ಅರಿವು ಬೆಳಕು

Author : ಹೆಚ್. ಎನ್. ನಾಗಮೋಹನದಾಸ್

Pages 232

₹ 160.00




Year of Publication: 2012
Published by: ಸ್ಫೂರ್ತಿ ಪ್ರಕಾಶನ
Address: ಹರವು, ಪಾಂಡವಪುರ, ಮಂಡ್ಯ ಜಿಲ್ಲೆ

Synopsys

‘ಅರಿವು ಬೆಳಕು’ ಕೃತಿಯು ಹೆಚ್.ಎನ್. ನಾಗಮೋಹನ್ ದಾಸ್ ಅವರ ಲೇಖನಸಂಕಲನವಾಗಿದೆ. 'ಸಂವಿಧಾನ ಎಷ್ಟೇ ಉತ್ತಮವಾಗಿರಲಿ, ಅದನ್ನು ನಿರ್ವಹಿಸುವವರು ಕೆಟ್ಟವರಾಗಿದ್ದರೆ ಅದೂ ಕೆಟ್ಟದಾಗಿಬಿಡುವುದು ಖಂಡಿತ' ಎಂದಿದ್ದ ಅಂಬೇಡ್ಕ‌ರ್ ಅವರ ಮಾತುಗಳನ್ನು ನೆನಪಿಸುವಂತೆ, ಪ್ರಜಾಪ್ರಭುತ್ವ ವ್ಯವಸ್ಥೆ ಆಗಾಗ ಧಕ್ಕೆಗೊಳಗಾಗುತ್ತಲೇ ಇರುವ ಹೊತ್ತಿನಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ 'ಅರಿವು ಬೆಳಕು' ಕೃತಿ ಪ್ರಜಾಪ್ರಭುತ್ವ ಪರಿಕಲ್ಪನೆಯ ನೈಜ ನಿಲುವನ್ನು ಗಟ್ಟಿಗೊಳಿಸುವಲ್ಲಿ ಜನಸಾಮಾನ್ಯರ ಪರಿಧಿಯನ್ನು ವಿಸ್ತರಿಸುತ್ತದೆ. ಅರಿವಿನ ಪರಿಧಿಯನ್ನು ವಿಸ್ತರಿಸುತ್ತದೆ. 

ನಾಗಮೋಹನ್‌ ದಾಸ್ ತಮ್ಮ ಮೂಲ ಆಶಯಗಳನ್ನು ಬಿಟ್ಟುಕೊಡದ, ವೃತ್ತಿಯ ತಾಂತ್ರಿಕ ಚೌಕಟ್ಟಿನೊಳಗೆ ತಾತ್ವಿಕತೆಯನ್ನು ಜೀವಂತವಾಗಿಟ್ಟು ಕೊಂಡ 'ಮನುಷ್ಯ'ರಾಗಿದ್ದಾರೆ" ಎಂದು ಕೃತಿಯ ಮುನ್ನುಡಿಯಲ್ಲಿ ಬರಗೂರು ರಾಮಚಂದ್ರಪ್ಪ ಅವರು ಬರೆದಿರುವಂತೆ ನಾಗಮೋಹನ್ ದಾಸ್ ಇಲ್ಲಿ ತಮ್ಮ ಸಮಾಜಮುಖಿ ಚಿಂತನೆಯನ್ನು ಹರಿಯಬಿಟ್ಟಿದ್ದಾರೆ. 'ಪ್ರಭುತ್ವ ಹಳಿ ತಪ್ಪುವಾಗ ಪ್ರತ್ಯಕ್ಷವಾಗುವ ನ್ಯಾಯ ದೇವತೆ', 'ಹೂಮನ್ ಬೀಯಿಂಗ್ ಮತ್ತು ಬೀಯಿಂಗ್ ಹೂಮನ್', 'ಗ್ರಾಮರಾಜ್ಯದಲ್ಲಿ ರಾಮರಾಜ್ಯ ಕಂಡ ಗಾಂಧೀಜಿ', 'ಮನೆ ಮತ್ತು ಜಗತ್ತು', 'ಮಾತೃಭೂಮಿ - ಮಾತೃಭಾಷೆ' ಹಾಗೂ 'ಬುದ್ಧ ಮತ್ತು ರಾಕ್ಷಸ' ಎಂಬ ಏಳು ಭಾಗಗಳಲ್ಲಿ ವಿಂಗಡಣೆಗೊಂಡಿರುವ ಇಲ್ಲಿಯ ಲೇಖನಗಳು ನ್ಯಾಯಾನ್ಯಾಯದ ವಿವೇಚನೆಯುಳ್ಳ 'ಸಾಮಾಜಿಕ ನ್ಯಾಯಾಧೀಶ'ರೊಬ್ಬರ ಸಮಾಜಮುಖಿ ಆಶಯಗಳನ್ನು ಬಿಂಬಿಸುತ್ತವೆ.

About the Author

ಹೆಚ್. ಎನ್. ನಾಗಮೋಹನದಾಸ್

ನ್ಯಾ.ಎಚ್.ಎನ್.ನಾಗಮೋಹನದಾಸ್ ಅವರು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತಿಹೊಂದಿದ್ದಾರೆ. ಸಂವಿಧಾನ, ಕಾನೂನು, ಮಹಿಳಾ ಸಮಾನತೆ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಜನಭಾಷೆಯಲ್ಲಿ ಸರಳವಾಗಿ ಕಾನೂನನ್ನು ಅರ್ಥಮಾಡಿಸುವಲ್ಲಿ ಕಾರ್ಯ ಪ್ರೌರುತ್ತರು. ಕಾನೂನು, ಅಸಮಾನತೆ, ಸಂವಿಧಾನದ ಅರಿವಿನ ಕುರಿತಾಗಿ ಹಲವು ಕೃತಿಗಳನ್ನು ರಚಿಸಿರುವ ನಾಗಮೋಹನದಾಸರು ದಲಿತ, ಮಹಿಳಾಪರ ಹೋರಾಟಗಳಲ್ಲಿ ಭಾಗಿಯಾಗಿ ಕಾನೂನಿನ ಅರಿವು ಮೂಡಿಸುತ್ತಾರೆ. ಅವರ ಕೃತಿಗಳು- ಮಹಿಳಾ ಅಸಮಾನತೆ, ಸಂವಿಧಾನ ಓದು ವಿದ್ಯಾರ್ಥಿ ಯುವಜನರಿಗಾಗಿ ಕೈಪಿಡಿ ಇತ್ಯಾದಿ.  ...

READ MORE

Related Books