ಆರೋಗ್ಯದ ಅರಿವು

Author : ಅಜಿತ್ ಹರೀಶಿ

Pages 220

₹ 250.00




Year of Publication: 2019
Published by: ವಿಜಯಲಕ್ಷ್ಮಿ ಪ್ರಕಾಶನ
Address: #657, ಕೂಗುಬಂಡೆ ರಸ್ತೆ, ಇ ಮತ್ತು ಎಫ್‌ ಬ್ಲಾಕ್, ಕುವೆಂಪುನಗರ, ಮೈಸೂರು
Phone: 9886765181

Synopsys

ಆರೋಗ್ಯ ಅಂಕಣಗಳು ಹಾಗೂ ಲೇಖನಗಳನ್ನು ಕ್ರೋಢೀಕರಿಸಿ ಸರಳವಾಗಿ ಜನಮಾನಸಕ್ಕೆ ತಲುಪಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ, ವೈದಿಕ ಪರಂಪರೆಯಂತೆ ಶಾಸ್ತ್ರಸಮ್ಮತವಾಗಿ ವಿಷಯ ಮಂಡನೆ- ಖಂಡನೆ ನಡೆಯಬೇಕಾಗುತ್ತದೆ. ಆರೋಗ್ಯದ ಪರಿಪೂರ್ಣ ವಿಶ್ಲೇಷಣೆ ಈವರೆಗೆ ಸಂಪೂರ್ಣವಾಗಿ ನಡೆದಿಲ್ಲ ಎಂದರೆ ತಪ್ಪಾಗಲಾರದು.

ಈ ಕೃತಿಯಲ್ಲಿ ಕಾಮಾಲೆ (ಜಾಂಡೀಸ್), ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಮಂಗನ ಕಾಯಿಲೆ), ಡೆಂಗಿ ಜ್ವರ- ಎಲ್ಲ ವಿಷಯಗಳು ವೈರಸ್‍ಗಳಿಂದ ಬರುವಂತಹ ಕಾಯಿಲೆಗಳು.  ಸ್ತನ ಕ್ಯಾನ್ಸರ್, ಜಲೋದರ, ಲೇಖನಗಳು ನನ್ನ ದಿನನಿತ್ಯದ ವಿಷಯಗಳಾಗಿದ್ದು ಇದರ ನಿರೂಪಣೆಯ ಶೈಲಿ ತುಂಬಾ ಸರಳವಾಗಿ ಜನಸಾಮಾನ್ಯರಿಗೂ ತಿಳಿಯುವ ರೀತಿಯಲ್ಲಿವೆ.

About the Author

ಅಜಿತ್ ಹರೀಶಿ
(24 August 1978)

ಲೇಖಕ ಡಾ. ಅಜಿತ್  ಹರೀಶಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹರೀಶಿ ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹುಟ್ಟೂರಿನ ಸರ್ಕಾರಿ ಶಾಲೆಗಳಲ್ಲಿ, ಪದವಿಪೂರ್ವ ಶಿಕ್ಷಣವನ್ನು ಶಿರಸಿಯಲ್ಲಿ ಮುಗಿಸಿರುತ್ತಾರೆ. ಆಯುರ್ವೇದ ಮಹಾವಿದ್ಯಾಲಯ, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಪದವೀಧರರಾದ  ಇವರು, ಆಕ್ಯುಪಂಕ್ಚರ್ ಚಿಕಿತ್ಸೆ , ಹಿಪ್ನೋಥೆರಪಿಯಲ್ಲಿಯೂ ಪರಿಣಿತರು.  ಪ್ರಸ್ತುತ ಹರೀಶಿಯಲ್ಲಿ ಖಾಸಗಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಬರವಣಿಗೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು.  ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು.  ಕಥಾಭರಣ ಸಂಪಾದಿತ ಕೃತಿಯಾಗಿದೆ. ಆರೋಗ್ಯದ ಅರಿವು ...

READ MORE

Related Books