ಅರುವತ್ತರ ಅನಂತರದ ಆರೋಗ್ಯ

Author : ಎಚ್.ಆರ್. ಮಣಿಕರ್ಣಿಕಾ

Pages 142

₹ 60.00




Year of Publication: 2013

Synopsys

ವೃದ್ಧರು ಎದುರಿಸಬೇಕಾದ ಸಮಸ್ಯೆಗಳು ಅನೇಕ. ಇಲ್ಲಿಯವರೆಗೂ ಸ್ವಂತ ಕಾಲಿನ ಮೇಲೆ ನಿಂತಿದ್ದು ಈಗ ದೈಹಿಕವಾಗಿ ಬಲಗುಂದಿ ಬೇರೆಯವರ ಆಶ್ರಯವನ್ನು ಅವಲಂಬಿಸಬೇಕಾಗಿರುವ ಅವರ ಸಮಸ್ಯೆಗಳು ದೈಹಿಕ, ಹಾಗೂ ಮಾನಸಿಕ ಆಯಾಮಗಳನ್ನು ಹೊಂದಿರುತ್ತವೆ. ಡಾ. ಮಣಿಕರ್ಣಿಕಾ ಅವರು ವೃದ್ಧರು ಎದುರಿಸಬೇಕಾಗಿ ಬರುವ ಕಾಯಿಲೆಗಳು ಮತ್ತು ದೈಹಿಕ ದೌರ್ಬಲ್ಯಗಳನ್ನು ಮತ್ತು ಮಾನಸಿಕ ತೊಂದರೆಗಳನ್ನು ವಿಸ್ತಾರವಾಗಿ ಈ ಕೃತಿಯಲ್ಲಿ ಚರ್ಚಿಸುತ್ತಾರೆ. ವೃದ್ಧರು ಅವುಗಳನ್ನು ಮೀರಿ ಆರೋಗ್ಯ ಹಾಗೂ ಮಾನಸಿಕ ಸ್ವಾಸ್ಥ್ಯಗಳನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗೆಗೆ ಮತ್ತು ಮಕ್ಕಳು ಅವರನ್ನು ನೋಡಿಕೊಳ್ಳಲು ಬೇಕಾದ ಅಗತ್ಯವಾದ ವಿವರಣೆಗಳನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ.

About the Author

ಎಚ್.ಆರ್. ಮಣಿಕರ್ಣಿಕಾ
(09 May 1949)

ವೃತ್ತಿಯಿಂದ ವೈದ್ಯರಾಗಿರುವ ಡಾ. ಎಚ್‌.ಆರ್‌. ಮಣಿಕರ್ಣಿಕಾ ಆರೋಗ್ಯ ಮತ್ತು ವೈದ್ಯವಿಜ್ಞಾನಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. ವನಿತೆಯರ ವ್ಯಾಧಿಗಳು, ಮಹಿಳೆಯರ ಹದಿಹರೆಯದ ಸಮಸ್ಯೆಗಳು ಮತ್ತು ಪರಿಹಾರ, ಅರವತ್ತರ ನಂತರದ ಆರೋಗ್ಯ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books