ಅರಸು ಯುಗ

Author : ಎನ್.ಎಸ್. ಶಂಕರ್‌

Pages 132

₹ 120.00




Published by: ಡಿ. ದೇವರಾಜ ಅರಸು ಜನ್ಮಶತಮಾನೋತ್ಸವ ಸಮಿತಿ
Address: ಬೆಂಗಳೂರು

Synopsys

ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರು ಸಾಮಾಜಿಕ ನ್ಯಾಯದ ಹರಿಕಾರರು. ಅಧಿಕಾರ, ಸಂಸತ್ತು, ಅವಕಾಶ ಇವುಗಳನ್ನು ಎಲ್ಲರಿಗೂ ಸಮಾನಾಗಿ ಹಂಚಬೇಕು. ಇಲ್ಲದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಮನಗಂಡಿದ್ದರು.

ದೇವರಾಜ ಅರಸು ಅವರ ಬಾಲ್ಯ, ರಾಜಕೀಯ, ಉಳುವವನೇ ಭೂಮಿಯ ಒಡೆಯ ಕಾನೂನು, ತುರ್ತು ಪರಿಸ್ಥಿತಿ, ಮುಖ್ಯಮಂತ್ರಿಯಾದ ಅವಧಿ ಇವುಗಳ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ. ನಾಡಿಗೆ ಅರಸು ನೀಡಿದ ಕೊಡುಗೆಯ ಕುರಿತ ಸೊಗಸಾದ ವಿವರಗಳು ಕೃತಿಯಲ್ಲಿವೆ. 

About the Author

ಎನ್.ಎಸ್. ಶಂಕರ್‌

ಲೇಖಕ, ಪತ್ರಕರ್ತ ಎನ್. ಎಸ್‌. ಶಂಕರ ಅವರು ‘ಸುದ್ದಿ ಸಂಗಾತಿ’ ಮತ್ತು ‘ಮುಂಗಾರು’ ಪತ್ರಿಕೆಯ ಸ್ಥಾಪಕರು. ಪ್ರಜಾವಾಣಿ, ಲಂಕೇಶ್‌ ಪತ್ರಿಕೆಯ ವರದಿಗಾರರಾಗಿಯೂ ಅನುಭವವಿದೆ. ಲಂಕೇಶರ ‘ಮುಟ್ಟಿಸಿಕೊಂಡವರು’ ಕತೆಯನ್ನು ಕಿರು ಚಿತ್ರವನ್ನಾಗಿಸಿ ದೃಶ್ಯಮಾಧ್ಯಮಕ್ಕೂ ಹೆಜ್ಜೆ ಇಟ್ಟವರು. ಅವರ ‘ಮಾನಸೋಲ್ಲಾಸ’ ಕಿರು ಚಿತ್ರ ಅಂತಾರಾಷ್ಟ್ರೀಯವಾಗಿ ಸದ್ದು ಮಾಡಿದೆ. ‘ಅರಸು ಯುಗ, ಚಂಚಲೆ’ ಅವರ ಕೃತಿಗಳು. ಸಮಕಾಲೀನ ಘಟನಾವಳಿಗಳು ಕುರಿತಂತೆ ಬರೆದ ಬರೆಹ ‘ಉಸಾಬರಿ’ ಅವರ ಇತ್ತಿಚಿನ ಕೃತಿ. ...

READ MORE

Related Books