ಅರಿವಿನ ಅಂಬರ ಅಂಬೇಡ್ಕರ್

Author : ಈರಣ್ಣ ಬೆಂಗಾಲಿ

Pages 132

₹ 198.00




Year of Publication: 2020
Published by: ಕೃಷ್ಣಾರುಣ ಪ್ರಕಾಶನ
Address: # ನಂ; 5-9-23, ನೇತಾಜಿ ನಗರ, ರಾಯಚೂರು-584103
Phone: 9986724198

Synopsys

ಲೇಖಕ ಈರಣ್ಣ ಬೆಂಗಾಲಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರ-ಬದುಕು-ಸಾಧನೆ-ಸಾಮಾಜಿಕ ಚಿಂತನೆ-ಆಶಯ, ಹೋರಾಟ, ಪ್ರತಿಮೆ, ರೂಪಕಗಳು ಹೀಗೆ ಎಲ್ಲವನ್ನೂ ಗಜಲ್ ಗಳ ರೂಪದಲ್ಲಿ ನೀಡಿದ ಕೃತಿ-ಅರಿವಿನ ಅಂಬರ ಅಂಬೇಡ್ಕರ್. ಒಬ್ಬ ಮಹಾನ ಚಿಂತಕನ ಕುರಿತು ಒಂದು ಗಜಲ್ ಬರೆಯಬಹುದು. ಆದರೆ, ಇಡೀ ಸಂಕಲನವನ್ನು ಈ ಉದ್ದೇಶ ಸಾಧನೆಗೆ ಮೀಸಲಿಟ್ಟಿದ್ದು ಮಾತ್ರ ಈ ಕೃತಿಯ ಹೆಗ್ಗಳಿಕೆ. 

50 ಗಜಲ್ ಗಳಿರುವ ಸಂಕಲನದಲ್ಲಿ ಪ್ರತಿ ಗಜಲ್ ಗೂ ಸುಂದರ ಚಿತ್ರಗಳ ಮೆರೆಗು ನೀಡಿರುವುದು ಕೃತಿಯ ಅರ್ಥವಂತಿಕೆಯಿಂದಲೂ ಮಹತ್ವ ಪಡೆದಿದೆ. ಆರಂಭದ ಪುಟಗಳಲ್ಲಿ ಡಾ. ಬಿ.ಆರ್. ಅಂಭೇಡ್ಕರ ಅವರು ರಚಿಸಿದ ಭಾರತದ ಸಂವಿಧಾನ ಕುರಿತ ಮಾಹಿತಿ ಮತ್ತು ಕೊನೆಯ ಪುಟಗಳಲ್ಲಿ ಶೊಷಣೆಯ ಕುರಿತು ಅಂಬೇಡ್ಕರ್ ಅವರ ಚಿಂತನೆ, ಹೋರಾಟದ ಆಶಯ ಇತ್ಯಾದಿಗಳನ್ನು ಒಳಗೊಂಡಿರುವ ವಿವಿಧ ಪತ್ರಿಕೆಗಳ ವರದಿಗಳನ್ನು ಸಂಕಲಿಸಿದೆ. 

 

About the Author

ಈರಣ್ಣ ಬೆಂಗಾಲಿ

ಈರಣ್ಣ ಬೆಂಗಾಲಿ ಅವರು ರಾಯಚೂರು ನಗರದವರು. ಫ್ರಿಲಾನ್ಸರ್ ಆಗಿದ್ದಾರೆ. ಗಜಲ್, ಕಥೆ, ಕವನ, ಲೇಖನ, ವಚನ, ಹನಿಗವನ, ಹೈಕು, ಮಕ್ಕಳ ಕಥೆ, ಮಕ್ಕಳ ಕವನ, ಜೀವನ ಚರಿತ್ರೆ ಹೀಗೆ ಸಾಹಿತ್ಯದ ಮುಂತಾದ ಪ್ರಕಾರಗಳಲ್ಲಿ ಕೃಷಿ ಮಾಡಿರುತ್ತಾರೆ. ಇದುವರೆಗೆ ಇವರ ಹದಿನೈದಕ್ಕೂ ಹೆಚ್ಚಿನ ಕೃತಿಗಳು ಪ್ರಕಟವಾಗಿವೆ. 'ಅರಿವಿನ ಅಂಬರ ಅಂಬೇಡ್ಕರ್' ಗಜಲ್ ಕೃತಿಗೆ 2020ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, 'ಅಪರೂಪದ ಕನ್ನಡ ಮೇಷ್ಟ್ರು' ಕೃತಿಗೆ 2021 ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ  ಸೇರಿದಂತೆ ಇವರ ಇನ್ನಿತರ ಕೃತಿಗಳಿಗೂ ಪ್ರಶಸ್ತಿ ಲಭಿಸಿವೆ. ಹಂಪಿ ಉತ್ಸವ, ...

READ MORE

Related Books