ಅರುಣಾಚಲದ ಆತ್ಮಜ್ಯೋತಿ ರಮಣ ಮಹರ್ಷಿ

Author : ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

Pages 392

₹ 266.00




Year of Publication: 2020
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 08026617100

Synopsys

ರಮಣ ಮಹರ್ಷಿ, ದಕ್ಷಿಣ ಭಾರತದ ಅರುಣಾಚಲದಲ್ಲಿ ಪ್ರಕಟವಾದ ಅಧ್ಯಾತ್ಮಿಕ ಜ್ಯೋತಿ. 16ರ ಯಸ್ಸಿನಲ್ಲಿಯೇ ಆಶ್ಚರ್ಯಕರ ಅನುಭವಕ್ಕೆ ಒಳಗಾಗಿ ಅವ್ಯಕ್ತದ ಕರೆಗೆ ಓಗೊಟ್ಟು ಅವರು ಮನೆ ತೊರೆದರು. ಲೌಕಿಕ ಬದುಕನ್ನು ಬಿಟ್ಟುಕೊಟ್ಟು ಅಲೌಕಿಕದ ನೆಲೆಗೆ ತಲುಪಿದ ಅವರು, 50 ವರ್ಷಗಳ ದೀರ್ಘಕಾಲ ಅರುಣಾಚಲದಲ್ಲಿಯೇ ಉಳಿದು ತಪಸ್ಸು ಮತ್ತು ಲೋಕಾನುಗ್ರಹ ಕಾರ್ಯಗಳಲ್ಲಿ ಮಗ್ನರಾದರು. ಅವರ ಪ್ರಭಾವಕ್ಕೆ ಒಳಗಾದವರು ಸಾವಿರಾರು ಮಂದಿ. ಪಾಶ್ಚಾತ್ಯ ದೇಶಗಳಿಂದಲೂ ನೂರಾರು ಜನ ಅವರನ್ನು ಕಾಣಲು ಅರುಣಾಚಲಕ್ಕೆ ಬಂದರು.  ಕೆಲವರು ರಮಣಾಶ್ರಮದಲ್ಲಿಯೇ ನೆಲೆಸಿದರು. ಪಾಲ್ ಬ್ರಂಟನ್, ಮೇಜರ್ ಚ್ಯಾಡ್ ವಿಕ್, ಆರ್ಥರ್ ಆಸ್ಬೋರ್ನ್, ಎಸ್.ಎಸ್. ಕೊಹೆನ್, ಹಂಫ್ರೀಸ್, ಹಫೀಜ್ ಕಾವ್ಯಕಂಠ ಗಣಪತಿಮುನಿ ಮೊದಲಾದವರು ಆ ಬಗ್ಗೆ ಬರೆದರು. ಆ ಜಾತಿ ಈ ಜಾತಿ ಎನ್ನದೆ, ಪುರುಷರು ಸ್ತ್ರೀಯರು ಮಕ್ಕಳು ಎನ್ನದೇ, ತಮ್ಮಲ್ಲಿಗೆ ಬಂದವರಿಗೆಲ್ಲ ಮಹರ್ಷಿ ಅಧ್ಯಾತ್ಮ ಅಮೃತದ ದಿವ್ಯ ಸಿಂಚನ ಮಾಡಿದರು.

ಬಡವರು ದೀನರು ದಲಿತರಂತೆಯೇ ಡಾ. ರಾಜೇಂದ್ ಪ್ರಸಾದ್, ಡಾ. ರಾಧಾಕೃಷ್ಣನ್, ರಾಜಾಜಿ, ಮೊರಾರ್ಜಿ ದೇಸಾಯಿ, ಚಿನ್ಮಯಾನಂದ, ನಾಲ್ವಡಿ ಕೃಷ್ಣ ರಾಜೇಂದ್ರ ಒಡೆಯರ್ ಮುಂತಾದ ಗಣ್ಯರು ಅವರ ಅನುಗ್ರಹ ಪಡೆಯಲು ರಮಣಾಶ್ರಮಕ್ಕೆ ಬಂದರು. ಪಶು ಪಕ್ಷಿ ಜಗತ್ತನ್ನು ಸಹ ರಮಣರು ಪ್ರೀತಿಯಿಂದ ಕಂಡರು. ಕನ್ನಡದಲ್ಲಿ ರಮಣರನ್ನು ಕುರಿತು ಬಂದಿರುವ ಸ್ವತಂತ್ರ ಬರೆಹ ತೀರ ಕಡಿಮೆ. ಆ ಕೊರತೆಯನ್ನು ನೀಗಿಸುವಂತೆ ಕನ್ನಡದ ಖ್ಯಾತ ಲೇಖಕ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಭಗವಾನ್ ರಮಣ ಮಹರ್ಷಿಗಳನ್ನು ಕುರಿತು ಮಹತ್ವದ ಕೃತಿ ರಚಿಸಿದ್ದಾರೆ.

About the Author

ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
(29 October 1936 - 06 March 2021)

ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಪ್ರೊ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಕನ್ನಡದ ಜನಪ್ರಿಯ ಕವಿಗಳಲ್ಲಿ ಒಬ್ಬರು. ಮೂಲತಃ ಶಿವಮೊಗ್ಗದವರಾದ ಅವರು ಸದ್ಯ ಬೆಂಗಳೂರು ನಗರದ ನಿವಾಸಿ. ಅವರ ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಅವರ ಪೂರ್ಣ ಹೆಸರು ನೈಲಾಡಿ ಶಿವರಾಮ ಲಕ್ಷ್ಮೀನಾರಾಯಣ ಭಟ್ಟ. ಅವರು ಕವಿ ಮಾತ್ರವಲ್ಲದೆ ವಿಮರ್ಶಕ ಹಾಗೂ ವಾಗ್ಮಿ. ಅವರ ಭಾವಗೀತೆಗಳು ಕ್ಯಾಸೆಟ್‌ಗಳ ಮೂಲಕಜನಪ್ರಿಯಗೊಂಡಿವೆ. ವೃತ್ತ, ಸುಳಿ, ನಿನ್ನೆಗೆ ನನ್ನ ಮಾತು, ದೀಪಿಕಾ ಮತ್ತು ಬಾರೋ ವಸಂತ (ಕವನ ಸಂಗ್ರಹಗಳು), ಹೊರಳು ದಾರಿಯಲ್ಲಿ ಕಾವ್ಯ (ವಿಮರ್ಶೆ), ಜಗನ್ನಾಥ ವಿಜಯ, ಮುದ್ರಾ ಮಂಜೂಷ, ಕರ್ಣ, ಕುಂತಿ, ಕನ್ನಡ ...

READ MORE

Related Books