ಅರ್ಥಸಹಿತ ಕಬೀರದಾಸರ 500 ದೋಹಾವಲಿಗಳು

Author : ವಿಶ್ವನಾಥಶೆಟ್ಟಿ (ಪಾಂಗಾಳ)

Pages 125

₹ 200.00




Year of Publication: 2021
Published by: ಅಭಿಜಿತ್ ಪ್ರಕಾಶನ
Address: # ಎ/404, ವಿನಾಯಕ್ ಆಶಿಷ್. ಎಂಎಂಎಂ ರಸ್ತೆ, ಪಿ & ಟಿ ಕಾಲೊನಿ ಹತ್ತಿರ, ಮುಲುಂಡ್ (ಪಶ್ಚಿಮ) ಮುಂಬೈ-400080

Synopsys

ಲೇಖಕ ವಿಶ್ವನಾಥ ಶೆಟ್ಟಿ (ಪಾಂಗಾಳ) ಅವರು ಅನುವಾದಿಸಿದ ಕೃತಿ-ಅರ್ಥಸಹಿತ ಕಬೀರದಾಸರ 500 ದೋಹಾವಲಿಗಳು. ಕಬೀರದಾಸರ ಹಿಂದಿ ದೋಹೆಗಳು ಎಂದೇ ಪ್ರಸಿದ್ಧಿ. ಅವರ ದೋಹೆಗಳು ಸಮಾಜದ ತಪ್ಪನ್ನು ತಿದ್ದುತ್ತವೆ. ವಿಡಂಬಿಸುತ್ತವೆ. ಅಪಹಾಸ್ಯ ಮಾಡುತ್ತವೆ. ಇದೆಲ್ಲದರ ಉದ್ದೇಶ-ಸಮಾಜದ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳುವುದು. ಸಮಾಜಕ್ಕೆ ಉತ್ತಮವಾದದ್ದನ್ನು ಕೊಡಬೇಕು ಎಂಬುದರ ಜಾಗೃತಿ ಇದೆ. ಇವರು ಮುಸ್ಲಿಂರ ಒಡನಾಟದಲ್ಲಿದ್ದರೂ ಹಿಂದೂಗಳ ಪವಿತ್ರ ಗ್ರಂಥಗಳನ್ನು ಮಾತ್ರವಲ್ಲ ಎಲ್ಲ ಧರ್ಮಗ್ರಂಥಗಳನ್ನು ತಿಳಿದಿದ್ದರು. ಅವರೊಬ್ಬ ದಾರ್ಶನಿಕರು. ಸಾಹಿತಿ ಡಾ. ಕರುಣಾಕರ ಎನ್.ಶೆಟ್ಟಿ ಪಣಿಯೂರು ಅವರು ಕೃತಿಗೆ ಬೆನ್ನುಡಿ ಬರೆದು ‘ದೋಹಾಗಳು ಅಂದರೆ ದ್ವಿಪದಿಗಳು. ದೇವರ ಸನಿಹ ಹೋಗಲು ಭಕ್ತಿಮಾರ್ಗವೇ ಸೂಕ್ತ ಎಂದು ಕಬೀರದಾಸರು ನಂಬಿದ್ದರು. ಡಂಭಾಚಾರದ ಭಕ್ತಿ ಅವರಿಗಿಷ್ಟವಿರಲಿಲ್ಲ. ಅಂತಹ ಕಬೀರದಾಸರ ದೋಹೆಗಳನ್ನು ಸರಳವಾಗಿ ಕನ್ನಡದಲ್ಲಿ ಬರೆದಿರುವ ಲೇಖಕರು ಅಭಿನಂದನಾರ್ಹ’ ಎಂದು ಪ್ರಶಂಸಿಸಿದ್ದಾರೆ.

ಕಬೀರ್ ದಾಸರ ಪರಿಚಯ, ಜನ್ಮ ಮತ್ತು ನಾಮಕರಣ, ದನಕ್ಕೆ ಪುನರ್ ಜೀವನ, ಕಾಜಿಗೆ ಉಪದೇಶ, ಯಾರ ದೇವರು, ಗುರು ಮತ್ತು ಗುರು ಮಂತ್ರ, ಶಿಕ್ಷಣ ಮತ್ತು ಉಪದೇಶ ಹೀಗೆ ವಿವಿಧ ಅಧ್ಯಾಯಗಳು ಸೇರಿದಂತೆ ಅರ್ಥ ಸಹಿತವಾಗಿ ಕಬೀರ್ ದಾಸರ 500 ದೋಹೆಗಳನ್ನು ಕನ್ನಡದಲ್ಲಿ ಸಂಕಲಿಸಿದ್ದಾರೆ. .

About the Author

ವಿಶ್ವನಾಥಶೆಟ್ಟಿ (ಪಾಂಗಾಳ)
(10 May 1948)

ಲೇಖಕ ವಿಶ್ವನಾಥ ಶೆಟ್ಟಿ (ಪಾಂಗಾಳ) ಅವರು ಮೂಲತಃ ಉಡುಪಿ ಜಿಲ್ಲೆಯ ಪಾಂಗಾಳದವರು. ತಂದೆ ಅಂತಯ್ಯಶೆಟ್ಟಿ, ತಾಯಿ ರಾಧಾ. ಪಾಂಗಾಳದಲ್ಲಿ ಪ್ರಾಥಮಿಕ ಹಾಗೂ ದಂಡತೀರ್ಥದಲ್ಲಿ ಪ್ರೌಢಶಿಕ್ಷಣ, ಮುಂಬೈಯ ಶಾರದಾ ವಿಜಯ ರಾತ್ರಿ ಶಾಲೆಯಲ್ಲಿ ಕಾಲೇಜು ಶಿಕ್ಷಣ ಪೂರೈಸಿದರು. ಬಾಹ್ಯ ವಿದ್ಯಾರ್ಥಿಯಾಗಿ ಧಾರವಾಡದ ಕರ್ನಾಟಕ ವಿ.ವಿ.ಯಿಂದ ಬಿ.ಎ ಪದವೀಧರರು. ಇವರು ಬರೆದ ಕಥೆ,ಕವನ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪುಣೆಯಲ್ಲಿ ಬಂಟರ ಸಂಘದಿಂದ ಪ್ರಕಟವಾಗುವ ತ್ರೈಮಾಸಿಕ ‘ಕಲ್ಪವೃಕ್ಷ’ ಪತ್ರಿಕೆಯ ಸಂಪಾದಕರು. ಮರಾಠಿಗರಿಗೆ ಕನ್ನಡ ಕಲಿಸುವ ಚಟುವಟಿಕೆಯಲ್ಲಿ ಉತ್ಸುಕರು. ಪುಣೆಯಲ್ಲಿ ಕನ್ನಡ ಸಂಘ, ತುಳುಕೂಟದ ಸದಸ್ಯರು.  ಶ್ರೀ ಅಯ್ಯಪ್ಪ ಸ್ವಾಮಿ ...

READ MORE

Related Books