ಅಸಾಧ್ಯಗಳ ಸಾಧಕ ಥಾಮಸ್ ಆಲ್ವಾ ಎಡಿಸನ್

Author : ನೇಮಿಚಂದ್ರ

Pages 48

₹ 30.00




Year of Publication: 2018
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ , ಬೆಂಗಳೂರು - 560 001
Phone: 080-22161900

Synopsys

‘ಅಸಾಧ್ಯಗಳ ಸಾಧಕ ಥಾಮಸ್ ಆಲ್ವಾ ಎಡಿಸನ್’ ನೇಮಿಚಂದ್ರ ಅವರ ಕೃತಿ. ಥಾಮಸ್ ಆಲ್ವಾ ಎಡಿಸನ್ ಈ ಜಗತ್ತು ಕಂಡ ಅತ್ಯಂತ ಪ್ರಸಿದ್ದ ಉಪಜ್ಞಕ (ಇನ್ವೆಂಟರ್) ಹಾಗೂ ಉದ್ಯಮಿ ! 'ಮೆನ್ಲೋ ಪಾರ್ಕಿನ ಮಾಯಾವಿ' ಎಂದು ಹೆಸರಾಗಿದ್ದ ಎಡಿಸನ್ ಶಾಲೆಯಲ್ಲಿ 'ದಡ್ಡ' ವಿದ್ಯಾರ್ಥಿಯಾಗಿದ್ದ. ಅಮ್ಮನೇ ಗುರುವಾದರು. ಅಗತ್ಯ ಶಿಕ್ಷಣವನ್ನು ನೀಡಿದರು. ಎಡಿಸನ್ 1093 ಏಕಸ್ವಾಮ್ಯಗಳನ್ನು (ಪೇಟೆಂಟ್) ಪಡೆದ. ಎಡಿಸನ್ ಮನುಕುಲ ವಿಕಾಸಕ್ಕೆ ದೂಡ್ಡ ತಿರುವನ್ನು ಕೊಟ್ಟ ಉಪಜ್ಞೆ ಗಳನ್ನು ನೀಡಿದ. ಎಲೆಕ್ಟೋಗ್ರಾಫಿಕ್ ವೋಟ್ ರೆಕಾರ್ಡರ್ : ಮತದಾರರು ಯೆಸ್' ಅಥವಾ 'ನೋ' ಬಟನ್ ಒತ್ತುವುದರ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದಿತ್ತು. ಆಟೋಮ್ಯಾಟಿಕ್ ಟೆಲಿಗ್ರಾಫ್ : ಮಾಹಿತಿಯನ್ನು ನಿಮಿಷಕ್ಕೆ 40 ರಿಂದ 1000 ಶಬ್ದಗಳನ್ನು ಕಳುಹಿಸಲು ಸಾಧ್ಯವಾಗುವ ಈ ಯಂತ್ರದಲ್ಲಿ ಮಾಹಿತಿಯು ತನಗೆ ತಾನೇ ದಾಖಲಾಗುತ್ತಿತ್ತು. ಮತ್ತೊಬ್ಬ ವ್ಯಕ್ತಿ ಬರೆದುಕೊಳ್ಳುವ ಅಗತ್ಯವಿರಲಿಲ್ಲ. ನೋಗ್ರಾಫ್ : ಮೊದಲ ಬಾರಿಗೆ ಮನುಷ್ಯ ತನ್ನ ಮಾತನ್ನು ತಾನೇ ಕೇಳಲು ಸಾಧ್ಯವಾಯಿತು. ಇಂತಹ ಸಾಧನೆಗಳ ಶಿಖರ ಥಾಮಸ್ ಅಲ್ವಾ ಎಡಿಸನ್ ಅವರ ಜೀವನ ಚಿತ್ರಣವನ್ನು ಖ್ಯಾತ ಲೇಖಕಿ ನೇಮಿಚಂದ್ರ ಅವರು ಈ ಕೃತಿಯಲ್ಲಿ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.

About the Author

ನೇಮಿಚಂದ್ರ
(16 July 1959)

ಸ್ತ್ರೀವಾದಿ ಚಿಂತಕಿ, ಸಾಹಿತಿ ನೇಮಿಚಂದ್ರ ಅವರು ಜನಿಸಿದ್ದು 1959 ಜುಲೈ 16ರಂದು ಮೂಲತಃ ಚಿತ್ರದುರ್ಗದವರಾದ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೀವನುತ್ಸಾಹ ತುಂಬುವಂತಹ ಇವರ ಕೃತಿಗಳೆಂದರೆ ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಒಂದು ಶ್ಯಾಮಲ ಸಂಜೆ, ನೇಮಿಚಂದ್ರರ ಕಥೆಗಳು, ಸಾವೇ ಬರುವುದಿದ್ದರೆ ನಾಳೆ ಬಾ!, ನನ್ನ ಕಥೆ ನಮ್ಮ ಕಥೆ, ಯಾದ್ ವಶೇಮ್, ಮಹಿಳಾ ಅಧ್ಯಯನ, ದುಡಿವ ಹಾದಿಯಲಿ ಜೊತೆಯಾಗಿ, ಬೆಳಗೆರೆ ಜಾನಕಮ್ಮ ಬದುಕು-ಬರಹ, ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ಬದುಕು ಬದಲಿಸಬಹುದು, ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ, ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ -4), ಕಾಲುಹಾದಿಯ ಕೋಲ್ಮಿಂಚುಗಳು- ...

READ MORE

Related Books