗಳ ಬಗ್ಗೆ ಜನರ ಹೊಣೆ ಇವುಗಳೆಲ್ಲದರ ವಿಶ್ಲೇಷಣೆಗಳೂ ಇಲ್ಲಿ ಸೇರಿವೆ. ಕರ್ನಾಟಕ ಅರಣ್ಯ ಪ್ರದೇಶದ ಭೌಗೋಳಿಕ ಮಾಹಿತಿ ಒಳಗೊಂಡಿದೆ.

About the Author

ಅಜ್ಜಂಪುರ ಕೃಷ್ಣಸ್ವಾಮಿ

ಚಿಕ್ಕಮಗಳೂರು ಜಿಲ್ಲೆಯ ತೆರೀಕೆರೆಯಲ್ಲಿ ಜನಿಸಿದ ಅಜ್ಜಂಪುರ ಕೃಷ್ಣಸ್ವಾಮಿ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ಪದವೀಧರರು. ಡೆಹರಾಡೂನ್ ನಲ್ಲಿ ಅರಣ್ಯ ತರಬೇತಿ ಪಡೆದರು. ಅಂದಿನ ಮೈಸೂರು ರಾಜ್ಯದ ರೇಷ್ಮೆ ಇಲಾಖೆಯಲ್ಲಿ ಕೆಲಸ, ನಂತರ, ಅರಣ್ಯ ಇಲಾಖೆಯಲ್ಲಿ ಸೇವೆಗೆ ಸೇರಿದರು. ಭಾರತೀಯ ಅರಣ್ಯ ಸೇವಾ ಸದಸ್ಯರು, ಕರ್ನಾಟಕ ತೋಟಗಾರಿಕಾ ಇಲಾಖೆಯ ನಿರ್ದೇಶಕರು ಆಗಿದ್ದರು. ಕರ್ನಾಟಕದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ನಿವೃತ್ತರಾದರು.  ಕೃತಿಗಳು: ಅರಣ್ಯಶಾಸ್ತ್ರ, ವನಸಿರಿ, ಖಗಸಿರಿ, ವನವೈಖರಿ, ಅರಣ್ಯ , ವನದರ್ಶನಂ ಇತ್ಯಾದಿ ಆಗಮಿಕರ ನಾಡು (ಅಮೆರಿಕ ಪ್ರವಾಸ ಕಥನ)., ಜಪಾನ್ (ಪ್ರವಾಸ ಕಥನ),  ಹರಿವು (ವನಪಾಲಕನೊಬ್ಬನ ಆತ್ಮಕಥೆಯಂತಿರುವ ಕೃತಿಯು ವನಪಾಲಕರಿಗೆ, ಮಕ್ಕಳಿಗೆ ...

READ MORE

Related Books