ಅಥೆನ್ಸ್‌ನ ಅರ್ಥವಂತ

Author : ಕೆ.ವಿ. ಸುಬ್ಬಣ್ಣ

Pages 106

₹ 140.00




Year of Publication: 1994
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 57741
Phone: 9480280401

Synopsys

ಲೇಖಕ ಕೆ.ವಿ. ಸುಬ್ಬಣ್ಣ ಅವರು ಶೇಕ್ಸ್‌ಪಿಯರ್‌ನ ʼತೈಮೊನ್‌ ಆಫ್‌ ಅಥೆನ್ಸ್‌ʼ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ಧಾರೆ. ನಾಟಕವು ಹಣ ಹಾಗೂ ಅದು ಜನರನ್ನು ಹೇಗೆಲ್ಲಾ ಆಟವಾಡಿಸುತ್ತದೆ ಎನ್ನುವುದನ್ನು ಹೇಳುತ್ತದೆ. ಹಾಗಾಗಿ ಇಲ್ಲಿ ಹಣವೇ ಪಾತ್ರಧಾರಿಗಳನ್ನು ಕುಣಿಸುವುದು ವಿಶೇಷವಾಗಿದೆ. ಶೇಕ್ಸ್‌ಪಿಯರ್‌ ನಾಟಕವನ್ನು ಬರೆದ ಸಮಯದಲ್ಲೇ ಇಂಗ್ಲೆಂಡಿನಲ್ಲಿ ಎಲಿಜಬೆತ್‌ ರಾಣಿಯ ಆಳ್ವಿಕೆ ಮುಗಿದು ಹೊಸ ಉತ್ತರಾಧಿಕಾರಿ ಅಧಿಕಾರಕ್ಕೆ ಬಂದಿದ್ದ. ಆದರೆ ಆತನ ಐಷಾರಾಮಿ ಜೀವನ ಹಾಗೂ ಅಂತಸ್ತು ಆತನಲ್ಲಿ ಹಳದಿ ಲೋಹದ ಮೇಲೆ ಅತಿಯಾದ ವ್ಯಾಮೋಹ ಹುಟ್ಟಲು ಕಾರಣವಾಯಿತು. ಇದು ಶೇಕ್ಸ್‌ಪಿಯರ್‌ ನಾಟಕದಲ್ಲಿ ಕಥಾವಿಷಯವಾಗಿರುವುದನ್ನು ಕಾಣಬಹುದು. ಕಾರ್ಲ್ ಮಾರ್ಕ್ಸ್, ತನ್ನ ‘ಕ್ಯಾಪಿಟಲ್’ ಗ್ರಂಥದಲ್ತ ‘ಹಳದಿ ಲೋಹ’ದ ಬಗ್ಗೆ ಶೇಕ್‍ಸ್ಪಿಯರನ ನಾಟಕದ ಮಾತುಗಳನ್ನು ಸೂಚಿಸಿದ್ದಾನೆ.

About the Author

ಕೆ.ವಿ. ಸುಬ್ಬಣ್ಣ
(20 February 1931)

ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...

READ MORE

Related Books