ಅಶ್ಲೀಲ ಕನ್ನಡಿ

Author : ವಿ.ಆರ್. ಕಾರ್ಪೆಂಟರ್

Pages 108

₹ 99.00
Year of Publication: 2014
Published by: ದರ್ವೇಶ್ ಚೌಕಿ
Address: ನಂ.389 , 2ನೇ ಮುಖ್ಯರಸ್ತೆ, ಜನತಾಲೇಔಟ್, ವೆಂಕಟಾಲ, ಯಲಹಂಕ, ಬೆಂಗಳೂರು- 560064
Phone: 9019651552

Synopsys

ವಿ.ಆರ್. ಕಾರ್ಪೆಂಟರ್ ಅವರ ಪದ್ಯಗಳ ಸಂಕಲನ ಅಶ್ಲೀಲ ಕನ್ನಡಿ- ‘ಇಂಧನ ಕೇಳದ ವಾಹನ, ಬಂಧೂಕು, ಬಂಧನವಿರದ ನಾಡು, ಮಾಲೀಕನೂ, ಮಾಲಿಯೂ ಕೂಡಿ ಕಳೆಯುವ ನೆಲದ ನಿರಂತರ ಹುಡುಕಾಟದಲ್ಲಿರುವ ಕವಿ, ಕಾಲದ ತಲ್ಲಣಗಳನ್ನು ಬರ್ಫಿನಷ್ಟು ತಣ್ಣಗೆ ಬಣ್ಣಿಸುತ್ತಲೇ ಕೂರಂಬು ತೂರಿ ಸಾಂಪ್ರದಾಯಿಕ ಕಾವ್ಯದ ಕಟ್ಟಲೆಗಳೆಲ್ಲವನ್ನೂ ಕುಟ್ಟಿ ಕೆಡವಿ ಗಟ್ಟಿ ಸೌಧ ಕಟ್ಟುವ ಕುಶಲ ಕಾರ್ಪೆಂಟರ್ ಮಕ್ಕಳಾಟವೆಂದರೆ ಹುಡುಗಾಟವಲ್ಲ ಎನ್ನುವ ತುಂಟ’ ಎನ್ನುತ್ತಾರೆ ವಿಠ್ಠಲ ದಳವಾಯಿ.

ಚಕ್ಕಳ ಮಕ್ಕಳ ಹಾಕಿ ಕೂತು ಜಗದ ದುಗುಡಭರಿತ ಮೊಗಗಳಲಿ ನಗು ತೂಗಲೆಳಸುವ ಪ್ರವೀಣ ಪ್ರಿಯತಮೆಯ ಧ್ಯಾನ, ಪಾಖಂಡಿಗಳ ಹನನದಲಿ ಸದಾ ಸಮಾನ ಶ್ರದ್ಧೆಯಿಂದ ತಲ್ಲೀನ. ಶತಮಾನಗಳಲಿಂದ ಕಿಚ್ಚಿಲ್ಲದ ಬೇಗೆಯಲ್ಲಿ ಮುಚ್ಚಟೆಯಾಗಿ ಬಾಳಿದ ಭಾರತವ್ವ ನಿಗಿನಿಗಿ ಕೆಂಡಕ್ಕೆ ಕಾಯ್ದು ಕಳೆಯಬಯಸುವಳು ಮುಖದ ಸುಕ್ಕು ಈ ಬಂಡುಕೋರನಿಗೆ ಯಾಯಾತಿಯ ಯೌವ್ವನದ ಉಕ್ಕು ‘ಬದುಕಿನ ತಿರುವಲ್ಲಿ ಎಡವಿ ಸತ್ತವರು ನನಗೆ ಬದುಕಿನ ತಿಳಿವು ಹೇಳುತ್ತಿದ್ದಾರೆ’ ಎನ್ನುವ ವಿನಯವಂತ ಕವಿ ಕಾರ್ಪೆಂಟರ್. ಅವರ ಪದ್ಯ ಸಂಕಲನವಾದ ಈ ಕೃತಿ ಕನ್ನಡ ಕಾವ್ಯದ ಹೊಸ ಚರಣ ಎನ್ನಬಹುದು. 

About the Author

ವಿ.ಆರ್. ಕಾರ್ಪೆಂಟರ್
(28 May 1981)

ವಿ. ಆರ್. ಕಾರ್ಪೆಂಟರ್ ಯಲಹಂಕ ಸಮೀಪದ ವೆಂಕಟಾಲದಲ್ಲಿ 1981ರಲ್ಲಿ ಜನಿಸಿದರು. ಅವರ ಮೂಲ ಹೆಸರು- ನರಸಿಂಹಮೂರ್ತಿ ವಿ.ಆರ್. ತಂದೆ ರಾಮಯ್ಯ, ತಾಯಿ-ಸಿದ್ದಗಂಗಮ್ಮ. 9ನೇ ತರಗತಿಯವರೆಗೆ ವೆಂಕಟಾಲ ಮತ್ತು ಯಲಹಂಕದಲ್ಲಿ ವಿದ್ಯಾಭ್ಯಾಸ ಮಾಡಿ, ನಂತರ ಸುಮಾರು ಹದಿನೈದು ವರ್ಷಗಳ ಕಾಲ ಬಡಗಿ ವೃತ್ತಿ. ಅದರ ನಡುವೆಯೇ ಲಂಕೇಶ್ ಪತ್ರಿಕೆಯ ಪ್ರಭಾವದಿಂದ ಸಾಹಿತ್ಯ ಲೋಕಕ್ಕೆ ಬಂದ ಅವರು ಒಂದಷ್ಟು ಕಾಲ ಕನ್ನಡ ಟೈಮ್ಸ್ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಸಿಗ್ನಲ್ ಟವರ್, ಐದನೇ ಗೋಡೆಯ ಚಿತ್ರಗಳು, ಕಾರ್ಪೆಂಟರ್ ಪದ್ಯಗಳು (ಕವನ ಸಂಕಲನ), ಅಪ್ಪನ ಪ್ರೇಯಸಿ ಮತ್ತು ನೀಲಿಗ್ರಾಮ (ಕಾದಂಬರಿಗಳು) ಪ್ರಕಟವಾಗಿವೆ. ಕಾರ್ಪೆಂಟರ್ ...

READ MORE

Related Books