ಅಶಿಸ್ತಿನಿಂದ ಬದುಕಿರಿ, ಆರೋಗ್ಯವಾಗಿರಿ

Author : ನೆಲ್ಲೀಕೆರೆ ವಿಜಯಕುಮಾರ್

Pages 184

₹ 150.00
Year of Publication: 2015
Published by: ಸುಮ್‍ ಸುಮ್ನೆ ಪ್ರಕಾಶನ,
Address: ನೊಣವಿನಕೆರೆ, ತಿಪಟೂರು ತಾಲ್ಲೂಕು, ಜಿಲ್ಲೆ ತುಮಕೂರು

Synopsys

ಗುರೂಜಿ ಶ್ರೀ ಋಷಿ ಪ್ರಭಾಕರ ಅವರ ವಿಚಾರಗಳನ್ನು ಲೇಖಕ ನೆಲ್ಲೀಕೆರೆ ವಿಜಯಕುಮಾರ್ ಅವರು ಬರಹಕ್ಕಿಳಿಸಿದ ಕೃತಿ-ಅಶಿಸ್ತಿನಿಂದ ಬದುಕಿರಿ. ಶಿಸ್ತುಬದ್ಧ ಜೀವನಕ್ಕೊಂದು ಗುಡ್ ಬೈ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಅಶಿಸ್ತಿನಿಂದ ಬದುಕಿರಿ ಎಂದರೆ ನಿಮಗೆ ತಿಳಿದ ಹಾಗೆ ಬದುಕಿರಿ ಎಂದರ್ಥ. ಬದುಕನ್ನು ಗಂಭೀರವಾಗಿ ಸ್ವೀಕರಿಸಿ ನಾವೇ ಸಮಸ್ಯೆಗಳನ್ನು ಆಹ್ವಾನಿಕೊಂಡು ಒದ್ದಾಡುವುದಕ್ಕಿಂತ ಸರಳವಾಗಿ ಬದುಕನ್ನು ಹೇಗಿದೆಯೋ ಹಾಗೆ ಸ್ವೀಕರಿಸಲು ಕಲಿಯಬೇಕು ಎಂಬರ್ಥದಲ್ಲಿ ಉಪಯೋಗಿಸಲಾಗಿದೆ. ಹತಾಶೆಯ, ನಿರಾಶೆಯ ಬದುಕಿಗೊಂದು ಪ್ರೇರಣಾತ್ಮಕ ನುಡಿ-ಸಲಹೆಗಳಿರುವ ಕೃತಿ ಇದು.

About the Author

ನೆಲ್ಲೀಕೆರೆ ವಿಜಯಕುಮಾರ್

ನೆಲ್ಲೀಕೆರೆ ವಿಜಯಕುಮಾರ್ ಅವರು ಲೇಖಕರು. ಕಿರುಚಿತ್ರ ಸಂಭಾಷಣೆ ಬರಹಗಾರರು. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ವಾವಿದ್ದಾರೆ. ಸುಮ್ ಸುಮ್ನೆ ಪ್ರಕಾಶನವನ್ನು ಸ್ಥಾಪಿಸಿದ್ದಾರೆ.  ಕೃತಿಗಳು: ಸುಮ್ಮನಿರಬಾರದೆ?, ನಿರ್ಧರಿಸದಿರು ನಿಲ್ಲು ಮನವೇ...!, ಅಶಿಸ್ತಿನಿಂದ ಬದುಕಿರಿ: ಆರೋಗ್ಯವಾಗಿರಿ, ಅರ್ಥX ಪಾದ X ಎತ್ತರ. ...

READ MORE

Related Books