ಅಸ್ಪೃಶ್ಯ

Author : ಡಿ.ಎ. ಶಂಕರ್

Pages 150

₹ 170.00




Year of Publication: 2021
Published by: ಚಿಂತನ ಚಿತ್ತಾರ
Address: #2, ಮುಡಾ ಕಾಂಪ್ಲೆಕ್ಸ್, ಐ ಬ್ಲಾಕ್, ರಾಮಕೃಷ್ಣನಗರ ಚದುರಂಗ ರಸ್ತೆ, ಆಂದೋಲನ ಸರ್ಕಲ್ ಹತ್ತಿರ ಮೈಸೂರು- 570022

Synopsys

‘ಅಸ್ಪೃಶ್ಯ’ ಕೃತಿಯು ಮುಲ್ಕ್ ರಾಜ್ ಆನಂದ್ ಅವರ ಕಾದಂಬರಿಯಾಗಿದ್ದು, ಡಿ. ಎ ಶಂಕರ್ ಅವರು ಕನ್ನಡಕ್ಕೆ ಅನುವಾದಗೊಳಿಸಿದ್ದಾರೆ. ಈ ಕೃತಿಯು ಕೇವಲ ಕನ್ನಡ ಜನರ ಅಥವಾ ಭಾರತೀಯರ ಪ್ರಜ್ಞೆಯನ್ನು ಮಾತ್ರ ಜಾಗೃತಗೊಳಿಸದೇ ಇಡೀ ವಿಶ್ವದಲ್ಲೇ ಎಲ್ಲ ತಳಸಮುದಾಯದ ಬಗ್ಗೆ ಹೊಸತೊಂದು ಮಾನವೀಯ ಹರಿವನ್ನು ಸೃಷ್ಟಿಸಿ, ವಿಶ್ವಸಾಹಿತ್ಯಕ್ಕೆ ಒಂದು ಅಪೂರ್ವ ಕಾಣಿಕೆಯಾಗಿದೆ. ಗಾಂಧೀಜಿಯವರು ಕಾದಂಬರಿಯನ್ನು ಹಸ್ತಪ್ರತಿಯಲ್ಲಿ ಓದಿಸಿ ಕೇಳಿದ್ದು, ಅದರ ಸಂಸ್ಕರಣೆಯಲ್ಲಿ ಸಹಾಯಕರಾದದ್ದು, ಅನಂತರ ಇದು ವಿಶ್ವದ ಇಪ್ಪತ್ತು ಪ್ರಮುಖ ಭಾಷೆಗಳಲ್ಲಿ ಬೆಳಕು ಕಂಡಿದ್ದು- ಈ ಎಲ್ಲ ಸಾಹಿತ್ಯದ ಇತಿಹಾಸಕ್ಕೆ ಸಂಬಂಧಿಸಿದ ಸಂಗತಿಗಳು. ಅಸ್ಪೃಶ್ಯ ಹುಡುಗನೊಬ್ಬನ ಎಚ್ಚರದ ಕಣ್ಣಿನಿಂದ ನಮ್ಮ ಜಾತಿ ವ್ಯವಸ್ಥೆಯ ಅಮಾನವೀಯತೆಯನ್ನು ನಿಷ್ಟುರವಾಗಿ ಬಯಲು ಮಾಡುವಂತಹ ಬರಹವನ್ನು ಈ ಕೃತಿ ಒಳಗೊಂಡಿದೆ. ಇಂದಿನ ಇಡೀ ಭಾರತದ ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿಯ ಯಥಾವತ್ತಾದ ಪ್ರತಿಬಿಂಬ ಮತ್ತೆ ಅದರ ಮೇಲಣ ಮಾನವೀಯ ಭಾಷ್ಯವೆಂದು ಲೇಖಕರು ಈ ಕೃತಿಯನ್ನು ಕರೆದಿದ್ದಾರೆ.

About the Author

ಡಿ.ಎ. ಶಂಕರ್

ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಡಿ.ಎ. ಶಂಕರ ಅವರು ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ.  ನಂತರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ಅವರು ಮೈಸೂರು ವಿಶ್ವವಿದ್ಯಾನಿಲಯದ ಮೊದಲ ಎಮರಿಟಸ್ ಪ್ರೊಫೆಸರ್ ಆದವರು. ಕಾವ್ಯ, ಅನುವಾದ, ವಿಮರ್ಶೆ ಹಾಗೂ ನಾಟಕ ಹೀಗೆ ವಿವಿಧ ಪ್ರಕಾರಗಳಲ್ಲಿ ಶಂಕರ್ ಅವರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇಂಗ್ಲೆಂಡ್‌ನ ಫೀಲ್ಡ್ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಪಡೆದ ಅವರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿಯ ಫೆಲೋ ಆಗಿದ್ದರು. ಹಾಗೆಯೇ, ಕೆನಡಾದ ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಫ್ಯಾಕಲ್ಟಿ ಫೆಲೋಶಿಪ್‌ನಲ್ಲಿ ಕಾರ್ಯನಿರ್ವಹಿಸಿದ್ದವರು. ಬೆಳಕಿನ ಮರ, ನಿಮ್ಮಲ್ಲೊಬ್ಬ, ಪವಾಡ  ಅವರ ...

READ MORE

Related Books