ಅಸಂಗತ

Author : ಬಸವರಾಜ ನಾಯ್ಕರ

Pages 120

₹ 30.00




Year of Publication: 2002
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಕರ್ನಾಟಕ ಸಾಹಿತ್ಯ ಅಕಾಡೆಮಿ,ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು - 560002

Synopsys

ಅಸಂಗತ ಎಂದರೆ, ಹೊಂದಾಣಿಕೆಯಾಗಲಾರದ್ದು, ಅಸ್ತವ್ಯಸ್ತ ವಾದದ್ದು ಎಂದರ್ಥ. ಅಸಂಗತ ಒಂದು  ಒಂದು ವಾದ ಮಂಡಿಸಿದ್ದು ಜಿನ್ ಪಾಲ್ ಸಾರ್ತ್ರೆ .ವಿಶೇಷವಾಗಿ ಯೂರೋಪಿನಲ್ಲಿ ಉಂಟಾದ ಭೀಕರ ಯುದ್ದಗಳು , ಬರಗಾಲ, ಅಸ್ತಿರವಾದ ರಾಜಕೀಯ ಸ್ಥಿತಿ ಮತ್ತು ಮಾನವ ಸಂಬಂಧಗಳಲ್ಲಿ ಕಾಣಿಸಿಕೊಂಡ ಬಿರುಕುಗಳು ಅಸಂಗತವಾದಕ್ಕೆ ಕಾರಣವಾದ ಅಂಶಗಳು. ಈ ಮೂಲಕ ಅಸಂಗತವಾದ ಸಿದ್ದಾಂತ ಬೆಳೆಯುತ್ತದೆ.

ಅಸಂಗತ ನಾಟಕಗಳಲ್ಲಿ ಪಾತ್ರ, ಸನ್ನಿವೇಶಗಳಿಗೆ ಒಂದಕ್ಕೊಂದು ಸಂಬಂಧವಿಲ್ಲದಂತೆ ರಚನೆಗೊಂಡಿರುತ್ತದೆ. ನಾಟಕಗಳು ಸಹ ಬೆಳೆದು ಮಾನವ ಮತ್ತು ಇತರ ಸಂಬಂಧಗಳ ಬಗೆಗೆ ನಿರೂಪಣೆಗೆ ತೊಡಗಿದವು. ಅಸಂಗತ ಸಾಹಿತ್ಯವು ಅದರಲ್ಲಿಯೂ ವಿಶೇಷವಾಗಿ ನಾಟಕ ರಚನೆಯಿಂದ ಹೆಚ್ಚು ಜನಪ್ರಿಯವಾಯಿತು. ಅಸಂಗತ ಸಾಹಿತ್ಯದ ಪ್ರಮುಖ ಲೇಖಕರಾದ ಜಾನ್ ಪಾಲ್ ಸಾರ್ತ್ರ, ಆಲ್ಬೇರ್‍ ಕಾಮ್ಯು,ಸ್ಯಾಮುಯೆಲ್ ಬೆಕೆಟ್, ಆರ್ಥರ್‍ ಅದಮೊವ್, ಹ್ಯಾರಲ್ದ್ ಪಿಂಟರ್‍ ಮುಂತಾದವರು ತಮ್ಮದಲ್ಲದ ಫ್ರೆಂಚ್ ಭಾಷೆಯಲ್ಲಿ ನಾಟಕ ರಚಿಸಿದರು. ಯುರೋಪಿನಲ್ಲಿ ಜನಪ್ರಿಯವಾಗಿದ್ದ ಅಸಂಗತ ಸಾಹಿತ್ಯ ಭಾರತೀಯರ ಮೇಲೆ ಪ್ರಭಾವ ಬೀರಿತು.

ಇವುಗಳ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ಅಸಂಗತ ಸಾಹಿತ್ಯದ ಪರಂಪರೆ, ಪಶ್ಚಿಮದಲ್ಲಿ ಅಸಂಗತ ಸಾಹಿತ್ಯದ ಉಗಮ, ರಚನೆ, ಪೂರ್ವ ಯುರೋಪಿನ ದೇಶಗಳಲ್ಲಿ ಅಸಂಗತ ನಾಟಕ, ಕನ್ನಡದಲ್ಲಿ ಅಸಂಗತ ನಾಟಕ, ಇವುಗಳ ಸಂಕ್ಷಿಪ್ತ ಮಾಹಿತಿಯನ್ನು ಡಾ. ಬಸವರಾಜ ನಾಯ್ಕರ ಅವರು ಸಾಹಿತ್ಯ ಪಾರಿಭಾಷಿಕ ಮಾಲೆಯಡಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ.

About the Author

ಬಸವರಾಜ ನಾಯ್ಕರ
(01 August 1949)

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು.  ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು.  ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...

READ MORE

Related Books